2002ರಲ್ಲಿ ಗುಜರಾತಿನ ಗೋಧ್ರಾದಲ್ಲಿ 58 ಮಂದಿಯ ಸಜೀವ ದಹನಕ್ಕೆ ಕಾರಣವಾದ ರೈಲ್ವೆ ದುರಂತರ ಅಸಲಿಯತ್ತೇನು ಎಂದು ತೋರಿಸುವ ಗೋಧ್ರಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
2002ರ, ಫೆಬ್ರವರಿ 27ರಂದು ಗುಜರಾತ್ನ ಗೋಧ್ರಾದಲ್ಲಿ ನಡೆದಿತ್ತು ಘನಘೋರ ಘಟನೆ. ಫೈಜಾಬಾದ್‌ನಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಸಬರ್‌ಮತಿ ಎಕ್ಸ್‌ಪ್ರೆಸ್ (Sabaramathi Express) ರೈಲಿನ ಮೇಲೆ ದಾಳಿ ನಡೆದಿತ್ತು. ಗೋಧ್ರಾ ಬಳಿ ನಡೆದ ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ 58 ಜನರು ಸಜೀವ ದಹನವಾದರು. ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ 59 ಹಿಂದೂ ಯಾತ್ರಿಕರು ಮತ್ತು ಕರಸೇವಕರು ಬೆಂಕಿಯಲ್ಲಿ ಜೀವಂತವಾಗಿ ದಹಿಸಿ ಹೋದರು. ಇಡೀ ದೇಶವೇ ಬೆಚ್ಚಿ ಬಿದ್ದ ಘಟನೆ ಇದು. ನರೇಂದ್ರ ಮೋದಿಯವರು ಆಗ ತಾನೇ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಘಟನೆ ನಡೆದ ತಕ್ಷಣ ರಾಜ್ಯ ಸರ್ಕಾರವು ನಾನಾವತಿ ಮೆಹ್ತಾ ಆಯೋಗವನ್ನು (Nanavati Mehta) ರಚಿಸಿ ಬೆಂಕಿಗೆ ಕಾರಣವೇನು ಎಂದು ತನಿಖೆ ನಡೆಸುವಂತೆ ಸೂಚಿಸಿತ್ತು. 2008 ರಲ್ಲಿ ವರದಿ ನೀಡಿದ್ದ ಆಯೋಗವು ಇದು ಮುಸ್ಲಿಂ ಗುಂಪು ಮಾಡಿದ ಪೂರ್ವ ಯೋಜಿತ ಅಗ್ನಿಸ್ಪರ್ಶ ಎಂದು ತೀರ್ಮಾನಿಸಿ ವರದಿ ನೀಡಿತ್ತು. ಇದರ ಮಧ್ಯೆ ಅಂದರೆ ಕೇಂದ್ರ ಸರ್ಕಾರದ ರೈಲ್ವೇ ಸಚಿವಾಲಯವು ಬ್ಯಾನರ್ಜಿ ಆಯೋಗವನ್ನು ರಚಿಸಿತ್ತು. ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಮಯದಲ್ಲಿ ಅಂದರೆ 2006ರಲ್ಲಿ ಬ್ಯಾನರ್ಜಿ ಆಯೋಗವು ವರದಿ ನೀಡಿ ರೈಲಿಗೆ ಬೆಂಕಿ ಬಿದ್ದುದು ಆಕಸ್ಮಿಕ ಎಂದು ವರದಿ ನೀಡಿತು.
