Deepika Padukone Birthday: ದೀಪಿಕಾಳಿಂದ ರಣವೀರ್ ಕಲಿತಿರೋದು ಏನು?

By Suvarna News  |  First Published Jan 5, 2022, 5:48 AM IST

ದೀಪಿಕಾ ಪಡುಕೋಣೆಯ ಬರ್ತ್‌ಡೇ ಅಂದರೆ ಆಕೆಯ ಸಂಗಾತಿ ರಣವೀರ್ ಸಿಂಗ್‌ಗೆ ತುಂಬಾ ಸ್ಪೆಶಲ್ ಅಂತೆ. ದೀಪಿಕಾ ಪಡುಕೋಣೆಯಿಂದ ತಾನು ಕಲಿತ ಸಂಗತಿಗಳ ಬಗ್ಗೆ ರಣವೀರ್ ಹೇಳಿದ ಕೆಲವು ವಿಶೇಷ ಸಂಗತಿಗಳು ಇಲ್ಲಿವೆ.


ನಟ ರಣವೀರ್ ಸಿಂಗ್ (Ranaveer singh) ಅವರು ತಮ್ಮ ಸುಂದರ ಪತ್ನಿ ದೀಪಿಕಾ ಪಡುಕೋಣೆ (Deepika Padukone) ಅವರ ಹೆಜ್ಜೆಗಳ ಮೇಲೆ ಹೆಜ್ಜೆಯಿಡಲು ಪ್ರಯತ್ನಿಸುತ್ತಿದ್ದಾರಂತೆ. ತನ್ನ ಸೂಪರ್‌ಸ್ಟಾರ್ ಹೆಂಡತಿಯ ಬಗ್ಗೆ ಹೊಗಳಲು ಎಂದಿಗೂ ಹಿಂಜರಿಯದ ನಟ ರಣವೀರ್. ಆಕೆಯಿಂದ ತಾನು ಕಲಿಯಲು ಪ್ರಯತ್ನಿಸುತ್ತಿರುವ ಪಾಠವನ್ನು ಬಹಿರಂಗಪಡಿಸಿದ್ದಾರೆ. ಈತ ಈಕೆಯಿಂದ ಕಲಿಯುತ್ತಿರುವುದು ಬ್ಯಾಡ್ಮಿಂಟನ್ (Badminton) ಅಲ್ಲ! ‌ಬದಲಾಗಿ ಸಮಯ ನಿರ್ವಹಣೆ.

ತನ್ನ ಪತ್ನಿ ದೀಪಿಕಾ ತನ್ನ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸಮರ್ಪಕವಾಗಿ, ವೇಳಾಪಟ್ಟಿಯ ಪ್ರಕಾರ ನಿರ್ವಹಿಸುವಲ್ಲಿ ಮಾಸ್ಟರ್ ಎಂದು ರಣವೀರ್ ಭಾವಿಸುತ್ತಾರೆ. 'ಇತ್ತೀಚಿನ ದಿನಗಳಲ್ಲಿ, ನಾನು ವೃತ್ತಿ ಜೀವನದಲ್ಲಿ ತುಂಬಾ ಬ್ಯುಸಿಯಾಗಿರುವ ಮನುಷ್ಯ. ಆದರೆ ವೃತ್ತಿಯಿಂದಾಚೆಗೆ ನಾವು ನಿಜವಾಗಿಯೂ ಬಯಸುವ ಸಂಗತಿಗಳನ್ನು ಮಾಡುವುದು ಐಷಾರಾಮಿ ಎನಿಸಿಬಿಟ್ಟಿದೆ. ಯಾಕೆಂದರೆ ಸಮಯದ ಅಭಾವ. ನಾನು ಮಾಡುವ ಎಲ್ಲವನ್ನೂ ನಾನು ಪ್ರೀತಿಸುತ್ತೇನೆ, ನನ್ನ ಕೆಲಸವನ್ನು ಪ್ರೀತಿಸುತ್ತೇನೆ. ಆದರೆ ಎಲ್ಲದಕ್ಕೂ ಸಮಯದ ಸಮತೋಲನವನ್ನು ಕಾಯ್ದುಕೊಳ್ಳುವುದು ಕಷ್ಟ. ಆದರೆ ಸಮರ್ಥ ಸಮಯ ನಿರ್ವಹಣೆಯ ಬಗ್ಗೆ ಮಾತನಾಡುವಾಗ ದೀಪಿಕಾ ಬಗ್ಗೆ ಹೇಳಲೇಬೇಕು. ಆಕೆ ಅದರಲ್ಲಿ ನಿಜವಾಗಿಯೂ ಮಾಸ್ಟರ್. ಅವಳ ಹೆಜ್ಜೆಗಳನ್ನು ನಾನು ನಿಕಟವಾಗಿ ಅನುಸರಿಸುತ್ತಿದ್ದೇನೆ. ನಾನು ಅವಳಿಂದ ಸಲಹೆಗಳನ್ನು ಪಡೆಯುತ್ತಿದ್ದೇನೆ ಮತ್ತು ಉತ್ತಮವಾಗುತ್ತಿದ್ದೇನೆ' ಅಂತ ರಣವೀರ್ ಹೇಳಿದ್ದಾರೆ.

