
ಟಾಲಿವುಡ್‌ನಲ್ಲಿ ಒಂದಾದ ಮೇಲೊಂದು ಸಿನಿಮಾ ಕಾರ್ಯಕ್ರಮಗಳು ಭರ್ಜರಿಯಾಗಿ ಶುರುವಾಗಿವೆ. ಇತ್ತೀಚಿಗೆ ನಡೆದ 'ಈಶ್ವರನ್' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ನಡೆದ ಘಟನೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಇದಕ್ಕೆ ಕಾರಣವೇ ನಟಿ ನಿಧಿ ಅಗರ್ವಾಲ್ ಹೊಂದಿರುವ ಅಪಾರ ಸಂಖ್ಯೆಯ ಅಭಿಮಾನಿಗಳು..
ನೆಪೊಟಿಸಂ ಇರೋದು ನಿಜ ಎಂದ ತೆಲುಗು ಬೆಡಗಿ ನಿಧಿ ಅಗರ್ವಾಲ್..!
ನಟಿ ನಿಧಿ ಅಗರ್ವಾಲ್ ಹಾಗೂ ಸಿಂಬು ಅಭಿನಯದ ಈಶ್ವರನ್ ಸಿನಿಮಾ ಆಡಿಯೋ ಕಾರ್ಯಕ್ರಮದಲ್ಲಿ ನಿಧಿ ಅಭಿಮಾನಿಗಳ ಜೊತೆ ಮಾತನಾಡಲು ಮೈಕ್‌ಗಳ ಮುಂದೆ ಬಂದು ನಿಂತಿದ್ದಾರೆ. ಆಗ ತಕ್ಷಣವೇ ಪಕ್ಕಕ್ಕೆ ನಿರ್ದೇಶಕ ಸುಸೀಂದ್ರನ್ ನಿಂತು ಪ್ರತಿ ಮಾತಿಗೂ, ಟಾಂಗ್ ಕೊಡುತ್ತಾ ಹೀಗೆ ಮಾತನಾಡಬೇಕು, ಹಾಗೆ ಮಾತನಾಡಬೇಕು ಅಂತ ಪುಕ್ಕಟೆ ಸಲಹೆ ನೀಡಿದ್ದಾರೆ.
ನಿಧಿ ಮಾತು ಆರಂಭಿಸಿದಾಗ ಸುಸೀಂದ್ರನ್ ಸಿಂಬು ಬಗ್ಗೆ ಮಾತನಾಡು ಎಂದು ಒತ್ತಾಯಿಸಿದ್ದಾರೆ.ನಿಧಿ ಮಾತನಾಡುತ್ತೇನೆ ಎಂದು ಹೇಳಿದರು, ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತಿದ್ದರೆ, ಮಾತನ್ನು ಅರ್ಧಕ್ಕೇ ನಿಲ್ಲಿಸಿ 'ನನ್ನ ಬಗ್ಗೆ ಮಾತನಾಡಿದರೆ ಜನರು ಕೇಳುವುದಿಲ್ಲ, ಸಿಂಬು ಮಾಮಾನ ಬಗ್ಗೆ ಮಾತನಾಡು. ಐ ಲವ್ ಯೂ ಸಿಂಬು ಅಂತ ಹೇಳು,' ಎಂದು ನಿರ್ದೇಶಕ ವೇದಿಕೆಯೇ ಮೇಲೆಯೇ ಅನುಚಿತವಾಗಿ ವರ್ತಿಸಿದ್ದಾರೆ.
ಇದೇನಿದು ಪ್ಯಾಂಟ್ ಜಿಪ್ ಹಾಕೋದೇ ಮರೆತ್ರಾ ನಿಧಿ ಅಗರ್ವಾಲ್ ?
ಈ ವಿಡಿಯೋವನ್ನು ನಿಧಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ನಿರ್ದೇಶಕನ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಹೆಣ್ಣು ಮಕ್ಕಳ ಜೊತೆ ವೇದಿಕೆ ಮೇಲೆ ಹೇಗಿರಬೇಕೆಂದು ಹೇಳಿಕೊಡಬೇಕಾ? ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.