ಬಾಬಾ ರಾಮ್‌ದೇವ್‌ ಆಗಿಬಿಟ್ರಲ್ಲಾ ಧನುಷ್​! ಏನಪ್ಪಾ ವಿಷ್ಯ ಅಂತಿದ್ದಾರೆ ಫ್ಯಾನ್ಸ್​

Published : May 30, 2023, 05:32 PM IST
ಬಾಬಾ ರಾಮ್‌ದೇವ್‌ ಆಗಿಬಿಟ್ರಲ್ಲಾ ಧನುಷ್​! ಏನಪ್ಪಾ ವಿಷ್ಯ ಅಂತಿದ್ದಾರೆ ಫ್ಯಾನ್ಸ್​

ಸಾರಾಂಶ

ಚಿತ್ರ ನಟ ಧನುಷ್ ಬಾಬಾ ರಾಮ್​ದೇವ್​ ಅವರ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದು, ಫ್ಯಾನ್ಸ್​ ಇದೇನಪ್ಪ ಎಂದು ಕೇಳುತ್ತಿದ್ದಾರೆ.​  

ವೆಂಕಟೇಶ್ ಪ್ರಭು ಕಸ್ತೂರಿ ರಾಜ್ ಎಂದರೆ ಯಾರಿಗೂ ತಿಳಿಯಲಿಕ್ಕಿಲ್ಲ. ಆದರೆ ಕಾಲಿವುಡ್​ನ ಸೂಪರ್​ಸ್ಟಾರ್​ ಧನುಷ್​ (Dhanush)ಎಂದರೆ ಎಲ್ಲರಿಗೂ ಅರಿವಾಗುತ್ತದೆ. ಹೌದು. ಧನುಷ್​ ಅವರ ಮೊದಲ ಹೆಸರು ವೆಂಕಟೇಶ್ ಪ್ರಭು ಕಸ್ತೂರಿ ರಾಜ್. ಅದುಕುಲಂ ಎಂಬ ಚಿತ್ರದ ಮೂಲಕ ಸಕತ್​ ಫೇಮಸ್​ ಆಗಿದ್ದಾರೆ ಧನುಷ್​. ಈ ಚಿತ್ರಕ್ಕಾಗಿ ಅವರಿಗೆ  58ನೇ ನ್ಯಾಷನಲ್ ಫಿಲಂ ಅವಾರ್ಡ್​ ಕೂಡ  ಲಭಿಸಿದೆ. ಹಾಗೂ ಇವರ 'ವೈ ದಿಸ್ ಕೊಲವರಿ ಡಿ' ಎಂಬ ಹಾಡಿಗೆ ಅಂತಾರಾಷ್ಟ್ರೀಯ ಜನಪ್ರಿಯತೆ ದೊರಕಿದೆ.  ಈ ಹಾಡು  100 ಮಿಲಿಯನ್​ಗಿಂತ  ಹೆಚ್ಚು ಜನರು ಯೂಟ್ಯೂಬಿನಲ್ಲಿ ವಿಕ್ಷಣೆ ಪಡೆದ ಮೊದಲನೆಯ ಭಾರತೀಯ ವೀಡಿಯೊ ಎಂಬ ಹೆಗ್ಗಳಿಕೆ ಗಳಿಸಿದೆ.  ಅಸಲಿಗೆ ಧನುಷ್​ ಅವರ  ಈ ಹಾಡನ್ನು ಅವರ ಪತ್ನಿ ಐಶ್ವರ್ಯ ಧನುಷ್ ರವರು ಸಂಯೋಜಿಸಿದ್ದರು.   ಇವರಿಗೆ ಮೂರೂ ನ್ಯಾಷನಲ್ ಫಿಲಂ ಅವಾರ್ಡ್ (National Film Award) ಮತ್ತು ಏಳು ಫಿಲಂಫೇರ್ ಅವಾರ್ಡ್ ಲಭಿಸಿದೆ.

ಈಗ ಧನುಷ್​ ಸಕತ್​ ಸುದ್ದಿಯಲ್ಲಿರುವ ಕಾರಣ ಅವರ ಹೊಸ ಲುಕ್. ಧನುಷ್​ ಅವರ ಹೊಸ ಲುಕ್​ ಸಾಮಾಜಿಕ ಜಾಲತಾಣದಲ್ಲಿ ವೈಬ್​ ಸೃಷ್ಟಿಸಿದ್ದು, ಯೋಗ ಗುರು ಬಾಬಾ ರಾಮ್‌ದೇವ್‌ (Baba Ramdev) ಆಗ್ಬಿಟ್ರಾ, ಏನಿದು ಅಂತಿದ್ದಾರೆ ಫ್ಯಾನ್ಸ್​. ಅಷ್ಟಕ್ಕೂ ಚಿತ್ರ ತಾರೆಯರು ತಮಗೆ ಇಷ್ಟವಾದ ರೀತಿಯಲ್ಲಿ ವೇಷ ಭೂಷಣ ಬದಲಿಸುತ್ತಲೇ ಇರುತ್ತಾರೆ. ಅದರಲ್ಲಿಯೂ ಅವರ ಹೇರ್​ಸ್ಟೈಲ್​ಗಳು ಬದಲಾಗುತ್ತವೆ. ಅವರನ್ನು ನೋಡಿ ಫ್ಯಾನ್ಸ್​ ಅದೇ ರೀತಿ ಹೇರ್​ಸ್ಟೈಲ್​ ಮಾಡಿಕೊಳ್ಳುವುದು ಇದೆ. ಇನ್ನು ಮೀಸೆ, ಗಡ್ಡ, ಗೆಟಪ್​ ಎಲ್ಲವೂ ವಿಭಿನ್ನವಾಗಿ ಮಾಡಿಕೊಳ್ಳುವ, ಆಗಾಗ್ಗೆ ಬದಲಿಸುವ ನಟರೂ ಇದ್ದಾರೆ. ಇದೀಗ ಅವರ ಸಾಲಿಗೆ ಧನುಷ್​ ಸೇರಿದ್ದಾರೆ. 

