Deepika Padukone: ತಂದೆಯ ಜೀವನಾಧರಿತ ಚಿತ್ರ ನಿರ್ಮಿಸಲಿರುವ ದೀಪಿಕಾ

By Suvarna NewsFirst Published Feb 19, 2022, 4:59 PM IST
Highlights

ಸಿನಿರಂಗದಲ್ಲಿ ಈಗಾಗಲೇ ಬಯೋಪಿಕ್​ ಚಿತ್ರ ಮಾಡುವ ಟ್ರೆಂಡ್​ ಆರಂಭವಾಗಿದ್ದು, ಇತ್ತೀಚೆಗಷ್ಟೇ ಭಾರತ 1983ರಲ್ಲಿ ಕ್ರಿಕೆಟ್‌ ವಿಶ್ವಕಪ್‌ ಗೆದ್ದಿದ್ದರ ಕುರಿತ '83' ಸಿನಿಮಾ ತೆರೆಗೆ ಬಂದಿತ್ತು. ಇದಕ್ಕೆ ಈಗ ಹೊಸ ಸೇರ್ಪಡೆಯೊಂದು ಆಗುವುದರಲ್ಲಿದೆ.
 

ಸಿನಿರಂಗದಲ್ಲಿ ಈಗಾಗಲೇ ಬಯೋಪಿಕ್​ (Biopic) ಚಿತ್ರ ಮಾಡುವ ಟ್ರೆಂಡ್​ ಆರಂಭವಾಗಿದ್ದು, ಸಿನಿಮಾ ಮಂದಿ, ಕ್ರೀಡಾ ಪಟುಗಳು, ರಾಜಕಾರಣಿಗಳು ಸೇರಿದಂತೆ ದೊಡ್ಡ ಸಾಧನೆ ಮಾಡಿದವರ ಕುರಿತಂತಹ ಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಇತ್ತೀಚೆಗಷ್ಟೇ ಭಾರತ 1983ರಲ್ಲಿ ಕ್ರಿಕೆಟ್‌ ವಿಶ್ವಕಪ್‌ ಗೆದ್ದಿದ್ದರ ಕುರಿತ '83' ಚಿತ್ರ ತೆರೆಗೆ ಬಂದಿತ್ತು. ಇದಕ್ಕೆ ಈಗ ಹೊಸ ಸೇರ್ಪಡೆಯೊಂದು ಆಗುವುದರಲ್ಲಿದೆ. ಹೌದು! ಕರ್ನಾಟಕ ಮೂಲದ ಬಾಲಿವುಡ್ (Bollywood) ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ತಂದೆ ಪ್ರಕಾಶ್​ ಪಡುಕೋಣೆ (Prakash Padukone) ಕುರಿತು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ. 

ದೀಪಿಕಾ ಅವರ ತಂದೆ ಪ್ರಕಾಶ್​ ಪಡುಕೋಣೆ (Prakash Padukone) ಬ್ಯಾಡ್ಮಿಂಟನ್​ ಆಟಗಾರನಾಗಿದ್ದರು (Badminton Player). ವಿಶ್ವಮಟ್ಟದಲ್ಲಿ ಅವರು ಭಾರತವನ್ನು (India) ಪ್ರತಿನಿಧಿಸಿದ್ದರು. ಈ ಬಗ್ಗೆ ದೀಪಿಕಾಗೆ ಹೆಮ್ಮೆ ಇದೆ. ಅವರು ಮಾಡಿದ ಸಾಧನೆ, ಅವರು ಕ್ರೀಡಾ ಜಗತ್ತಿಗೆ ನೀಡಿದ ಕೊಡುಗೆ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಇದನ್ನು ಜಗತ್ತಿಗೆ ತಿಳಿಸಬೇಕು ಎಂಬುದು ದೀಪಿಕಾ ಆಸೆ. ಹೀಗಾಗಿ, ಅವರು ತಂದೆ ಕುರಿತು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಇತ್ತೀಚೆಗೆ ದೀಪಿಕಾಳ ಪತಿ ರಣವೀರ್‌ ಸಿಂಗ್‌ (Ranveer Singh) ಭಾರತ 1983ರಲ್ಲಿ ಕ್ರಿಕೆಟ್‌ ವಿಶ್ವಕಪ್‌ ಗೆದ್ದಿದ್ದರ ಕುರಿತ '83' ಚಿತ್ರವನ್ನು ನಿರ್ಮಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 

Latest Videos

'ಗೆಹ್ರಾಯಿಯಾ' ಪ್ರಮೋಷನ್‌ ವೇಳೆಯ Deepika Padukone ಸೆಕ್ಸಿ ಹಾಟ್‌ ಲುಕ್‌ !

