Happy anniversary ಪ್ರಶಾಂತ್‌ ನೀಲ್‌: ಹೆಂಡ್ತಿ ಅಂದ್ರೆ ಈಗ್ಲೂ ನಾಚ್ಕೊಳ್ತಾರೆ ಕೆಜಿಎಫ್ ಡೈರೆಕ್ಟ್ರು!

Published : May 06, 2022, 12:41 PM IST
Happy anniversary ಪ್ರಶಾಂತ್‌ ನೀಲ್‌: ಹೆಂಡ್ತಿ ಅಂದ್ರೆ ಈಗ್ಲೂ ನಾಚ್ಕೊಳ್ತಾರೆ ಕೆಜಿಎಫ್ ಡೈರೆಕ್ಟ್ರು!

ಸಾರಾಂಶ

ಸಿನಿಮಾದಲ್ಲಿ ಎಂಥಾ ಆಕ್ಷನ್ ಸೀಕ್ವೆನ್ಸ್ ಆದ್ರೂ ಡೈರೆಕ್ಟ್ ಮಾಡಬಲ್ಲೆ, ಆದರೆ ರೊಮ್ಯಾಂಟಿಕ್ ಸೀನ್ ಅಂದ್ರೆ ಬೆವರು ಕಿತ್ಕೊಳುತ್ತೆ ಅನ್ನೋ ಪ್ರಶಾಂತ್ ನೀಲ್‌ ಹಾಗೂ ಲಿಖಿತಾ ಅವರಿಗೆ ನಿನ್ನೆ ಹ್ಯಾಪಿ ಆನಿವರ್ಸರಿ. ಇವತ್ತು ಸೆಲೆಬ್ರೇಶನ್. ಹೆಂಡ್ತಿ ಅಂದ್ರೆ ಈಗಲೂ ನಾಚ್ಕೊಳ್ಳೋ ಕೆಜಿಎಫ್ ಡೈರೆಕ್ಟ್ರ ಮ್ಯಾರೇಜ್ ಸ್ಟೋರಿ.

ಪ್ರಶಾಂತ್ ನೀಲ್ (Prashanth Neel)  ಎಂಬ ವ್ಯಕ್ತಿ ಇದೀಗ ಕೆಜಿಎಫ್ 2 (KGF 2) ಅನ್ನೋ ಸೂಪರ್‌ ಹಿಟ್ ಸಿನಿಮಾ ಮಾಡಿ ಇಂಟರ್‌ನ್ಯಾಶನಲ್ ಲೆವೆಲ್‌ಗೆ ಬೆಳೆದಿರಬಹುದು, ಆದರೆ ಮದುವೆ ಆಗುವಾಗ ಅವರು ಎಂಬಿಎ ಡ್ರಾಪ್‌ ಔಟ್ (MBA dropout). ಕೆಲಸ ಇಲ್ಲದೆ ಟೈಮ್‌ ವೇಸ್ಟ್‌ ಮಾಡುತ್ತಿದ್ದ ನಿರುದ್ಯೋಗಿ. ಸಂಕೋಚದ ಮುದ್ದೆಯಂತಿದ್ದ ಮೌನಿ ಹುಡುಗನನ್ನು ಮೊದಲ ನೋಟಕ್ಕೆ ಇಷ್ಟಪಟ್ಟವರು ಲಿಖಿತಾ (Likhita Reddy). ಪ್ರಶಾಂತ್ ನೀಲ್ ಓದಿದ್ದು ಬೆಂಗಳೂರಿನ ಬಾಲ್ಡ್‌ವಿನ್‌ ಬಾಯ್ಸ್‌ ಸ್ಕೂಲ್‌ನಲ್ಲಿ (Boldwin Boys School). ನಿಖಿತಾ ಓದಿದ್ದು ಬಾಲ್ಡ್‌ವಿನ್ ಗರ್ಲ್ಸ್ ಸ್ಕೂಲ್‌ನಲ್ಲಿ. ಮುಂದೆ ಪ್ರಶಾಂತ್ ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿಯುಸಿ ಮಾಡ್ತಾರೆ. ಬಿಬಿಎಂ ಮಾಡಿ ಎಂಬಿಎ ಮಾಡಬೇಕು ಅಂತ ಹೊರಟವರು ಯಾಕೋ ಇಷ್ಟವಾಗದೇ ಎಂಬಿಎ ಅರ್ಧಕ್ಕೇ ಬಿಟ್ಟು ಹೊರಬರ್ತಾರೆ. ಮುಂದೆ ಒಂದಿಷ್ಟು ಟೈಮ್‌ ರೇಸ್‌ಕೋರ್ಸ್‌ನಲ್ಲಿ ರೇಸ್‌ ಆಡೋದ್ರಲ್ಲಿ ಕಳೆದುಹೋಗುತ್ತೆ. ಒಂದಿನ ಇದ್ರಲ್ಲೂ ಬೇಜಾರು ಬಂದು ಸಿನಿಮಾ ಮಾಡ್ತೀನಿ ಅಂತ ಹೊರಡ್ತಾರೆ. ಪ್ರಶಾಂತ್ ನೀಲ್ ಅವರ ಸೋದರಿ ವಿದ್ಯಾ(Vidya Murali) ಮದುವೆ ಆಗಿದ್ದು ನಟ ಶ್ರೀಮುರಳಿ(Srimurali) ಅವರನ್ನು. ನೀಲ್‌ ಸಿನಿಮಾ ಕೆರಿಯರ್ ಶುರು ಮಾಡಿದ್ದೇ ಶ್ರೀಮುರಳಿ ಸಿನಿಮಾ ಮೂಲಕ. ಶ್ರೀಮುರಳಿ ಮತ್ತು ನೀಲ್ ಬಾವ ಬಾಮೈದ ಅನ್ನೋಕ್ಕಿಂತಲೂ ಹೆಚ್ಚು ಆತ್ಮೀಯರು.

