
ಸಮಂತಾ ಕೆಲವು ದಿನಗಳ ಮೊದಲು ಕಪ್ಪು ಡ್ರೆಸ್ ಧರಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ನಾಗ ಚೈತನ್ಯ ಜೊತೆಗಿನ ಮದುವೆಯಲ್ಲಿ ಧರಿಸಿದ್ದ ಗೌನ್ ಅದಾಗಿತ್ತು. ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ, ಮದುವೆಯ ಸ್ಮರಣಿಕೆಗಳು ಕಹಿ ನೆನಪುಗಳಾದವು. ಅದಕ್ಕಾಗಿಯೇ ಸಮಂತಾ ಆ ಮದುವೆಯ ಗೌನ್ ಅನ್ನು ವಿನ್ಯಾಸ ಮತ್ತು ಬಣ್ಣವನ್ನು ಬದಲಾಯಿಸಿ ಹೊಸ ಡ್ರೆಸ್ ಆಗಿ ಪರಿವರ್ತಿಸಿದರು. ಸಮಂತಾಳ ಈ ಹೊಸ ಡ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಯಿತು. ಆ ಗೌನ್ ಅನ್ನು ಮರುವಿನ್ಯಾಸಗೊಳಿಸಿದ ಡಿಸೈನರ್ ಕ್ರೆಶಾ ಬಜಾಜ್ ಇತ್ತೀಚೆಗೆ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ.
2017ರ ಅಕ್ಟೋಬರ್‌ನಲ್ಲಿ ನಟ ನಾಗ ಚೈತನ್ಯ ಅವರನ್ನು ಸಮಂತಾ ವಿವಾಹವಾದರು. ಈ ವಿವಾಹ ಕ್ರೈಸ್ತ ಮತ್ತು ಹಿಂದೂ ಸಂಪ್ರದಾಯದಲ್ಲಿ ಅದ್ದೂರಿಯಾಗಿ ನೆರವೇರಿತು. ನಾಲ್ಕು ವರ್ಷಗಳ ನಂತರ, ಅವರಿಬ್ಬರೂ ವಿಚ್ಛೇದನ ಪಡೆದರು. ಬಳಿಕ ಸಮಂತಾ ತಮ್ಮ ಮದುವೆಯ ಗೌನ್ ಅನ್ನು ಕಪ್ಪು ಬಣ್ಣದ ಡಿಸೈನರ್ ಡ್ರೆಸ್ ಆಗಿ ಪರಿವರ್ತಿಸಿದರು. ಪ್ರಸಿದ್ಧ ಡಿಸೈನರ್ ಕ್ರೆಶಾ ಬಜಾಜ್ ಈ ಕಪ್ಪು ಡ್ರೆಸ್ ಅನ್ನು ವಿನ್ಯಾಸಗೊಳಿಸಿದ್ದಾರೆ.
ಮದುವೆ ಬಟ್ಟೆಗಳನ್ನು ಯಾಕೆ ಬದಲಾಯಿಸಿದ್ರು?
ಇತ್ತೀಚಿನ ಸಂದರ್ಶನವೊಂದರಲ್ಲಿ ಕ್ರೆಶಾ ಬಜಾಜ್ ಈ ಬಗ್ಗೆ ಮಾತನಾಡಿದ್ದಾರೆ. “ಈ ಗೌನ್ ಬದಲಾವಣೆಯ ಹಿಂದಿನ ಉದ್ದೇಶ ಸೇಡು ತೀರಿಸಿಕೊಳ್ಳುವುದಲ್ಲ. ಭೂತಕಾಲವನ್ನು ಅಳಿಸಿಹಾಕುವ ಉದ್ದೇಶವೂ ಅಲ್ಲ. ಅದಕ್ಕಾಗಿಯೇ ಸಮಂತಾ ಆ ಡ್ರೆಸ್ ಅನ್ನು ಬಿಸಾಡಬೇಕೆಂದುಕೊಳ್ಳಲಿಲ್ಲ. ಒಂದು ಭಾವನಾತ್ಮಕ ನೆನಪಾಗಿ ಹೊಸ ಆರಂಭ ಮಾಡಬೇಕೆಂಬ ಉದ್ದೇಶದಿಂದ ಮದುವೆಯ ಗೌನ್ ಅನ್ನು ಪಾರ್ಟಿ ವೇರ್ ಆಗಿ ಪರಿವರ್ತಿಸಿಕೊಂಡರು” ಎಂದು ಕ್ರೆಶಾ ಬಜಾಜ್ ಹೇಳಿದ್ದಾರೆ.
ಸಮಂತಾ ವೈಯಕ್ತಿಕ ಜೀವನ ಹೊಸ ಹಂತಕ್ಕೆ ಪ್ರವೇಶಿಸಿದರೆ, ನಾಗ ಚೈತನ್ಯ ಈಗಾಗಲೇ ನಟಿ ಶೋಭಿತಾ ಧೂಳಿಪಾಳ ಅವರನ್ನು ವಿವಾಹವಾಗಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಮತ್ತೊಂದೆಡೆ, ಸಮಂತಾ ಮತ್ತು ನಿರ್ದೇಶಕ ರಾಜ್ ನಿಡುಮೊರು ನಡುವೆ ಸಂಬಂಧವಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಮಂತಾ ಮದುವೆಯ ಗೌನ್ ಅನ್ನು ಮರುವಿನ್ಯಾಸಗೊಳಿಸುವುದು ಕೇವಲ ಫ್ಯಾಷನ್ ಹೇಳಿಕೆಯಲ್ಲ, ವೈಯಕ್ತಿಕ ಸ್ವೀಕಾರದ ಸಂಕೇತ ಎಂದು ಡಿಸೈನರ್ ಸ್ಪಷ್ಟಪಡಿಸಿದ್ದಾರೆ.
ನಿರ್ಮಾಪಕಿಯಾಗಿ ಸಮಂತಾ
ಸಮಂತಾ ಇತ್ತೀಚೆಗೆ ನಿರ್ಮಾಪಕಿಯಾಗಿ 'ಶುಭಂ' ಚಿತ್ರವನ್ನು ನಿರ್ಮಿಸಿದ್ದು ಗೊತ್ತೇ ಇದೆ. ಈ ಚಿತ್ರ ಸಾಧಾರಣ ಯಶಸ್ಸು ಗಳಿಸಿದೆ. OTT ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರ ಚೆನ್ನಾಗಿ ಓಡುತ್ತಿದೆ. ಹಾಸ್ಯಮಯ ಕಥಾವಸ್ತುವಿನೊಂದಿಗೆ ಗಂಡ-ಹೆಂಡತಿಯ ನಡುವಿನ ಸಂಬಂಧ ಹೇಗಿರಬೇಕು ಎಂಬ ಸಣ್ಣ ಸಂದೇಶದೊಂದಿಗೆ ಈ ಚಿತ್ರವನ್ನು ನಿರ್ಮಿಸಲಾಗಿದೆ. ಈ ಚಿತ್ರದಲ್ಲಿ ಸಮಂತಾ ಮಾಯ ಪಾತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.