ಈ ಕುರಿತು ಯೂಟ್ಯೂಬ್‌ (Youtube) ಚಾನೆಲ್‌ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ದೀಪಿಕಾ, '1983ರಲ್ಲಿ ಭಾರತ ವಿಶ್ವಕಪ್‌ ಗೆಲ್ಲುವಕ್ಕಿಂತಲೂ ಮೊದಲು ನನ್ನ ತಂದೆ 1981 ರಲ್ಲೇ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ ಗೆಲ್ಲುವ ಮೂಲಕ ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದ್ದರು. ಆಗಿನ ಕಾಲದಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಸೌಲಭ್ಯಗಳಿರಲಿಲ್ಲ. ಬ್ಯಾಡ್ಮಿಂಟನ್‌ ಕೋರ್ಟ್‌ ಇಲ್ಲದೇ ನನ್ನ ತಂದೆ ವಿವಾಹದ ಹಾಲ್‌ನಲ್ಲಿ ಆಡುತ್ತಿದ್ದರು. ಈಗ ಕ್ರೀಡಾಪಟುಗಳಿಗಿರುವ ಸೌಲಭ್ಯ ಅವರಿಗೆ ಸಿಕ್ಕಿದ್ದರೆ ಅವರು ಕ್ರೀಡೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದರು. ಮಾತ್ರವಲ್ಲದೇ ಅವರಿಗೆ ಯಾವುದೇ ಸವಲತ್ತುಗಳು ಇರಲಿಲ್ಲ. ಹಣ ಸಹ ನೀಡಲಾಗುತ್ತಿರಲಿಲ್ಲ. ಕಷ್ಟಪಟ್ಟು ಹಣ ಹೊಂದಿಸಿಕೊಂಡು ಅವರು ಆಟ ಆಡಿ ದೇಶಕ್ಕೆ ಹೆಸರು ತಂದುಕೊಟ್ಟರು ಹೀಗಾಗಿ ಅವರ ಜೀವನ, ಸಾಧನೆ ಬಗ್ಗೆ ಚಿತ್ರ ನಿರ್ಮಿಸುತ್ತೇನೆ' ಎಂದಿದ್ದಾರೆ.



ದೀಪಿಕಾ ಪಡುಕೋಣೆ  'ಕಾ ಪ್ರೊಡಕ್ಷನ್ಸ್' (Ka Production) ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದು, ಅದರ ಮೂಲಕ ಈಗಾಗಲೇ ಆಸಿಡ್ ದಾಳಿ ಸಂತ್ರಸ್ತೆಯ ಕತೆಯನ್ನು ಸಿನಿಮಾ ಮಾಡಿದ್ದಾರೆ. ಇದೀಗ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ತಂದೆಯ ಜೀವನವನ್ನು ಸಿನಿಮಾ ಆಗಿಸುವ ಯತ್ನದಲ್ಲಿದ್ದು, ಈ ಚಿತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ವಿಚಾರ ಇನ್ನಷ್ಟೇ ಅಧಿಕೃತವಾಗಬೇಕಿದೆ. ವಿಶೇಷವಾಗಿ ದೀಪಿಕಾ ಪಡುಕೋಣೆಯ ಕುಟುಂಬ ಈಗಲೂ ಬೆಂಗಳೂರಿನಲ್ಲಿಯೇ (Bengaluru) ನೆಲೆಸಿದ್ದು, ಪ್ರಕಾಶ್ ಪಡುಕೋಣೆ, ದೀಪಿಕಾರ ತಾಯಿ ಹಾಗೂ ಸಹೋದರಿ ಬೆಂಗಳೂರಿನ ಇಂದಿರಾ ನಗರದಲ್ಲಿ ವಾಸಿಸುತ್ತಿದ್ದಾರೆ. 

ದೀಪಿಕಾ ಜೊತೆ ರೊಮ್ಯಾನ್ಸ್, ಇಷ್ಟೊಂದು ಬೋಲ್ಡ್ ಸೀನ್ಸ್‌ ಇದೆ ಎನ್ನೋದು ಗೊತ್ತಿರಲೇ ಇಲ್ಲ!

ಇನ್ನು ಇತ್ತೀಚೆಗೆ ತೆರೆಗೆ ಬಂದ ಅವರ ನಟನೆಯ 'ಗೆಹ್ರೈಯಾನ್' (Gehraiyaan) ಸಿನಿಮಾದಲ್ಲಿ ದೀಪಿಕಾ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾವನ್ನು ಅನೇಕರು ಕೊಂಡಾಡಿದ್ದರೆ, ಇನ್ನೂ ಕೆಲವರು ಈ ಚಿತ್ರಕ್ಕೆ ನೆಗೆಟಿವ್​ ವಿಮರ್ಶೆ ಕೊಟ್ಟಿದ್ದರು. ಶಾರುಖ್​​ ಖಾನ್​ (Shah Rukh Khan) ನಟನೆಯ 'ಪಠಾಣ್' (Pathan) ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ಬಿಡುಗಡೆಗೆ ತಯಾರಾಗಿದೆ. ಹೃತಿಕ್​ ರೋಷನ್​ (Hrithik Roshan) ನಟನೆಯ 'ಫೈಟರ್' (Fighter) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೂ ಪ್ರಭಾಸ್-ಅಮಿತಾಭ್​ ಬಚ್ಚನ್​ ಅಭಿನಯದ 'ಪ್ರಾಜೆಕ್ಟ್​ ಕೆ' (Project K) ಚಿತ್ರಕ್ಕೂ ದೀಪಿಕಾ ಹೀರೋಯಿನ್ ಆಗಿದ್ದು, ಇಂಗ್ಲಿಷ್ ಸಿನಿಮಾದ ರೀಮೇಕ್ 'ದಿ ಇಂಟರ್ನ್' (The Intern) ಸಿನಿಮಾದಲ್ಲಿಯೂ ದೀಪಿಕಾ ಪಡುಕೋಣೆ ಅಭಿನಯಿಸಲಿದ್ದಾರೆ.

click me!