ರಾಮನ ಸಾವಿರಾರು ಭಕ್ತರಾಗಿರುವ ಕಾರ ಸೇವಕರು ವಿಶ್ವ ಹಿಂದೂ ಪರಿಷತ್ತಿನ ಆಜ್ಞೆಯ ಮೇರೆಗೆ ಗುಜರಾತ್‌ನಿಂದ ಅಯೋಧ್ಯೆಗೆ ಪೂರ್ಣಾಹುತಿ ಮಹಾ ಯಜ್ಞ ಎಂಬ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ರೈಲು ಪ್ಲಾಟ್‌ಫಾರ್ಮ್‌ನಿಂದ (Flatform) ಹೊರಡಲು ಪ್ರಾರಂಭಿಸಿದಾಗ, ಯಾರೋ ತುರ್ತು ಚೈನ್ ಎಳೆದರು. ಆಗ ರೈಲು ಸಿಗ್ನಲ್ ಪಾಯಿಂಟ್ ಬಳಿ ನಿಂತಿತ್ತು. ಈ ಸಂದರ್ಭದಲ್ಲಿ ರೈಲಿನ ಮೇಲೆ ಸುಮಾರು 2 ಸಾವಿರ ಜನರ ಗುಂಪು ದಾಳಿ ಮಾಡಿತು. ಕೆಲವು ಕಲ್ಲು ತೂರಾಟದ ನಂತರ, ನಾಲ್ಕು ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಅದು S 6 ಬೋಗಿ. ರೈಲಿನ ಮೇಲಿನ ದಾಳಿಯು ಪಾಕಿಸ್ತಾನದ ಆದೇಶದ ಮೇರೆಗೆ ಜನರಿಂದ ಸಂಘಟಿತವಾದ್ದದ್ದಾಗಿದೆ ಎಂದು ಇತಿಹಾಸಕಾರ ಐನ್ಸ್ಲೀ ಥಾಮಸ್ ಎಂಬ್ರೀ ಹೇಳಿದ್ದಾರೆ. ವಿದ್ವಾಂಸರಾದ ಮಾರ್ಥಾ ನುಸ್ಬಾಮ್ ಕೂಡ ಇದನ್ನು ಸಮರ್ಥಿಸಿದ್ದಾರೆ. ಆದರೆ ರೈಲ್ವೆ ಸಚಿವಾಲಯ ಸೇರಿದಂತೆ ಒಂದು ವರ್ಗ ಈ ಘಟನೆ ಕೇವಲ ಆಕಸ್ಮಿಕ, ಉದ್ದೇಶಪೂರ್ವಕ ಅಲ್ಲ ಎಂದಿತು.
ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ, 8 ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು!
ಆದ್ದರಿಂದ ರೈಲ್ವೆ ಸಚಿವಾಲಯದ (Railway Ministry) ವರದಿ ಒಂದೆಡೆ ಹಾಗೂ ನಾನಾವತಿ ಮೆಹ್ತಾ ನೀಡಿದ್ದ ವರದಿ ಇನ್ನೊಂದೆಡೆ. ಇದರ ಬಗ್ಗೆ ಭಾರಿ ವಾದ ಪ್ರತಿವಾದಗಳ ಅಲೆ ಎದ್ದಿತು. ದೇಶಮಟ್ಟದಲ್ಲಿ ಇದು ಬಹಳ ಚರ್ಚೆಗೆ ಗ್ರಾಸವಾಯಿತು. ಕೊನೆಗೆ ಈ ಘಟನೆ ಕೋರ್ಟ್ ಮೆಟ್ಟಿಲೇರಿತು. 2011ರಲ್ಲಿ ವಿಚಾರಣಾ ನ್ಯಾಯಾಲಯವು ಘಟನೆಗೆ ಸಂಬಂಧಿಸಿದಂತೆ 31 ಮುಸ್ಲಿಮರನ್ನು ಅಪರಾಧಿಗಳೆಂದು ಘೋಷಿಸಿತು. ನಾನಾವತಿ -ಮೆಹ್ತಾ ಆಯೋಗ ನೀಡಿರುವ ವರದಿ ಸರಿಯೆಂದು ಅಭಿಪ್ರಾಯ ಪಟ್ಟಿದ್ದ ಕೋರ್ಟ್ ಈ ಶಿಕ್ಷೆಯನ್ನು ನೀಡಿತ್ತು. ಶಿಕ್ಷೆಯ ವಿರುದ್ಧ ಹೈಕೋರ್ಟ್ಗೆ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಅಕ್ಟೋಬರ್ 2017 ರಲ್ಲಿ, ಗುಜರಾತ್ ಹೈಕೋರ್ಟ್ ವಜಾಗೊಳಿಸಿ, ಶಿಕ್ಷೆ ಸರಿಯಾಗಿದೆ ಎಂದಿತ್ತು.