Tap to resize

Latest Videos

ಬಾಲಿವುಡ್‌ನ Single Mothers ತಮ್ಮ ತಾಯ್ತನದ ಬಗ್ಗೆ ಹೇಳುವುದೇನು?

ಇತ್ತೀಚೆಗೆ ಈ ದಂಪತಿಗಳು ಕಬೀರ್ ಖಾನ್ (Kabir khan) ಅವರ 83 ಸಿನೆಮಾದಲ್ಲಿ, ತಮ್ಮ ಮದುವೆಯ ನಂತರ ಮೊತ್ತಮೊದಲ ಬಾರಿಗೆ ಪರದೆಯನ್ನು ಜೊತೆಯಾಗಿ ಹಂಚಿಕೊಂಡಿದ್ದಾರೆ.

ಸುಮಾರು ಆರರಿಂದ ಏಳು ವರ್ಷಗಳ ಕಾಲ ಪರಸ್ಪರ ಡೇಟಿಂಗ್ (Dating) ಮಾಡಿದ ನಂತರ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಸಮ್ಮುಖದಲ್ಲಿ ಪರಸ್ಪರ ಮದುವೆಯಾಗುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಇದ್ದಾಗಲೇ ಇಬ್ಬರೂ ಮದುವೆಯಾದರು.

'ರಣವೀರ್ ಮತ್ತು ನಾನು ಹೊರಗಿರುವಾಗ, ಸಂಪೂರ್ಣವಾಗಿ ವಿಭಿನ್ನ ಜನರಂತೆ ಇರುತ್ತೇವೆ. ಆದರೆ ಕುಟುಂಬದ ನಡುವೆ ಇರುವಾಗ ನಾವು ಒಂದೇ ಆಗಿರುತ್ತೇವೆ. ನಾನು ಚಿಕ್ಕ ವಯಸ್ಸಿನಲ್ಲೇ ಮನೆಯಿಂದ ಹೊರ ಬಂದೆ. ಮಾಡೆಲಿಂಗ್ ಮತ್ತು ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈಗೆ ತೆರಳಿದೆ. ಆದರೆ ಫ್ಯಾಮಿಲಿ ನನಗೆ ಇಂಪಾರ್ಟೆಂಟ್. ಪ್ರತಿಯೊಬ್ಬರೂ ಸಂಗಾತಿಯೊಂದಿಗೆ ಇರಲು ಬಯಸುತ್ತಾರೆ, ಮತ್ತು ಕುಟುಂಬವನ್ನು ಹೊಂದಲು ಬಯಸುತ್ತಾರೆ,' ನಾನೂ ಅಷ್ಟೇ ಎಂದು ದೀಪಿಕಾ ಹೇಳಿದ್ದಾರೆ.

New Year 2022: ಹೊಸ ವರ್ಷ ಸ್ವಾಗತಕ್ಕೆ ಪ್ರಣಯ ಪಕ್ಷಿಗಳು ಎಲ್ಲಿಗೆ ಹಾರಿವೆ?