ಸಲ್ಮಾನ್​ ಖಾನ್ ಬೇಡವೆಂದ ಚಿತ್ರ ನಿರ್ದೇಶಿಸಿ ಆದಿತ್ಯ ಚೋಪ್ರಾ ಪಟ್ಟ ಪಾಡು ಅಷ್ಟಿಷ್ಟಲ್ಲ!
  
ಇತ್ತೀಚೆಗೆ ಧನುಷ್‌ ಮುಂಬೈ ಏರ್‌ಪೋರ್ಟ್‌ನಲ್ಲಿ (Airport) ಕಾಣಿಸಿಕೊಂಡಿದ್ದಾರೆ. ಧನುಷ್‌ ನೋಡುತ್ತಿದ್ದಂತೆ ಕೆಲವರು ಕನ್​ಫ್ಯೂಸ್​  ಆಗಿದ್ದಾರೆ. ಇವರು ಧನುಷ್​ ಎಂದರೆ ಹೌದು ಎಂದು ನಂಬಲಾಗದಷ್ಟು ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ.  ಭುಜದವರೆಗೂ ಕೂದಲು, ಉದ್ದ ಗಡ್ಡ ಬಿಟ್ಟು ಧನುಷ್‌ ಸಂಪೂರ್ಣ ಲುಕ್‌ ಬದಲಿಸಿದ್ದಾರೆ. ಧನುಷ್‌ ನೋಡುತ್ತಿದ್ದಂತೆ ಕೆಲವರು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಹತ್ತಿರ ಓಡಿ ಬಂದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇವರನ್ನು ನೋಡಿದವರು ಥೇಟ್​  ಬಾಬಾ ರಾಮ್‌ದೇವ್‌ ಅವರಂತೆಯೇ  ಕಾಣಿಸುತ್ತಿದ್ದೀರಿ ಎಂದಿದ್ದಾರೆ.  ಬಾಬಾ ರಾಮ್‌ದೇವ್‌ ಅವರಂತೆ ಬದಲಾಗಿದ್ದು ಯಾಕೆ, ಇದೇನಿದು ಹೊಸ ವೇಷ ಎಂದು ಫ್ಯಾನ್ಸ್​ ಪ್ರಶ್ನಿಸುತ್ತಿದ್ದಾರೆ.  ಇದಕ್ಕೆ ಸಂಬಂಧಿಸಿದಂತೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.  ಕೆಲವರು ಬಹುಶ: ಧನುಷ್‌ ಬಾಬಾ ರಾಮ್‌ ದೇವ್‌ ಕುರಿತಾದ ಸಿನಿಮಾದಲ್ಲಿ ನಟಿಸುತ್ತಿರಬಹುದು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಧನುಷ್‌ ಹೊಸ ಲುಕ್‌ ಸಕತ್​ ಸುದ್ದಿಯಾಗುತ್ತಿದೆ.  

ಇನ್ನು, ಧನುಷ್‌ ಸಿನಿಮಾಗಳ ಕುರಿತು ಹೇಳುವುದಾದರೆ,   ಇವರು ನಟ ಮಾತ್ರಲ್ಲ. ನಿರ್ದೇಶಕ (Director), ನಿರ್ಮಾಪಕ, ಚಿತ್ರಸಾಹಿತಿ ಮತ್ತು ಹಿನ್ನಲೆ ಗಾಯಕ ಕೂಡ.  ಕೆಲ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಇವರು ಸೂಪರ್ ಸ್ಟಾರ್ ರಜನಿಕಾಂತ್ ರ ಪುತ್ರಿ ಐಶ್ವರ್ಯರನ್ನು (Aishwarya) ವಿವಾಹವಾಗಿದ್ದಾರೆ. ತಮ್ಮ ನಟನೆಗಾಗಿ ಮತ್ತು ಚಿತ್ರ ನಿರ್ಮಾಣಕ್ಕಾಗಿ ತಲಾ ಎರೆಡೆರೆಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. 13 ಸೈಮಾ ಪ್ರಶಸ್ತಿ, ಏಳು ಫಿಲ್ಮ್ ಫೇರ್, ಐದು ವಿಕಟನ್ ಮತ್ತು ಐದು ಎಡಿಸನ್ ಪ್ರಶಸ್ತಿ ಪಡೆದಿದ್ದು ಧನುಷ್ ರವರ ಅಭಿನಯಕ್ಕೆ ಸಾಕ್ಷಿ. ಅವರು ಸದ್ಯ ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾದಲ್ಲಿ ಬಿಜಿ ಇದ್ದಾರೆ. ಸತ್ಯಜ್ಯೋತಿ ಫಿಲ್ಸ್ಮ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಅರುಣ್‌ ಮಥೇಶ್ವರನ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರದಲ್ಲಿ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟಿಸುತ್ತಿದ್ದಾರೆ.

Godhra ದುರಂತ ದುರುದ್ದೇಶವೋ, ಆಕಸ್ಮಿಕವೋ? ಚಿತ್ರದ ಟೀಸರ್​ ಬಿಡುಗಡೆ 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?