ಮಾಲಿನ್ಯದಿಂದ ಕುಗ್ಗುತ್ತಿದೆ ಶಿಶ್ನದ ಗಾತ್ರ: ಮಾಹಿತಿ ಶೇರ್ ಮಾಡಿದ ನವ ವಿವಾಹಿತ ನಟಿ

By Suvarna NewsFirst Published Mar 26, 2021, 5:46 PM IST
Highlights

ಮಾಲೀನ್ಯದಿಂದ ಕುಗ್ಗುತ್ತಾ ಶಿಶ್ನದ ಗಾತ್ರ ? ಹೀಗೊಂದು ಮಾಹಿತಿ ಹಂಚಿಕೊಂಡಿದ್ದಾರೆ ಬಾಲಿವುಡ್ ನವ ವಿವಾಹಿತ ನಟಿ ದಿಯಾ

ಹವಾಮಾನ ಬದಲಾವಣೆಯ ಕುರಿತ ಚರ್ಚೆ ಬಂದಾಗ ದಿಯಾ ಮಿರ್ಜಾ ಮುಂಚೂಣಿಯಲ್ಲಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ, ಇಂಗಾಲದ ಹೊರಸೂಸುವಿಕೆಯನ್ನು ಕಡಿತಗೊಳಿಸುವುದು, ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವುದು ಮತ್ತು ಪರಿಸರವನ್ನು ಕಾಪಾಡಲು ಸೂಕ್ಷ್ಮ ಮತ್ತು ಸ್ಥೂಲ ಮಟ್ಟದಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವ ತುರ್ತು ಅಗತ್ಯವನ್ನು ಅವರು ಪದೇ ಪದೇ ಚರ್ಚಿಸುತ್ತಿರುತ್ತಾರೆ.

ತನ್ನ ಸ್ವಂತ ಜೀವನ ಮತ್ತು ಮನೆಯಲ್ಲಿ ದಿಯಾ ಹಸಿರು, ಭೂ-ಕೇಂದ್ರಿತ ಜೀವನಶೈಲಿಯನ್ನು ಅನುಸರಿಸುತ್ತಾರೆ. ಇದರಲ್ಲಿ ತ್ಯಾಜ್ಯವನ್ನು ಬೇರ್ಪಡಿಸುವುದು ಮತ್ತು ಮಿಶ್ರಗೊಬ್ಬರ ಮಾಡುವುದು,ಅಡುಗೆ ಪ್ಲಾಸ್ಟಿಕ್ ಮುಕ್ತವಾಗಿಸುವುದು, ಹಳೆಯ ಪೀಠೋಪಕರಣಗಳನ್ನು ಮೇಲಕ್ಕೆತ್ತಿ, ಲೋಹದ ನೀರಿನ ಬಾಟಲಿಯನ್ನು ಬಳಸುವುದು, ಜೈವಿಕ ವಿಘಟನೀಯ ಶೌಚಾಲಯಗಳು ಮತ್ತು ನೈರ್ಮಲ್ಯ ಉತ್ಪನ್ನಗಳನ್ನು ಬಳಸುವುದು ಮತ್ತು ರಚಿಸುವುದು ಸಾಧ್ಯವಾದಲ್ಲೆಲ್ಲಾ ಹಸಿರು ಪಾಕೆಟ್ಸ್ ಬಳಸುವುದನ್ನು ಮಾಡುತ್ತಿದ್ದಾರೆ.

ವಧು ದಿಯಾಳನ್ನು ಕರೆದುಕೊಂಡು ಬಂದಿದ್ದೇ ವರನ ಮಗಳು..! ಮೊದಲ ಪತ್ನಿ ಹೇಳಿದ್ದಿಷ್ಟು

ಮಾಲಿನ್ಯದಿಂದಾಗಿ ಮಾನವ ಶಿಶ್ನಗಳು ಕುಗ್ಗುತ್ತಿವೆ ಎಂದು ಇತ್ತೀಚೆಗೆ ಸ್ಕೈ ನ್ಯೂಸ್‌ ಲೇಖನ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ದಿಯಾ ಅದೇ ರೀತಿ ಟ್ವೀಟ್ ಮಾಡಿ, ಈಗ ಜಗತ್ತು ಹವಾಮಾನ ವೈಪರೀತ್ಯ ಮತ್ತು ವಾಯು ಮಾಲೀನ್ಯವನ್ನು ಸ್ವಲ್ಪ ಹೆಚ್ಚು ಸೀರಿಯಸ್ ಆಗಿ ತೆಗೆದುಕೊಳ್ಳಬಹುದಾ ಎಂದು ಬರೆದಿದ್ದಾರೆ.

ಈ ವರ್ಷದ ಆರಂಭದಲ್ಲಿ ಕೊರೋನಾ ಮಹಾಮಾರಿ ಜನರಿಗೆ ಎಚ್ಚರಗೊಳ್ಳುವ ಕರೆ ಎಂದು ಮಾನವರು ಮತ್ತು ಪರಿಸರದ ನಡುವಿನ ಅಸಮತೋಲನವನ್ನು ತಿಳಿದುಕೊಳ್ಳಲು ನಾವು ಗಮನಹರಿಸಬೇಕು ಎಂದು ದಿಯಾ ಹೇಳಿದ್ದಾರೆ.

ದಿಯಾ ಮಿರ್ಜಾ ಮದುವೆ ಬಗ್ಗೆ ಪತಿ ವೈಭವ್‌ ರೇಖಿ ಎಕ್ಸ್‌ ವೈಫ್‌ ಹೇಳಿದ್ದಿಷ್ಟು

ನೈಸರ್ಗಿಕ ವಿಪತ್ತುಗಳು ಮತ್ತು ಸಾಂಕ್ರಾಮಿಕ ರೋಗಗಳು ನಮಗೆ ಏನನ್ನಾದರೂ ಕಲಿಸಿದ್ದರೆ ನಾವು ಪ್ರಕೃತಿಯನ್ನು ಹೇಗೆ ನಡೆಸಿಕೊಳ್ಳುತ್ತೇವೆ ಮತ್ತು ನಾವು ಬದುಕುವ ವಿಧಾನವನ್ನು ಮರುಪರಿಶೀಲಿಸಬೇಕಾಗಿದೆ ಎಂದಿದ್ದಾರೆ.

ಕಳೆದ ತಿಂಗಳು ಉದ್ಯಮಿ ವೈಭವ್ ರೇಖಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಿಯಾ ತನ್ನ ವಿವಾಹ ಸಮಾರಂಭವನ್ನು ಸಂಪೂರ್ಣವಾಗಿ ಜೈವಿಕ ವಿಘಟನೀಯ ಮತ್ತು ನೈಸರ್ಗಿಕ ವಸ್ತುಗಳನ್ನು ಬಳಸಿ ನಡೆಸಲಾಗಿದೆ ಎಂದು ಹೇಳಿದ್ದಾರೆ.

click me!