ಮದುವೆ ವಿವಾದ ಬೆನ್ನಲ್ಲೇ ಮೊನಾಲಿಸಾ ಸಿನಿಮಾ ರದ್ದು, ಕಿರುಕುಳ ಆರೋಪದ ಅಸಲಿ ಕತೆ ಬಹಿರಂಗ

Published : Mar 27, 2026, 07:30 PM IST
Sanoj Mishra Monalisa

ಸಾರಾಂಶ

ಮದುವೆ ವಿವಾದ ಬೆನ್ನಲ್ಲೇ ಮೊನಾಲಿಸಾ ಸಿನಿಮಾ ರದ್ದು, ಕಿರುಕುಳ ಆರೋಪದ ಅಸಲಿ ಕತೆ ಬಹಿರಂಗವಾಗಿದೆ. ನಿರ್ದೇಶಕ ಸನೋಜ್ ಮಿಶ್ರಾ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಮದುವೆ ಬೆನ್ನಲ್ಲೇ ಕುಂಭ ವೈರಲ್ ಗರ್ಲ್ ಸಂಕಷ್ಟ ಹೆಚ್ಚಾಗುತ್ತಿದೆ.

ಮುಂಬೈ(ಮಾ.27) ಮಹಾಕುಂಭಮೇಳದ ಮೂಲಕ ವೈರಲ್ ಆದಿ ಮೊನಾಲಿಸಾ ಬಳಿಕ ಹಲವು ಕಾರ್ಯಕ್ರಮಗಳ ಮೂಲಕ ಸದ್ದು ಮಾಡಿದ್ದರು. ಅಷ್ಟೇ ವೇಗದಲ್ಲಿ ನಾಯಕಿಯಾಗಿ ಸಿನಿಮಾದಲ್ಲೂ ಅವಕಾಶ ಪಡೆದು ಮಿಂಚಿದರು. ಸಿನಿಮಾ ಶೂಟಿಂಗ್ ನಡುವೆ ಮೊನಾಲಿಸಾ ಮುಸ್ಲಿಮ್ ಯುವಕನ ಜೊತೆ ಮದುವೆಯಾಗಿ ಭಾರಿ ವಿವಾದ ಸೃಷ್ಟಿಸಿದ್ದಾರೆ. ಮೊನಾಲಿಸಾ ಪೋಷಕರೇ ಇದು ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ. ಆದರೆ ವಿರೋಧಗಳ ನಡುವೆ ಮದುವೆಯಾದ ಮೊನಾಲಿಸಾ, ತನ್ನನ್ನು ನಾಯಕಿಯಾಗಿ ಮಾಡಿದ ಡೈರ ಆಫ್ ಮಣಿಪುರ್್ ನಿರ್ದೇಶಕನ ವಿರುದ್ಧವೇ ಕಿರುಕುಳ ಆರೋಪ ಮಾಡಿದ್ದರು. ಇದೀಗ ನಿರ್ದೇಶಕ ಸನೋಜ್ ಮಿಶ್ರಾ ಈ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲ ಮೊನಾಲಿಸಾ ನಾಯಕಿಯಾದ ಸಿನಿಮಾ ಅರ್ಧಕ್ಕೆ ಕೈಬಿಟ್ಟಿದ್ದಾರೆ.

ಮುಸ್ಲಿಮ್ ಯುವಕನ ಜೊತೆ ಓಡಿ ಹೋಗಿ ಕೇರಳದಲ್ಲಿ ಮದುವೆಯಾದ ಮೊನಾಲಿಸಾ ಬಳಿಕ ಡೈರಿ ಆಫ ಮಣಿಪುರ ಸಿನಿಮಾ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದಳು. ಶೂಟಿಂಗ್ ಸೆಟ್‌ನಲ್ಲಿ ತನಗೆ ಕಿರುಕುಳ ನೀಡಲಾಗಿದೆ. ತನ್ನ ಪೋಷಕರು ಸಹಕರಿಸು ಎಂದಿದ್ಧರು ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ನಿರ್ದೇಶಕ ಸನೋಜ್ ಮಿಶ್ರಾ, ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಓಡಿ ಹೋಗಿ ಮದುವೆ ವಿರೋಧಿಸಿದ್ದ ಸನೋಜ್ ಮಿಶ್ರಾ