ದೀಪಿಕಾ ತನ್ನ ಕ್ರಶ್ ರಣವೀರ್‌ನ್ನು ಕರೆಯುವುದು ಮುದ್ದಾದ 'ಕ್ಯಾಂಡಿ' ಎಂಬ ನಿಕ್‌ನೇಮ್ ಮೂಲಕ. ಈ ಹೆಸರಿನಿಂದ ಕರೆಸಿಕೊಳ್ಳುವುದು ರಣವೀರ್‌ಗೂ ಇಷ್ಟವಂತೆ. ಇನ್ನು ಮದುವೆಯಾದ ಬಳಿಕ, ರಣವೀರ್‌ನ ಜೀವನದಲ್ಲಿ ತುಂಬಾ ಡಿಸಿಪ್ಲೀನ್‌ ತರಲು ದೀಪಿಕಾ ಯತ್ನಿಸಿದ್ದಾಳೆ. ಇದನ್ನು ಅವರಿಬ್ಬರೂ ಒಪ್ಪಿಕೊಂಡಿದ್ದಾರೆ.

ದೀಪಿಕಾ ಬಗ್ಗೆ ರಣವೀರ್ ಹೇಳೋದು ಹೀಗೆ: 'ನನ್ನ ಜೀವನದಲ್ಲಿ ನಾನು ಭೇಟಿಯಾದ ಅದ್ಭುತ ವ್ಯಕ್ತಿ ದೀಪಿಕಾ. ಅವಳು ನನ್ನ ಹೆಂಡತಿ(wife) ಅಂತ ಅನ್ನುವ ಕಾರಣದಿಂದ ಇದನ್ನು ಹೇಳ್ತಿಲ್ಲ. ಅವಳ ಬಗ್ಗೆ ನನ್ನ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸುವುದು ನನಗೆ ವಿಶೇಷವಾಗಿ ಸವಾಲಾಗಿದೆ. ನನ್ನ ಭಾವನೆ ವ್ಯಕ್ತಪಡಿಸಲು ಭಾಷೆ ಸೀಮಿತ ಸಾಧನವಾಗಿದೆ. ನಾನು ಈ ಜಗತ್ತಿನಲ್ಲಿ ಅವಳಿಗೆ ಅತ್ಯಂತ ಹತ್ತಿರದ ವ್ಯಕ್ತಿ. ಒಬ್ಬ ವ್ಯಕ್ತಿಯಾಗಿ ನಾನು ಅವಳನ್ನು ಆಳವಾಗಿ ತಿಳಿದಿದ್ದೇನೆ ಮತ್ತು ನಾನು ವೃತ್ತಿಪರನಾಗಿ ಅವಳೊಂದಿಗೆ ನಿಕಟವಾಗಿ ಸಹಕರಿಸಿದ್ದೇನೆ. ದೀಪಿಕಾ ತನ್ನೊಳಗೆ ಒಂದು ಜಗತ್ತನ್ನು ಪೋಷಿಸುತ್ತಾಳೆ: ಪ್ರೀತಿ, ಸಹಾನುಭೂತಿ, ದಯೆ, ಬುದ್ಧಿವಂತಿಕೆ, ಸೌಂದರ್ಯ, ಅನುಗ್ರಹ ಮತ್ತು ಸಹಾನುಭೂತಿ ಈ ಗುಣಗಳು ಅವಳನ್ನು ನಿಜವಾದ ಮತ್ತು ಅಧಿಕೃತ ಕಲಾವಿದಳನ್ನಾಗಿ ಮಾಡಿವೆ- ಅವಳು ವಿಶ್ವದ ಅತ್ಯುತ್ತಮ ನಟಿ(actress)ಯರಲ್ಲಿ ಒಬ್ಬಳು. ಅಷ್ಟಾಗಿಯೂ ಮುಗ್ಧ, ಮಗುವಿನಂತಹ ಮನಸ್ಸನ್ನು ಕಾಪಾಡಿಕೊಂಡಿದ್ದಾಳೆ ಎಂಬುದು ನನಗೆ ವಿವರಿಸಲಾಗದಷ್ಟು ಸಂತೋಷಕರ ಸಂಗತಿ. ನಾನು ವಿಶ್ವದ ಹೆಮ್ಮೆಯ ಪತಿ. ಅವಳು ನಿಜವಾಗಿಯೂ ನನ್ನ ಜೀವನದ ಬೆಳಕು."

 

click me!