ಬಾಲಿವುಡ್‌ನ ಇಬ್ಬರು ಸ್ಟಾರ್‌ಗಳ ಬಗ್ಗೆ ಜೋರಾದ ಚರ್ಚೆ.. 'ಯಾರದೂ ತಪ್ಪಲ್ಲ ಯಾರದೂ ಸರಿಯಲ್ಲ' ಅಂತಿರೋದ್ಯಾಕೆ?

Published : Dec 13, 2025, 01:20 PM IST
Deepika Padukone Vivek Oberoi

ಸಾರಾಂಶ

ವಿವೇಕ್ ಒಬೆರಾಯ್ ಹಾಗೂ ದೀಪಿಕಾ ಪಡುಕೋಣೆ ಅವರಿಬ್ಬರ ನಿಲುವು ಭಿನ್ನ ಎಂಬುದಷ್ಟೇ ವಿಷಯ. ಅದು ಅವರವರ ಜೀವನ, ಅವರವರಿಗೆ ಹಾಗೂ ಅವರ ಜೊತೆ ಕೆಲಸ ಮಾಡುವವರಿಗೆ ಸಂಬಂಧಿಸದ್ದು ಅಷ್ಟೇ.. ಮಿಕ್ಕವರು ಚರ್ಚೆ ಮಾಡಬಹುದು, ಆದರೆ ನಿರ್ಧಾರ ಅವರಿಬ್ಬರದೂ ಭಿನ್ನ ಎಂದು ಫೈನಲ್ಲಾಗಿ ಅರ್ಥ ಮಾಡಿಕೊಳ್ಳಬಹುದೇ?

ದೀಪಿಕಾ ಪಡುಕೋಣೆ V/S ವಿವೇಕ್ ಒಬೆರಾಯ್

ಸಮಾಜದಲ್ಲಿ ಎಷ್ಟೊಂದು ಬಗೆಬಗೆಯ ಜನರಿದ್ದಾರೆ. ಎಲ್ಲಾ ರಂಗಗಳಲ್ಲಿ ಇದ್ದರೂ ಇಲ್ಲಿ ಹೇಳಹೊರಟಿರುವುದು ಬಾಲಿವುಡ್ ಸ್ಟಾರ್ ನಟ-ನಟಿಗೆ ಸಂಬಂಧಪಟ್ಟ ಸ್ಟೋರಿ. ಗ್ಲಾಮರ್ ಸುದ್ದಿಗಳ ನಡುವೆ ಈ ಸುದ್ದಿ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಇನ್ನೇನೂ ಇಲ್ಲ, ಇಲ್ಲಿರುವುದು ಬಾಲಿವುಡ್‌ನ ಇಬ್ಬರು ಸ್ಟಾರ್‌ಗಳ ವಿಭಿನ್ನ ನಡವಳಿಕೆಗಳ ಬಗ್ಗೆ ಚರ್ಚೆ. ನಡವಳಿಕೆ ಅನ್ನೋದಕ್ಕಿಂತ ಇತ್ತೀಚಿನ ಇಬ್ಬರು ನಟನಟಿಯರ ಹೇಳಿಕೆಗಳು ಉದ್ಯಮದ ಆದ್ಯತೆಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿವೆ. ಅದೇನು ನೋಡಿ..

ಈ ಚರ್ಚೆಯಲ್ಲಿ ಗಮನಸೆಳೆಯುತ್ತಿರುವವರಲ್ಲಿ ಒಬ್ಬರು ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Padukone), ಇನ್ನೊಬ್ಬರು ಬಾಲಿವುಡ್ ಸ್ಟಾರ್ ನಟ ವಿವೇಕ್ ಒಬೆರಾಯ್ (Vivek Oberoi). ಭಾರತದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ನಟಿಯರಲ್ಲಿ ಒಬ್ಬರಾದ ದೀಪಿಕಾ ಪಡುಕೋಣೆ, ತಮ್ಮ ಸಂಭಾವನೆಯಲ್ಲಿ 25% ಹೆಚ್ಚಳ ಹಾಗೂ ದಿನಕ್ಕೆ ಕಡ್ಡಾಯ 7 ಗಂಟೆಗಳ ಕೆಲಸದ ಸಮಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದು ಅವರು ತಮ್ಮ ಅಮೂಲ್ಯ ಸಮಯ, ವಿಶ್ರಾಂತಿ ಹಾಗೂ ವರ್ಕ್–ಲೈಫ್ ಬ್ಯಾಲೆನ್ಸ್‌ಗೆ ಅವರು ಕೊಡುತ್ತಿರುವ ಮಹತ್ವವನ್ನು ತೋರಿಸುತ್ತದೆ ಎನ್ನಬಹುದು.