ಈ ಘಟನೆಯ ಕುರಿತು ಇಂದಿಗೂ ಆಗಾಗ್ಗೆ ವಿವಾದ ಭುಗಿಲೇಳುತ್ತಲೇ ಇರುತ್ತದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದು ಎಂದು ಒಂದು ವರ್ಗ ಹೇಳಿದರೆ, ಇದು ಆಕಸ್ಮಿಕ ಎನ್ನುವುದು ಇನ್ನೊಂದು ವರ್ಗದ ವಾದ. ಇದೀಗ ಈ ಸಂಪೂರ್ಣ ಚಿತ್ರಣವನ್ನು ತೆರೆ ಮೇಲೆ ತರಲು ಸಿದ್ಧರಾಗಿದ್ದಾರೆ ನಿರ್ದೇಶಕ ಎಂ.ಕ.ಎ ಶಿವಾಕ್ಷಿ (M.K. Shivaaksh). ಇದರ ನಿರ್ಮಾಪಕರು ಬಿ.ಜ. ಪುರೋಹಿತ್ (B.J. Purohit). ಅಂದು ಗೋಧ್ರಾದಲ್ಲಿ ನಡೆದ ಈ ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎನ್ನುವುದನ್ನು ಈ ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ಗೋಧ್ರಾ ದುರಂತದ ಚಿತ್ರಣವನ್ನು ನೋಡಬಹುದಾಗಿದೆ.
The Kerala Story: ಮತಾಂತರದ ರೋಲ್ ಒಪ್ಪಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ 'ಆಸಿಫಾ'
2002 ರ ಗೋಧ್ರಾ ಗಲಭೆಯ ಕುರಿತಾದ ಈ ಚಿತ್ರವು ಗಲಭೆಗೆ ಕಾರಣವಾದ ವಿಷಯವನ್ನು ಆಳವಾಗಿ ಅಧ್ಯಯನ ಮಾಡಿ ಪ್ರಸ್ತುತಪಡಿಸುತ್ತಿದ್ದೇವೆ. ಇದು ಸತ್ಯ ಘಟನೆಗಳನ್ನು ಆಧರಿಸಿದೆ ಎಂದು ಟೀಸರ್ನಲ್ಲಿ ತಿಳಿಸಲಾಗಿದೆ. ಸಬರಮತಿ ಎಕ್ಸ್‌ಪ್ರೆಸ್ ಮೇಲಿನ ದಾಳಿಯನ್ನು 'ಘೋರ' ಎಂದು ಇದರಲ್ಲಿ ತೋರಿಸಲಾಗಿದೆ. ಕೋಮುಗಲಭೆಗಳಿಗೂ ಕಾರಣವಾದ ಈ ದಾಳಿಯ ಹಿಂದಿನ ಕಾರಣವೇನು ಎಂಬುದನ್ನು ಚಿತ್ರದಲ್ಲಿ ಬಹಿರಂಗಪಡಿಸಲು ಪ್ರಯತ್ನಿಸಲಾಗಿದೆ ಎಂದು ತಿಳಿಸಲಾಗಿದೆ. ಟೀಸರ್‌ನಲ್ಲಿರುವ ದೃಶ್ಯಗಳು ನಾನಾವತಿ ಆಯೋಗದ ವರದಿಯನ್ನು ಆಧರಿಸಿದೆ ಎಂದು ವಿವರಣೆ ನೀಡಲಾಗಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಅದನ್ನು ನಂತರ ಪ್ರಕಟಿಸಲಾಗುವುದು. 'ಈ ಚಿತ್ರವನ್ನು ಸಾಕಷ್ಟು ಶ್ರಮ ಮತ್ತು ಐದು ವರ್ಷಗಳ ಸಂಶೋಧನೆಯ ನಂತರ ರೆಡಿ ಮಾಡಲಾಗಿದೆ. ಈ ಚಿತ್ರಕ್ಕಾಗಿ ಸಂಶೋಧನೆಯ ಸಮಯದಲ್ಲಿ ಅನೇಕ ಆಘಾತಕಾರಿ ಸಂಗತಿಗಳನ್ನು ಎದುರಿಸಬೇಕಾಯಿತು. ಎಲ್ಲ ಘಟನೆಗಳನ್ನು ಸಾಕ್ಷ್ಯದೊಂದಿಗೆ (Evidence) ಚಲನಚಿತ್ರದಲ್ಲಿ ಉತ್ತಮವಾಗಿ ಪ್ರಸ್ತುತಪಡಿಸಲಾಗಿದೆ ಎಂದು ಟೀಸರ್‌ನಲ್ಲಿರುವ ಟಿಪ್ಪಣಿಯಲ್ಲಿ ಬರೆಯಲಾಗಿದೆ.
‘GODHRA’ TEASER OUT NOW… : Accident or Conspiracy teaser unveils… Directed by … Produced by and … In *cinemas* soon. 🔗: https://t.co/jAI43tpalS pic.twitter.com/MquTPtQBZM
— taran adarsh (@taran_adarsh)