
ಭಾರತೀಯ ಚಿತ್ರರಂಗದ ಮ್ಯೂಸಿಕ್ ಮಾಸ್ಟರ್, ಆಸ್ಕರ್ ವಿನ್ನರ್ ಎ.ಆರ್ ರೆಹೆಮಾನ್ (AR Rahman) ಪುತ್ರಿ ಖತೀಜಾ ರೆಹೆಮಾನ್ (Khatija Rahman) ಮತ್ತು ರಿಯಾಸಿದ್ದೀನ್ ರಿಯಾನ್ (Riyasdeen Riyan) ಮೇ 5ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ರೆಹೆಮಾನ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಶುಭ ಹಾರೈಸಿದ್ದಾರೆ.
ರೆಹೆಮಾನ್ ಮಾತು:
'ದೇವರ ಕೃಪೆ ಈ ದಂಪತಿಗಳ ಮೇಲೆ ಸದಾ ಇರಲಿ.ನಿಮ್ಮೆಲ್ಲರ ಪ್ರೀತಿ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು'ಎಂದು ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ. ರೆಹೆಮಾನ್ ಪುತ್ರಿ ಮತ್ತು ಅಳಿಯ ಕ್ರೀಮ್ ಬಣ್ಣದ ಡ್ರೆಸ್‌ಗೆ ಕೆಂಪು ಬಣ್ಣದ ಹೂ ಮಾಲೆ ಧರಿಸಿದ್ದಾರೆ. ಪುತ್ರಿ ಖತೀಜಾ ಮ್ಯಾಚ್ ಆಗುವಂತ ಮಾಸ್ಕ್ ಧರಿಸಿದ್ದಾರೆ. ರೆಹಮಾನ್ ಮತ್ತು ಪತ್ನಿ ಮರೂನ್ ಶೇಡ್‌ನಲ್ಲಿ ಧರಿಸಿದ್ದಾರೆ. ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ರಿಯಾಸ್ದೀನಿ ಉದ್ಯಮಿ ಎನ್ನಲಾಗಿದೆ.
ಖತೀಜಾ ರೆಹಮಾನ್ ಮತ್ತು ರಿಯಾಸ್ದೀನ್ ರಿಯಾನ್ ಡಿಸೆಂಬರ್ 29,2021ರಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಅಂದು ಖತೀಜಾ ಹುಟ್ಟುಹಬ್ಬ ಆಗಿದ್ದ ಕಾರಣ ರೆಹಮಾನ್ ಮನೆಯಲ್ಲಿ ಡಬಲ್ ಸೆಲೆಬ್ರೇಷನ್ ಮಾಡಲಾಗಿತ್ತು.
ಯಾರಿದು ರಿಯಾಸ್ದೀನ್ ರಿಯಾನ್:
ವೃತ್ತಿಯಲ್ಲಿ ಆಡಿಯೋ ಇಂಜಿನಿಯರ್ (Audio Engineer) ಆಗಿರುವ ರಿಯಾಸ್ದೀನ್ ರಿಯಾನ್ ತಮಿಳು ಸಿನಿಮಾಗಳಲ್ಲಿ ಹಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿರುವ ಅಳಿಯನನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಬೆಸ್ಟ್ ಸೆಲೆಕ್ಷನ್ ಅಂತಿದ್ದಾರೆ ಫ್ಯಾನ್ಸ್. ಶ್ರೇಯಾ ಘೋಶಾಲ್‌ಗೆ (Shreya Ghoshal) ಆಪ್ತ ಪರಿಚಯವಿರುವ ರಿಯಾಸ್ದೀನ್‌ಗೆ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ಹಲವು ವರ್ಷಗಳ ನಂತರ ಇಡೀ ಕುಟುಂಬನ್ನು ಒಟ್ಟಿಗೆ ನೋಡುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.
ಆಸ್ಕರ್:
ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ( A.R. Rahman) ವರೆಗೆ ಇನ್ನೂ ಅನೇಕ ಭಾರತೀಯರು ಆಸ್ಕರ್ ಟ್ರೋಫಿಯನ್ನು ಸ್ವೀಕರಿಸಿದ್ದಾರೆ.ಎ.ಆರ್. ರೆಹಮಾನ್ ಅತ್ಯುತ್ತಮ ಒರಿಜಿನಲ್ ಸ್ಕೋರ್ ಮತ್ತು ಅತ್ಯುತ್ತಮ ಹಾಡು (ಜೈ ಹೋ) ನೊಂದಿಗೆ ಎರಡು ಆಸ್ಕರ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದರು. ಬ್ರಿಟಿಷ್-ಭಾರತೀಯ ಚಲನಚಿತ್ರವೊಂದರಲ್ಲಿ ಅವರ ಸ್ಕೋರ್‌ಗಾಗಿ, ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರು ಅಕಾಡೆಮಿ ಪ್ರಶಸ್ತಿಗಳಲ್ಲಿ ಮೂರು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡ ಮೊದಲ ಭಾರತೀಯರಾದರು. ಸಂಯೋಜಕರನ್ನು ಈ ಹಿಂದೆ 127 ಅವರ್ಸ್ ಮತ್ತು ಇಫ್ ಐ ರೈಸ್ ಚಿತ್ರಗಳಿಗಾಗಿ ಅತ್ಯುತ್ತಮ ಒರಿಜಿನಲ್ ಸ್ಕೋರ್‌ಗೆ ನಾಮನಿರ್ದೇಶನ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.