BMW ಕಾರು, ಚಿನ್ನದ ನಾಣ್ಯ: ನಾನಿ 'ದಸರಾ' ತಂಡಕ್ಕೆ ಸಿಕ್ತು ಭರ್ಜರಿ ಗಿಫ್ಟ್

Published : Apr 04, 2023, 10:53 AM ISTUpdated : Apr 05, 2023, 03:12 PM IST
BMW ಕಾರು, ಚಿನ್ನದ ನಾಣ್ಯ: ನಾನಿ 'ದಸರಾ' ತಂಡಕ್ಕೆ ಸಿಕ್ತು ಭರ್ಜರಿ ಗಿಫ್ಟ್

ಸಾರಾಂಶ

ನಾನಿ ನಟನೆಯ ದಸರಾ ತಂಡಕ್ಕೆ BMW ಕಾರು ಮತ್ತು ಚಿನ್ನದ ನಾಣ್ಯಗಳನ್ನು ನಿರ್ಮಾಪಕ ಗಿಫ್ಟ್ ನೀಡಿದ್ದಾರೆ. 

ಟಾಲಿವುಡ್ ಸ್ಟಾರ್ ನಾನಿ ಸದ್ಯ ದಸರಾ ಸಿನಿಮಾ ಮೂಲಕ ಅಬ್ಬರಿಸುತ್ತಿದ್ದಾರೆ. ನಾನಿ ನಟನೆಯ ದಸರಾ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ದಸರಾ ಸಿನಿಮಾವನ್ನು ಪ್ರೇಕ್ಷಕರು ಮಾತ್ರವಲ್ಲದೇ ಟಾಲಿವುಡ್ ಸ್ಟಾರ್ಸ್ ಕೂಡ ಹಾಡಿಹೊಗಳಿದ್ದಾರೆ. ಖ್ಯಾತ ನಿರ್ದೇಶಕ ರಾಜಮೌಳಿ, ಪ್ರಭಾಸ್, ಮಹೇಶ್ ಬಾಬು ಸೇರಿದಂತೆ ಅನೇಕರು ದಸರಾ ಸಿನಿಮಾ ಮೆಚ್ಚಿಕೊಂಡಿದ್ದಾರೆ. ದಸರಾ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಇಡೀ ದಸರಾ ತಂಡ ಸಂಭ್ರಮಿಸುತ್ತಿದೆ. ಯಶಸ್ಸಿನ ಖುಷಿಯಲ್ಲಿರುವ ದಸರಾ ತಂಡಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದೆ. 

ದಸರಾ ಸಿನಿಮಾದ ನಿರ್ಮಾಪಕ ಸುಧಾಕರ್ ಚೆರುಕುರಿ ನಿರ್ದೇಶಕ ಶ್ರೀಕಾಂತ್ ಒಡೆಲಾ ಅವರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಮೂಲಗಳ ಪ್ರಕಾರ ನಿರ್ದೇಶಕ ಶ್ರೀಕಾಂತ್ ಅವರಿಗೆ 80 ಲಕ್ಷ ರೂಪಾಯಿ ಬೆಲೆ ಬಾಳುವ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೆಯಲ್ಲ ದಸರಾಗಾಗಿ ಕೆಲಸ ಮಾಡಿದ ಪ್ರತಿಯೊಬ್ಬ ತಂತ್ರಜ್ಞರಿಗೆ 10 ಗ್ರಾಂ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಿದ್ದಾರೆ. ದಸರಾ ತಂಡ ಕಷ್ಟಪಟ್ಟು, ಶ್ರಮ ವಹಿಸಿ ಕೆಲಸ ಮಾಡಿದ್ದು ಈ ಗಿಫ್ಟ್ ಗೆ ಅರ್ಹರು ಎನ್ನುವ ಮಾತು ಕೇಳಿಬರುತ್ತಿದೆ.  



ನಾಣಿ ಸರ್‌ ಹೊಗಳಿಕೆ ಕೇಳಿ ಭಯವಾಗಿತ್ತು: ದೀಕ್ಷಿತ್‌ ಶೆಟ್ಟಿ

ಕೀರ್ತಿ ಸುರೇಶ್ ಗಿಫ್ಟ್

ದಸರಾ ನಟಿ ಕೀರ್ತಿ ಸುರೇಶ್ ಕೂಡ ತನ್ನ ತಂಡಕ್ಕೆ ಚಿನ್ನದ ನಾಣ್ಯಗಳನ್ನು ಗಿಫ್ಟ್ ಮಾಡಿದ್ದಾರೆ. ಸುಮಾರು 130 ಚಿನ್ನದ ನಾಣ್ಯಗಳನ್ನು ಗಿಫ್ಟ್ ನೀಡಿದ್ದಾರೆ. 70 ಲಕ್ಷ ರೂಪಾಯಿ ಬೆಲೆ ಬಾಳುವ ಗೋಲ್ಡ್ ಕಾಯಿನ್‌ಗಳನ್ನು ತಂಡಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ದಸರಾ ಸಿನಿಮಾಗೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಗಿಫ್ಟ್ ಮಾಡಿದ್ದಾರೆ. ಚಾಲಕ, ಲೈಟ್ ಬಾಯ್ ಸೇರಿದಂತೆ ಎಲ್ಲರಿಗೂ ಗೋಲ್ಡ್ ಕಾಯಿನ್ ಕೊಟ್ಟಿದ್ದಾರೆ. ಕೀರ್ತಿ ಸುರೇಶ್ ಸಿನಿಮಾ ರಿಲೀಸ್‌ಗೂ ಮೊದಲೇ ಗಿಫ್ಟ್ ನೀಡಿದ್ದರು.  

'KGF' ರಾಕಿಯನ್ನು ಹೀಯಾಳಿಸಿದವರಿಗೆ ಕೌಂಟರ್ ಕೊಟ್ಟ ದಸರ ಹೀರೋ.!

ಈ ಬಗ್ಗೆ ಪ್ರತಿಕ್ರೆಯೆ ನಾಡಿದ್ದ ಸಿನಿಮಾ ಪ್ರಚಾರಕರು, 'ಹೌದು ಕೀರ್ತಿ ಮೇಡಮ್ ದಸರಾದ ಪ್ರತಿಯೊಬ್ಬ ಸಿಬ್ಬಂದಿಗೂ ಚಿನ್ನದ ನಾಣ್ಯವನ್ನು ಗಿಫ್ಟ್ ನೀಡಿದ್ದಾರೆ.  ಇದರಲ್ಲಿ ಚಾಲಕರು ಮತ್ತು ಲೈಟ್ಸ್ ಬಾಯ್ಸ್ ಕೂಡ ಸೇರಿದ್ದಾರೆ. ಆದರೆ ಚಿನ್ನದ ನಾಣ್ಯಗಳ ಮೌಲ್ಯದ ಬಗ್ಗೆ ನನಗೆ ಖಚಿತವಿಲ್ಲ ಸುಮಾರು 70 ಲಕ್ಷ ರೂಪಾಯಿ ಇರಬಹುದು' ಎಂದು ಹೇಳಿದರು. ಮೂಲಗಳ ಪ್ರಕಾರ ಪ್ರತಿ ಒಬ್ಬರಿಗೂ 10 ಗ್ರಾಂ ಗೋಲ್ಡ್ ಕಾಯಿನ್ ನೀಡಿದ್ದಾರೆ ಎಂದಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!