ಆದರೆ, ದೀಪಿಕಾರ ವಿರುದ್ಧವಾಗಿ ಯೋಚನೆ ಮಾಡುತ್ತಿರುವ ಇನ್ನೊಬ್ಬರು, ಅಂದರೆ ವಿವೇಕ್ ಒಬೆರಾಯ್ ಅವರು ಅನಿಸಿಕೆ ಕೂಡ ಇಲ್ಲಿದೆ. ಯಶ್ 'ರಾಮಾಯಣ' ಚಿತ್ರದಲ್ಲಿ ವಿಭೀಷಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ವಿವೇಕ್ ಓಬರಾಯ್, ಸಂಪೂರ್ಣ ಭಿನ್ನ ದಾರಿಯಲ್ಲಿ ಯೋಚಿಸುತ್ತಿದ್ದಾರೆ. ಅವರು ತಮ್ಮ ಸಂಪೂರ್ಣ ಸಂಭಾವನೆಯನ್ನು ಮಕ್ಕಳ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳಿಗಾಗಿ ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅವರು ನಟರಾಗಿ ಯೋಚಿಸದೇ ಮಾನವೀಯ ಸೇವೆಯ ರೂಪವೂ ಆಗಿದೆ ಎನ್ನಬಹುದು.

ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

ಇದೀಗ, ಈ ಎರಡೂ ಭಿನ್ನ ನಡೆಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಆಹ್ವಾನ ನೀಡಿವೆ. ಒಬ್ಬರು ವೃತ್ತಿಪರತೆ, ನ್ಯಾಯಸಮ್ಮತ ಸಂಬಳದ ಬಗ್ಗೆ ಮಾತನ್ನಾಡುತ್ತಿದ್ದರೆ ಮತ್ತೊಬ್ಬರು ಸೇವೆಗೆ ಸಂಬಳವನ್ನೂ ಸಮರ್ಪಿಸಲು ನಿರ್ಧರಿಸಿದ್ದಾರೆ. ಇಲ್ಲಿ ಯಾರು ಸರಿ ಯಾರು ತಪ್ಪು ಎಂಬ ಚರ್ಚೆಯ ಅಗತ್ಯವೇ ಇಲ್ಲ. ಏಕೆಂದರೆ, ಅವರಿಬ್ಬರೂ ವಿಭಿನ್ನ ವ್ಯಕ್ತಿತ್ವ ಹಾಗೂ ವಿಭಿನ್ನ ಆಲೋಚನೆ ಹೊಂದಿರುವವರು. ಇದು ಯಶಸ್ಸು ಮತ್ತು ಜೀವನದ ಉದ್ದೇಶವನ್ನು ಜನರು ಹೇಗೆ ವಿಭಿನ್ನವಾಗಿ ತೆಗದುಕೊಳ್ಳುತ್ತಾರೆ ಎಂಬುದನ್ನು ತೋರಿಸುತ್ತದೆ ಎನ್ನಬಹುದು.

ವಿವೇಕ್ ಒಬೆರಾಯ್: ಬಹಳಷ್ಟು ಜನರು ಐಶ್ವರ್ಯ, ಖ್ಯಾತಿ ಮತ್ತು ಹಣದ ಹಿಂದೆ ಓಡುವ ಜಗತ್ತಿನಲ್ಲಿ, ನಟ ವಿವೇಕ್ ಓಬರಾಯ್ ಅವರ ನಡೆಯು 'ಮಾನವೀಯತೆ ಇನ್ನೂ ಜೀವಂತವಾಗಿದೆ' ಎಂಬುದನ್ನು ನೆನಪಿಸುತ್ತದೆ.

ವರ್ಕ್–ಲೈಫ್ ಬ್ಯಾಲೆನ್ಸ್ ಬೇಡಿಕೆ ತಪ್ಪಾ?

