ಶಾರುಖ್ ಜೊತೆ ನಿಂತು 'ಮಧ್ಯದ ಬೆರಳು' ತೋರಿಸಿದ ನಟಿ ದೀಪಿಕಾ ಫೋಟೋ ವೈರಲ್

By Suvarna News  |  First Published Mar 21, 2022, 12:15 PM IST

ನಟಿ ದೀಪಿಕಾ ಪಡುಕೋಣೆ ಬಿಕಿನಿ ಫೋಟೋ ವೈರಲ್ ಆದ ಬೆನ್ನಲ್ಲೇ ಇದೀಗ ಛಾಯಾಗ್ರಾಹಕರಿಗೆ ಮಧ್ಯದ ಬೆರಳು ತೋರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದೀಪಿಕಾ ಸದ್ಯ ಪಠಾಣ್ ಚಿತ್ರೀಕರಣಕ್ಕೆಂದು ಸ್ಪೇನ್ ನಲ್ಲಿ ನೆಲೆಸಿದ್ದಾರೆ. 


ನಟಿ ದೀಪಿಕಾ ಪಡುಕೋಣೆ(Deepika Padukone) ಇತ್ತೀಚಿಗೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳು ಬೆರಗಾಗುವಂತೆ ಮಾಡಿದ್ದರು. ಸದ್ಯ ಸ್ಪೇನ್ ನಲ್ಲಿರುವ ದೀಪಿಕಾ ಪಡುಕೋಣೆ ಕಿಬಿನಿಯಲ್ಲಿ ದರ್ಶನ ನೀಡಿ ಪಡ್ಡೆಗಳ ನಿದ್ದೆಗೆಡಿಸಿದ್ದರು. ಅಂದಹಾಗೆ ದೀಪಿಕಾ, ಶಾರುಖ್ ಖಾನ್(Shahrukh Khan) ನಟನೆಯ ಪಠಾಣ್(Pathan) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣಕ್ಕೆಂದು ದೀಪಿಕಾ ಶಾರುಖ್ ಜೊತೆ ಸ್ಪೇನ್ ಗೆ ತೆರಳಿದ್ದಾರೆ. ಸ್ಪೇನ್ ಚಿತ್ರೀಕರಣದ ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದೀಪಿಕಾ ಬಿಕಿನಿ ಫೋಟೋ(Bikini Photo) ವೈರಲ್ ಆದ ಬೆನ್ನಲ್ಲೇ ಇದೀಗ ಛಾಯಾಗ್ರಾಹಕರಿಗೆ ಮಧ್ಯದ ಬೆರಳು ತೋರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶಾರುಖ್ ಪಕ್ಕದಲ್ಲಿ ಬಾಲ್ಕನಿಯಲ್ಲಿ ನಿಂತಿರುವ ದೀಪಿಕಾ ಛಾಯಾಗ್ರಾಕರಿಗೆ ಮಧ್ಯದ ಬೆರಳು ತೋರಿಸಿದ್ದಾರೆ. ದೀಪಿಕಾ ಅವರ ಈ ವರ್ತನೆ ಅನೇಕರಿಗೆ ಬೇಸರ ಮೂಡಿಸಿದೆ. ಈ ಫೋಟೋವನ್ನು ಶೇರ್ ಮಾಡಿರುವ ಛಾಯಾಗ್ರಾಹಕರೊಬ್ಬರು, ದೀಪಿಕಾ ಅವರ ಗೆಸ್ಚರ್ ಬಹುಶಃ ಚಿತ್ರೀಕರಣವೇಳೆ ಬಿಕಿನಿ ಧರಿಸಿದ್ದ ಫೋಟೋವನ್ನು ಸೆರೆಹಿಡಿದ ವ್ಯಕ್ತಿಗೆ ಇರಬಹುದು ಎಂದು ಪೋಸ್ಟ್ ಮಾಡಿದ್ದಾರೆ.