ಮೊನಾಲಿಸಾ ನನ್ನ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಕಾರಣ ನಾನು ಆಕೆಯ ಇಚ್ಚೆಗೆ ವಿರುದ್ಧವಾಗಿದ್ದೆ. ಆಕೆಯ ಪೋಷಕರು, ಮೊನಾಲಿಸಾ ಸೇರಿದಂತೆ ಆಪ್ತ ಕುಟುಂಬರುು ಶೂಟಿಂಗ್ ಸೆಟ್‌ನಲ್ಲಿದ್ದರು. ಅವೆರಲ್ಲರು ನಮ್ಮ ಮನೆಯಲ್ಲೇ ತಂಗಿದ್ದರು. ನಾನು ಯಾವುದೇ ರೀತಿಯಲ್ಲಿ ಕಿರುಕುಳ ನೀಡಿದ್ದರೆ, ಅವರ ಕುಟುಂಬಸ್ಥರು, ಪೋಷಕರು ಅಥವಾ ಪೊಲೀಸರಿಗೆ ಹೇಳಬಹುದಿತ್ತು. ಹಾಗೆ ಮಾಡಿಲ್ಲ. ಇದೀಗ ಮದುವೆಯಾಗಿ ಆರೋಪ ಮಾಡುತ್ತಿದ್ದಾರೆ. ಆಕೆಯ ಈ ಮದುವೆಯನ್ನು ಮೊನಾಲಿಸಾ ಪೋಷಕರಂತೆ ನಾನು ವಿರೋಧಿಸಿದ್ದೆ. ಇದೇ ಕಾರಣಕ್ಕೆ ನನ್ನ ಮೇಲೆ ಆರೋಪ ಮಾಡಿದ್ದಾರೆ. ಸಿನಿಮಾ ಕರಿಯರ್ ಬಗ್ಗೆ ಫೋಕಸ ಮಾಡಲು ಸೂಚಿಸಿದ್ದೆ. ಆದರೆ ಪ್ರೀತಿ ಪ್ರೇಮ ಎಂದು ಗೌರವಯುತವಾಗಿ ನಡೆದುಕೊಳ್ಳಲಿಲ್ಲ ಎಂದು ಸನೋಜ್ ಮಿಶ್ರಾ ಹೇಳಿದ್ದಾರೆ. ಆಕೆಯ ವಿರುದ್ಧ ನಿಂತ ಕಾರಣ ಈ ಆರೋಪ ಮಾಡಿದ್ದಾಳೆ. ಈಗಲೂ ಆಕೆ ದೂರು ನೀಡಿ ಕಾನೂನು ಹೋರಾಟ ಮಾಡಲು ಮುಕ್ತವಾಗಿದ್ಧಾಳೆ ಎಂದಿದ್ದಾರೆ.

ಡೈರಿ ಆಫ್ ಮಣಿಪುರ ಸಿನಿಮಾ ರದ್ದು

ಡೈರಿ ಆಫ್ ಮಣಿಪುರ ಸಿನಿಮಾ ಸನೋಜ್ ಮಿಶ್ರಾ ಅವರ ಬಹುನಿರೀಕ್ಷಿತ ಸಿನಿಮಾ. ಮೊನಾಲಿಸಾ ಜನಪ್ರಿಯತೆ ಬೆನ್ನಲ್ಲೇ ನಾಯಕಿಯಾಗಿ ಆಯ್ಕೆ ಮಾಡಿ ಆಕೆಗೆ ನಟನೆ, ಡೈಲಾಗ್ ಸೇರಿದಂತೆ ಸಿನಿಮಾದ ಪ್ರತಿ ಸೀನ್ ತರಬೇತಿ ನೀಡಲಾಗಿತ್ತು. ಇದೀಗ ಮೊನಾಲಿಸಾ ಗಂಭೀರ ಆರೋಪ ಮಾಡಿ ದೂರವಾಗಿರುವ ಕಾರಣ ಡೈರಿ ಆಫ್ ಮಣಿಪುರ ಸಿನಿಮಾ ಪ್ರಾಜೆಕ್ಟ್ ಕೈಬಿಡುವುದಾಗಿ ಹೇಳಿದ್ದಾರೆ. ಈ ಮೂಲಕ ಮೊನಾಲಿಸಾ ಸಿನಿಮಾ ಕರಿಯರ್ ಬಹುತೇಕ ಅಂತ್ಯವಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನಗೆ ಗಂಡಸಿನ ಅಗತ್ಯವಿಲ್ಲ: ನನ್ನ ಡೇಟಿಂಗ್ ಸುದ್ದಿ ಬಗ್ಗೆ 23ರ ಮಗ ಹೀಗೆ ರಿಯಾಕ್ಟ್ ಮಾಡ್ತಾನೆ ಎಂದ ಮಲೈಕಾ ಅರೋರಾ!
ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹೊಸ ಇನ್ನಿಂಗ್ಸ್‌; ಮತ್ತೊಂದು ಭಾಷೆಯ ಚಿತ್ರರಂಗಕ್ಕೂ ಅಚ್ಚರಿಯ ಎಂಟ್ರಿ!