'ಚಪಕ್' ಟ್ರೇಲರ್ ನೋಡಿ ವೇದಿಕೆ ಮೇಲೆ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ

By Suvarna News  |  First Published Dec 10, 2019, 4:09 PM IST

ಮನಕಲಕುವ ಸಿನಿಮಾ 'ಚಪಕ್' ಟ್ರೇಲರ್ ರಿಲೀಸ್ | ವೇದಿಕೆ ಮೇಲೆ ಮಾತೇ ಬರದೇ ಗಳಗಳನೇ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ | 


ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್ ಜೀವನಾಧಾರಿತ 'ಚಪಕ್' ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.  ಚಿತ್ರದ ಟ್ರೇಲರ್ ರಿಲೀಸ್ ವೇಳೆ ದೀಪಿಕಾ ಪಡುಕೋಣೆ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.

 

Tap to resize

Latest Videos

ಟ್ರೇಲರ್ ರಿಲೀಸ್ ಆದ ಬಳಿಕ ನೀವು ನೋಡುತ್ತೀರಿ. ನಾನು ವೇದಿಕೆ ಮೇಲೆ ಬರುತ್ತೇನೆ. ಮುಂದೇನು ಮಾತಾಡಬೇಕು  ಎಂದು ನಾನು ಯೋಚಿಸಿರಲಿಲ್ಲ' ಎಂದು ಹೇಳುತ್ತಾ ಗಳಗಳನೇ ಅಳಲು ಶುರು ಮಾಡಿದ್ದಾರೆ. ಪಕ್ಕದಲ್ಲೆ ಇದ್ದ ನಿರ್ದೇಶಕಿ ಮೇಘನಾ ಗುಲ್ಜಾರ್ ಹಾಗೂ ಸಹ ನಟ ಮೆಸ್ಸಿ ದೀಪಿಕಾರನ್ನು ಸಂತೈಸಿದ್ದಾರೆ. 

ಮಾತೇ ಬರದಂತೆ ತಡೆಯುತ್ತದೆ 'ಚಪಕ್' ಟ್ರೇಲರ್; ದೀಪಿಕಾ ಸಿಂಪ್ಲಿ ಸೂಪರ್!

 

ಸಿನಿಮಾವನ್ನು ಮೇಘನಾ ಗುಲ್ಜಾರ್ ನಿರ್ದೇಶನ ಮಾಡಿದ್ದಾರೆ.  ವಿಕ್ರಾಂತ್ ಮೆಸ್ಸಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿ 10, 2020 ರ ವೇಳೆಗೆ ತೆರೆಗೆ ಬರಲಿದೆ. 

click me!