12 ದಿನಗಳಲ್ಲಿ 96 ಕೋಟಿ ರೂ. ಗಳಿಸಿದ 'ಕಿಸ್'​ ಬ್ಯೂಟಿಯ 'ಧಮಾಕಾ' ಚಿತ್ರ

By Suvarna NewsFirst Published Jan 5, 2023, 3:56 PM IST
Highlights

ರವಿತೇಜ ಮತ್ತು ಶ್ರೀಲೀಲಾ ನಟಿಸಿರುವ ತೆಲುಗಿನ ಧಮಾಕಾ ಚಿತ್ರ ಬಹಳ ಸೌಂಡ್​ ಮಾಡುತ್ತಿದ್ದು, ರಿಲೀಸ್​ ಆದ 12 ದಿನಗಳಲ್ಲಿ ಹತ್ತಿರತ್ತಿರ 100 ಕೋಟಿ ರೂಪಾಯಿಗಳನ್ನು ಗಳಿಸಿದೆ.

ಕನ್ನಡದ ಬೆಡಗಿ  ಶ್ರೀಲೀಲಾ ಎಂದಾಕ್ಷಣ ನೆನಪಿಗೆ ಬರುವುದು ಸೂಪರ್​ಹಿಟ್​ ಕನ್ನಡ ಚಲನಚಿತ್ರ 'ಕಿಸ್'​.(Kiss) ಈ ಚಿತ್ರದ ಮೂಲಕ  ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರೋ  ಶ್ರೀಲೀಲಾ‌ ಈಗ ಮತ್ತೊಮ್ಮೆ ಹವಾ ಸೃಷ್ಟಿಸಿದ್ದಾರೆ. ಕಿಸ್​, ಭರಾಟೆ,  ಧ್ರುವ ಸರ್ಜಾ ಅಭಿನಯದ ದುಬಾರಿ ಚಿತ್ರಗಳಲ್ಲಿ ಸೈ ಎನಿಸಿಕೊಂಡಿರುವ  ಈ ಕಿಸ್​ ಬ್ಯೂಟಿ ಈಗ ತೆಲುಗಿನಲ್ಲಿಯೂ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ನಟ ರವಿತೇಜ ಅವರ ಜೊತೆಗೆ ನಟಿಸಿದ 'ಧಮಾಕಾ' ಚಿತ್ರ 12 ದಿನಗಳಲ್ಲಿ 96 ಕೋಟಿ ರೂಪಾಯಿಗಳನ್ನು ಗಳಿಸಿ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಮಾತ್ರವಲ್ಲದೇ ಈ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ರೂ. 10 ಕೋಟಿಗೆ ಸೇಲ್ ಆಗಿದೆ. ಮತ್ತೊಂದೆಡೆ, ಸ್ಯಾಟ್​​ಲೈಟ್ ಹಾಗೂ ಡಿಜಿಟಲ್ ಹಕ್ಕುಗಳು ರೂ. 20 ಕೋಟಿಗೆ ಮಾರಾಟವಾಗಿದೆ.

ರಷ್ಯದಲ್ಲಿಯೂ ಚಿಂದಿ ಉಡಾಯಿಸಿದ 'ಪುಷ್ಪ: ದಿ ರೈಸ್' ಗಳಿಸಿದ್ದೆಷ್ಟು ಗೊತ್ತಾ?