ದೀಪಿಕಾ ಪಡುಕೋಣೆ: ಸಿನಿಮಾರಂಗದಂಥಹ ಒತ್ತಡದ ಉದ್ಯಮಗಳಲ್ಲಿ ವರ್ಕ್–ಲೈಫ್ ಬ್ಯಾಲೆನ್ಸ್ ಬೇಡಿಕೆ ತಪ್ಪಾ? ದೀಪಿಕಾ ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ. ಅದನ್ನು ಪೂರೈಸುವುದು ಅಥವಾ ಬಿಡುವುದು ಸಂಬಂಧಪಟ್ಟವರಿಗೆ ಬಿಟ್ಟಿದ್ದು ಎನ್ನಬಹುದು.

ಇಲ್ಲಿ ದೀಪಿಕಾ ಪಡುಕೋಣೆ ನಿರ್ಧಾರದಿಂದ ಸಿನಿಮಾ ಉದ್ಯಮದವರಿಗೆ ಮುಂದಿನ ದಿನಗಳಲ್ಲಿ ಸಹಾಯ ಆಗುವುದು ಖಂಡಿತ.. ಅದೇ ರೀತಿ, ವಿವೇಕ್ ಒಬೆರಾಯ್‌ ನಿಲುವು ಸಮಾಜಕ್ಕೆ ಉಪಕಾರಿ ಎಂಬುವುದರಲ್ಲೂ ಯಾವದೇ ಸಂಶಯವಿಲ್ಲ. ಇವರೆಡೂ ಎರಡು ವ್ಯಕ್ತಿಗಳ ವಿಭಿನ್ನ ಆಲೋಚನೆಗಳು ಎನ್ನುವುದು ಸೂಕ್ತ ಅಲ್ಲವೇ?

ಇಲ್ಲಿ ವಿವೇಕ್ ಒಬೆರಾಯ್ ಹಾಗೂ ದೀಪಿಕಾ ಪಡುಕೋಣೆ ಅವರಿಬ್ಬರ ನಿಲುವು ಭಿನ್ನ ಎಂಬುದಷ್ಟೇ ವಿಷಯ. ಅದು ಅವರವರ ಜೀವನ, ಅವರವರಿಗೆ ಹಾಗೂ ಅವರ ಜೊತೆ ಕೆಲಸ ಮಾಡುವವರಿಗೆ ಸಂಬಂಧಿಸದ್ದು ಅಷ್ಟೇ.. ಮಿಕ್ಕವರು ಚರ್ಚೆ ಮಾಡಬಹುದು, ಆದರೆ ನಿರ್ಧಾರ ಅವರಿಬ್ಬರದೂ ಭಿನ್ನ ಎಂದು ಫೈನಲ್ಲಾಗಿ ಅರ್ಥ ಮಾಡಿಕೊಳ್ಳಬಹುದು. ಒಟ್ಟಿನಲ್ಲಿ, ಬಾಲಿವುಡ್‌ನ ಈ ಇಬ್ಬರು ಸೆಲೆಬ್ರೆಟಿಗಳು ಸದ್ಯ ವಿಭಿನ್ನ ನಿಲುವಿನ ಮೂಲಕ ಸಮಾಜದ ಎರಡು ವಿಭಿನ್ನ ಮನಸ್ಥಿತಿಯನ್ನು ಪ್ರತಿನಿಧಿಸುತ್ತಿದ್ದಾರೆ ಎನ್ನಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆಯಾದರೆ ಖಂಡಿತ ತಾಯಿಯಾಗಬೇಕು.. ನನಗೆ ಒಳ್ಳೆ ಪಾರ್ಟ್ನರ್ ಬೇಕು: ಶ್ರುತಿ ಹಾಸನ್ ಹೇಳಿಕೆ ವೈರಲ್!
ಯೂಟ್ಯೂಬರ್ ಆಶಿಶ್ ಚಂಚಲಾನಿ 'ಏಕಾಕಿ' ಸೀರೀಸ್‌ಗೆ ಫಿದಾ ಆದ ರಾಜಮೌಳಿ.. ದಿಗ್ಗಜ ನಿರ್ದೇಶಕ ಹೇಳಿದ್ದೇನು?