ಹೀಗೆ ಪ್ರಶಾಂತ್ ನೀಲ್ ಶ್ರೀ ಮುರಳಿಗಾಗಿ ಸಿನಿಮಾ ಮಾಡುವ ತಯಾರಿಯಲ್ಲಿದ್ದಾಗ ಪ್ರಶಾಂತ್ ನೀಲ್‌ನ ಲಿಖಿತಾ ಭೇಟಿ ಮಾಡ್ತಾರೆ. ಬಾಯ್ಸ್‌ ಸ್ಕೂಲ್‌ನಲ್ಲಿ ಓದಿದ್ದಕ್ಕೋ ಏನೋ, ಹುಡುಗೀರು ಅಂದರೆ ಹಿಂಜರಿಯುತ್ತಿದ್ದ ಪ್ರಶಾಂತ್‌ ಮನ ಕದ್ದ ಬೆಡಗಿ ಲಿಖಿತಾ. ಕೆಲಸ ಇಲ್ಲ, ನಿರುದ್ಯೋಗಿ ಅಂದ ಮಾತ್ರಕ್ಕೆ ಪ್ರಶಾಂತ್ ಬಡವರೇನಲ್ಲ, ಹೈಲ್ಯಾಂಡ್ಸ್ ಹೊಟೇಲ್ (Highland hotel), ವುಡ್ ಲ್ಯಾಂಡ್ಸ್ ಸರಣಿಯ ಅನೇಕ ಹೊಟೇಲ್‌ಗಳು ಇವರ ಫ್ಯಾಮಿಲಿ ಒಡೆತನದಲ್ಲಿವೆ. 

ಹೀಗೆ ಪ್ರಶಾಂತ್‌ ನೀಲ್‌ ಅವರನ್ನು ಲಿಖಿತಾ ಭೇಟಿ ಮಾಡಿದ ಕೆಲವೇ ಸಮಯದ ಬಳಿಕ ನೀಲ್ ಹಾಗೂ ಲಿಖಿತಾ ಫ್ಯಾಮಿಲಿಯ ಮಧ್ಯೆ ಗೆಟ್‌ ಟು ಗೆದರ್‌ ನಡೆಯುತ್ತೆ. ಇದರಲ್ಲಿ ಪ್ರಶಾಂತ್ ಹಾಗೂ ಲಿಖಿತಾ ಮದುವೆ ಫಿಕ್ಸ್‌ ಆಗುತ್ತೆ. 2011ರ ಮೇ 5ಕ್ಕೆ ಈ ಜೋಡಿ ಶುಭ ವಿವಾಹ ನಡೆಯುತ್ತೆ. ಇದೆಲ್ಲ ಆಗಿ ಸಾಕಷ್ಟು ಸಮಯ ಆಗಿದೆ. ಈಗ ಈ ಜೋಡಿಗೆ ಸರಯೂ ನೀಲ್ (Sarayu Neel) ಎಂಬ ಮಗಳು ಹಾಗೂ ಒಬ್ಬ ಮಗ ಇದ್ದಾನೆ. ಪತ್ನಿ ಲಿಖಿತಾ ಪ್ರಶಾಂತ್‌ ಹೆಗಲಿಗೆ ಹೆಗಲು ಕೊಟ್ಟು ಅವರ ಕೆಲಸದಲ್ಲಿ ಸಾಥ್‌ ನೀಡುತ್ತಿದ್ದಾರೆ. ಯಶ್‌ ಸಂದರ್ಶನವೊಂದರಲ್ಲಿ ಹೇಳಿದಂತೆ, ನೀಲ್‌ಗೆ ಯಾವ ಬಟ್ಟೆ ಚಂದ ಕಾಣುತ್ತೆ ಅನ್ನೋದರಿಂದ ಹಿಡಿದು ಅವರ ಪ್ರತಿಯೊಂದು ಇಷ್ಟಾನಿಷ್ಟಗಳನ್ನೂ ಅರಿತು ಅದಕ್ಕೆ ತಕ್ಕಂತೆ ನಡೆದುಕೊಳ್ತಾರೆ ಲಿಖಿತಾ.

ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ 2ನೇ ಸಿನಿಮಾ ಕೆಜಿಎಫ್‌ 2!

ಆದರೆ ನೀಲ್‌ ಮಾತ್ರ ಹೆಂಡ್ತಿ ಬಗ್ಗೆ ಮಾತಾಡೋದಕ್ಕೆ ಇವತ್ತೂ ನಾಚ್ಕೊಳ್ಳೋದುಂಟು. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಹೆಂಡ್ತಿ ಕಾಲೆಳೆಯುವ ಹಾಗೆ ಮಾತಾಡಿದ್ರೂ ಒಂಚೂರು ನಾಚಿಕೊಂಡ ಹಾಗೆ ಕಂಡದ್ದನ್ನು ಕಂಡು ಸಂದರ್ಶಕರೇ ಅವರ ಕಾಲೆಳೆದರು. ಹೊರಗೆ ಕೂತ ಲಿಖಿತಾ ಇದನ್ನು ನೋಡಿ ನಗ್ತಿದ್ರು. ಸಿನಿಮಾದಲ್ಲೂ ರೊಮ್ಯಾಂಟಿಕ್ ಸೀನ್ ಡೈರೆಕ್ಟ್ ಮಾಡೋದು ಅಂದರೆ ಪ್ರಶಾಂತ್‌ ನೀಲ್‌ಗೆ ಕಡುಕಷ್ಟ ಅಂತೆ. ಎಂಥೆಂಥಾ ಆಕ್ಷನ್ ಸೀನ್‌ ಇದ್ದರೂ ಲೀಲಾಜಾಲವಾಗಿ ನಿಭಾಯಿಸುವ ನೀಲ್‌, ರೊಮ್ಯಾಂಟಿಕ್ ಸೀನ್ (Romantic scene) ಅಂದಕೂಡಲೇ ಶೈ ಆಗ್ತಾರೆ. 'ನಂಗೆ ರೊಮ್ಯಾಂಟಿಕ್ ಸನ್ನಿವೇಶಗಳ ಬಗ್ಗೆ ಹೀರೋಯಿನ್‌ಗೆ ವಿವರಿಸೋದಕ್ಕೂ ಒಂಥರಾ ಅನಿಸುತ್ತೆ. ರೊಮ್ಯಾಂಟಿಕ್‌ ಸಿನಿಮಾ ಮಾಡೋದು ನನಗೆ ಬಹಳ ಕಷ್ಟ' ಅಂತ ನಗ್ತಾರೆ ನೀಲ್.

ಪ್ರಶಾಂತ್‌ ನೀಲ್‌ ಚಿತ್ರರಂಗದ ವೀರಪ್ಪನ್, 100 ಕೋಟಿ ನಷ್ಟವಾಗಿದೆ: ನಿರ್ದೆಶಕ RGV ಗರಂ

ಇವರೀಗ ಜ್ಯೂನಿಯರ್‌ ಎನ್‌ಟಿಆರ್‌ ಫ್ಯಾಮಿಲಿ ಜೊತೆಗೆ ತಮ್ಮ ಈ ವರ್ಷದ ಆನಿವರ್ಸರಿ (anniversary) ಆಚರಿಸಿಕೊಳ್ತಾ ಇದ್ದಾರೆ. ಈ ಫೋಟೋಗಳು ಈಗ ಎಲ್ಲೆಡೆ ವೈರಲ್‌ ಆಗಿವೆ. ಪ್ರಶಾಂತ್‌ ನೀಲ್ ಹಾಗೂ ಲಿಖಿತಾಗೆ ಹ್ಯಾಪಿ ಆನಿವರ್ಸರಿ. ಜ್ಯೂ. ಎನ್‌ಟಿಆರ್‌ ಜೊತೆಗೆ ಅವರ ಮುಂದಿನ 'ಎನ್‌ಟಿಆರ್‌ 31' (NTR 31)ಚಿತ್ರವನ್ನು ಪ್ರಶಾಂತ್ ನಿರ್ದೇಶಿಸಲಿದ್ದಾರೆ. ಈ ಫೋಟೋದಲ್ಲೂ ಜ್ಯೂ.ಎನ್‌ಟಿಆರ್ ಹೆಂಡತಿಯ ಜೊತೆಗೆ ರೊಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ಕೊಟ್ಟರೆ ಪ್ರಶಾಂತ್‌ ಸೋಫಾದಲ್ಲಿ ಕಿರುನಗುತ್ತಾ ಕೂತಿದ್ದಾರೆ. ಹೆಂಡತಿ ಲಿಖಿತಾ ತೋಳುಗಳು ಅವರನ್ನು ಬಳಸಿವೆ.

Jr NTR ವಿರುದ್ಧ ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು ಗೊತ್ತಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?