ಆಕ್ಷನ್ ಎಂಟರ್‌ಟೈನರ್ ಚಿತ್ರವಾಗಿರುವ ಧಮಾಕಾದಲ್ಲಿ  ರವಿತೇಜ ಅವರದ್ದು  ಡಬಲ್ ರೋಲ್.  ಡಿಸೆಂಬರ್ 23 ರಂದು ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರಕ್ಕೆ ತ್ರಿನಾಥ ರಾವ್ ನಕ್ಕಿನ ನಿರ್ದೇಶನ ಮಾಡಿದ್ದಾರೆ. ದ ಈ ಚಿತ್ರವನ್ನು ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಮತ್ತು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಜಂಟಿಯಾಗಿ ನಿರ್ಮಿಸಿದ್ದಾರೆ. ಭೀಮ್ ಸಿಸೆರೊಲಿಯೊ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ರಮೇಶ್ ವರ್ಮಾ (Ramesh Vermna) ನಿರ್ದೇಶನದ ಕಿಲಾಡಿಗಳು ಮತ್ತು ಶರತ್ ಮಾಂಡವ ನಿರ್ದೇಶನದ ರಾಮರಾವ್ ಅವರ ಆನ್ ಡ್ಯೂಟಿ ಚಿತ್ರಗಳು ಫ್ಲಾಪ್​ ಆಗಿ ನಿರಾಸೆಯಲ್ಲಿದ್ದ  ರವಿತೇಜಗೆ ಈ ಸಿನಿಮಾ ಬ್ರೇಕ್ ಕೊಟ್ಟಿದೆ.  

ಇದು ರವಿತೇಜ ಅವರ ಮಾತನಾದರೆ, ಇನ್ನು ಶ್ರೀಲೀಲಾ ಅವರ ಬಗ್ಗೆ ಹೇಳುವುದಾದರೆ, ಕನ್ನಡದ ಈ ಬೆಡಗಿ  ತೆಲುಗು ಚಿತ್ರರಂಗದಲ್ಲಿಯೂ ಭದ್ರವಾಗಿ ನೆಲೆಯೂರುತ್ತಿದ್ದಾರೆ. 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಶ್ರೀಲೀಲಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಈಗ 'ಧಮಾಕಾ' (Dhamaka) ಚಿತ್ರದಿಂದ ಇವರಿಗೂ ಭಾರಿ ಬ್ರೇಕ್ ಸಿಕ್ಕಿದೆ. ಈಚೆಗೆ ಚಿತ್ರ ಸಕ್ಸಸ್ ಮೀಟ್​ನಲ್ಲಿ ಕೂಡ ಕೂಡ  ಶ್ರೀಲೀಲಾರನ್ನು ನಟ ರವಿ ತೇಜ ಹಾಡಿ ಹೊಗಳಿದ್ದರು. ಶ್ರೀಲೀಲಾ ಡಾನ್ಸ್, ಎಕ್ಸ್‌ಪ್ರೆಷನ್ ಹಾಗೂ ನಟನೆಗೆ ಅಭಿಮಾನಿಗಳು ಮನಸೋತಿದ್ದಾರೆ.

'ಬೇಶರಂ ರಂಗ್'​ಗೆ ಭಾರಿ ಟ್ವಿಸ್ಟ್: ಕಳಚಿ ಹೋಗುತ್ತಾ ದೀಪಿಕಾ ಪಡುಕೋಣೆಯ ಕೇಸರಿ ಬಿಕಿನಿ?

ಇದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸಕ್ರೀಯರಾಗಿರುವ ನಟಿ, ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್​ ಗಳಲ್ಲಿ ತಮ್ಮ ಹೊಸ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾ ಹೆಚ್ಚೆಚ್ಚು ಅಭಿಮಾನಿಗಳನ್ನು ಗಳಿಸಿದ್ದಾರೆ, ಅಭಿಮಾನಿಗಳಿಗೆ ಹತ್ತಿರವೂ ಆಗಿದ್ದಾರೆ.