Tap to resize

Latest Videos

ದೀಪಿಕಾ ಕಪ್ಪು ಬಣ್ಣದ ಉದ್ದನೆಯ ಚಿಳಿಗಾಲದ ಜಾಕೆಟ್ ಧರಿಸಿದ್ದಾರೆ. ದೀಪಿಕಾ ಪಕ್ಕದಲ್ಲಿ ನಿಂತಿರುವ ಶಾರುಖ್ ಕೈಯಲ್ಲಿ ಸಿಗರೇಟ್ ಹಿಡಿದು ಬಾಯಲ್ಲಿ ಹೊಗೆಬಿಡುತ್ತಿದ್ದಾರೆ. ಈ ಫೋಟೋ ಬಗ್ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ತನ್ನ ಸೋರಿಕೆಯಾದ ಫೋಟೋಗಳಿಂದ ದೀಪಿಕಾ ನಿಜಕ್ಕೂ ಬೇಸರಗೊಂಡಿದ್ದಾರಾ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಧ್ಯಬೆರಳು ತೋರಿಸುವುದು ತೀರಾ ಸಾಮಾನ್ಯವಾಗಿದೆ ಎಂದು ಮತ್ತೋರ್ವ ಹೇಳಿದ್ದಾರೆ.

Shah Rukh Khan 'ಪಠಾಣ್' ಚಿತ್ರದ ಗೆಟಪ್ ಲೀಕ್; ಕಿಂಗ್ ಖಾನ್ 8ಪ್ಯಾಕ್ ಫೋಟೋ ವೈರಲ್

ದೀಪಿಕಾ ಫೋಟೋ ಲೀಕ್ ಆಗುವ ಮೊದಲು ಶಾರುಖ್ ಫೋಟೋಗಳು ಲೀಕ್ ಆಗಿ ವೈರಲ್ ಆಗಿತ್ತು. ಸೋರಿಕೆಯಾಗಿದ್ದ ಶಾರುಖ್ ಖಾನ್ 8ಪ್ಯಾಕ್(shahrukh khan 8 pack) ಫೋಟೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಫೋಟೋದಲ್ಲಿ ಶಾರುಖ್ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಬೇರ್ ಬಾಡಿ ಪ್ರದರ್ಶನ ಮಾಡಿದ್ದ ಶಾರುಖ್ ಉದ್ದ ಕೂದಲು ಬಿಟ್ಟು ಕಾರ್ಗೋ ಪ್ಯಾಂಟ್ ನಲ್ಲಿ ಕಾಣಿಸಿಕೊಂಡಿದ್ದರು. ಶಾರುಖ್ ಹೊಸ ಲುಕ್ ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಕಿಂಗ್ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಸಂಭ್ರಮಿಸಿದ್ದರು.

undefined

ಪಠಾಣ್ ಸಿನಿಮಾದ ಬಗ್ಗೆ..

ಪಠಾಣ್ ಸಿನಿಮಾದ ಸಿನಿಮಾದ ಬಗ್ಗೆ ಹೇಳುವುದಾದರೆ ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪಠಾಣ್ ಚಿತ್ರಕ್ಕೆ ಸಿದ್ಧಾರ್ಥ್ ಆನಂದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಯಶ್ ರಾಜ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಬಹುನಿರೀಕ್ಷೆಯ ಸಿನಿಮಾ ಮುಂದಿನ ವರ್ಷ ಜನವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಅಂದಹಾಗೆ ಶಾರುಖ್ ಖಾನ್ ಸಿನಿಮಾ ಬಿಡುಗಡೆಯಾಗದೆ ನಾಲ್ಕೈದು ವರ್ಷಗಳಾಗಿವೆ. ಹಾಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ದೀಪಿಕಾ ಪಡುಕೋಣೆ ಹಳದಿ ಬಿಕಿನಿ ಅವತಾರಕ್ಕೆ ಬೆರಗಾದ ಅಭಿಮಾನಿಗಳು

ಅಂದಹಾಗೆ ಕಿಂಗ್ ಖಾನ್ ಕೊನೆಯದಾಗಿ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಬಣ್ಣ ಹಚ್ಚುವುದನ್ನೇ ಬಿಟ್ಟಿದ್ದರು. ಇದೀಗ ಮತ್ತೆ ಅಭಿಮಾನಿಗಳ ಮುಂದೆ ಬರಲು ತಯಾರಾಗಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಈ ಸಿನಿಮಾ ಜೊತೆಗೆ ಪ್ರಭಾಸ್ ನಟನೆಯ ನಾಗ್ ಅಶ್ವಿನ್ ನಿರ್ದೇಶನದ ಹೊಸ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

 

 

click me!