ಇಷ್ಟೇ ಅಲ್ಲದೇ, ಧಮಾಕಾ ಚಿತ್ರದ ಪ್ರಮೋಷನ್​ ವೇಳೆ ಕನ್ನಡದ ಬಗ್ಗೆ ಅಭಿಮಾನ ವ್ಯಕ್ತಪಡಿಸುವ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರರಾದವರು ಶ್ರೀಲೀಲಾ. ಕಾಂತಾರಾ ಚಿತ್ರದ ಸಕ್ಸಸ್​ ಬಗ್ಗೆ ಇವರಿಗೆ ಕೇಳಿದ್ದಾಗ, ಶ್ರೀಲೀಲಾ 'ನಾನು ಕರ್ನಾಟಕದಿಂದ ಬಂದವಳು. ನಮ್ಮ ಕನ್ನಡ ಸಿನಿಮಾಗಳು ದೇಶಾದ್ಯಂತ ಸದ್ದು ಮಾಡುತ್ತಿರುವುದು ನನಗೆ ತುಂಬ ಖುಷಿಯನ್ನು ನೀಡಿದೆ. ಅದು ತುಂಬಾ ಹೆಮ್ಮೆಯ ಕ್ಷಣ. ನಮ್ಮ ಕನ್ನಡ ಚಿತ್ರರಂಗಕ್ಕೆ ತುಂಬ ದೊಡ್ಡ ಹೃದಯವಿದೆ' ಎಂದಿದ್ದು ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಅಂದಹಾಗೆ, ಧಮಾಕಾ ಚಿತ್ರದಲ್ಲಿ ರವಿತೇಜಾ (Raviteja)- ಶ್ರೀಲೀಲಾ ಜೋಡಿಯ ಹಾಡು ಸಿಕ್ಕಾಪಟ್ಟೆ ಫೇಮಸ್​  ಆಗಿದೆ. ಚಿತ್ರದಲ್ಲಿ ಕಾಮಿಡಿ ಜೊತೆ ಹಾಡುಗಳೂ ಜನಮನ ಗೆದ್ದಿವೆ. ಶ್ರೀಲೀಲಾ (Shreeleela) ಅವರು ತಮ್ಮ ನೃತ್ಯದ ಹಾಗೂ ಅಭಿನಯದ ಶೈಲಿಯಿಂದ  ಯಾವ ರೀತಿ ಮೋಡಿ ಮಾಡಿದ್ದಾರೆ ಎಂದರೆ ಶ್ರೀಲೀಲಾ ಅವರ ನೃತ್ಯಕ್ಕೆ ಸ್ಪರ್ಧೆ ನೀಡುವ ಯಾವ ನಟಿಯೂ ಇಂಡಸ್ಟ್ರಿಯಲ್ಲಿಲ್ಲ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ.

ಅಷ್ಟಕ್ಕೂ ಧಮಾಕಾ ಚಿತ್ರ ಇಷ್ಟೆಲ್ಲಾ ಮೋಡಿಮಾಡಲು ಇದರಲ್ಲಿನ ವಿಶೇಷ ಕಥೆಯೇ ಕಾರಣ ಎಂದುನೀವೆಂದುಕೊಂಡರೆ ಅದು ತಪ್ಪು. ಏಕೆಂದರೆ ಈ ಚಿತ್ರ  ವಿಶೇಷವಾದ ಕಥೆಯನ್ನೇನೂ ಹೊಂದಿಲ್ಲ. ಮಾಮೂಲಿ  ಮಸಾಲ ಕಥೆಯನ್ನು ಹೊಂದಿದೆ.  ಆದರೆ  ಫ್ಯಾಮಿಲಿ ಕಾಮಿಡಿ ಎಂಟರ್‌ಟೈನರ್ ಆಗಿದೆ ಎಂದು ಚಿತ್ರರಸಿಕರು ಹೇಳುತ್ತಿದ್ದಾರೆ. ಇಂತಹ ಮನರಂಜನೆ ಇರುವ ತೆಲುಗು ಕಮರ್ಷಿಯಲ್ ಚಿತ್ರ (Commercial Film)  ಬಂದು ಹಲವು ವರ್ಷಗಳಾಗಿದ್ದರಿಂದ ಇದಕ್ಕೆ ಇಷ್ಟು ಡಿಮಾಂಡ್​ ಎನ್ನಲಾಗುತ್ತಿದೆ.

 

click me!