ಅಲ್ಲು ಅರ್ಜುನ್ ಅಭಿಮಾನಿಗಳಿಗೆ ನಿರಾಸೆ: 'ಪುಷ್ಪ-2' ಶೂಟಿಂಗ್‌ ಮತ್ತೆ ಸ್ಥಗಿತ, ಕಾರಣವೇನು?

By Shruthi Krishna  |  First Published Apr 3, 2023, 6:06 PM IST

ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದೆ.'ಪುಷ್ಪ-2' ಶೂಟಿಂಗ್‌ ಸ್ಥಗಿತಗೊಂಡಿದೆ ಎನ್ನುವ ಮಾತು ಕೇಳಿಬಂದಿದೆ.


ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಪುಷ್ಪ-2ನಲ್ಲಿ ಬ್ಯುಸಿಯಾಗಿದ್ದಾರೆ. ಪಾರ್ಟ್ 1 ಸೂಪರ್ ಸಕ್ಸಸ್ ಬಳಿಕ ಪುಷ್ಪ-2 ಮೇಲೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ. ಮೊದಲ ಭಾಗ ರಿಲೀಸ್ ಆಗಿ ಒಂದು ವರ್ಷದ ಬಳಿಕ ಪಾರ್ಟ್-2 ಚಿತ್ರೀಕರಣ ಪ್ರಾರಂಭ ಮಾಡಿತ್ತು ಸಿನಿಮಾತಂಡ. ನಿರೀಕ್ಷೆ ಹೆಚ್ಚಿದ್ದ ಕಾರಣ ಒಂದಿಷ್ಟು ಬದಲಾವಣೆಯೊಂದಿಗೆ ಪುಷ್ಪ-2 ಪ್ರಾರಂಭ ಮಾಡಿದ್ದರು ನಿರ್ದೇಶಕ ಸುಕುಮಾರ್. ಪುಷ್ಪ-2 ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಪಾರ್ಟ್ -2ನಲ್ಲಿ ಅವರು ನಟಿಸುತ್ತಾರೆ, ಇವರು ನಟಿಸುತ್ತಾರೆ, ಕಥೆ ಬದಲಾಗಿದೆ  ಎನ್ನುವ ಸುದ್ದಿ ಕೇಳಿ ಬರುತ್ತಲೇ ಇದೆ. ಆದರೆ ಸಿನಿಮಾತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಇದೀಗ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ.

ಪುಷ್ಪ-2 ಸಿನಿಮಾದ ಶೂಟಿಂಗ್ ಮತ್ತೆ ಸ್ಥಗಿತವಾಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಬಾಲಿವುಡ್ ಲೈಫ್ ವರದಿ ಮಾಡಿರುವ ಪ್ರಕಾರ ಪುಷ್ಪ-2 ಸಿನಿಮಾದ ಸದ್ಯದ ಶೂಟಿಂಗ್ ಮತ್ತು ಸ್ಕ್ರಿಪ್ಟ್ ಬಗ್ಗೆ ಸಮಾಧಾನ ಇಲ್ಲದ ಕಾರಣ ಮತ್ತೆ ಶೂಟಿಂಗ್ ನಿಲ್ಲಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಮತ್ತೆ ಚಿತ್ರೀಕರಣ ಪ್ರಾರಂಭ ಮಾಡುವ ಮೊದಲು ನಿರ್ದೇಶಕ ಸುಕುಮಾರ್ ಮತ್ತೊಮ್ಮೆ ಚರ್ಚೆ ಮಾಡುತ್ತಿದ್ದಾರಂತೆ. ಸ್ಕ್ರಪ್ಟ್‌ನಲ್ಲಿ ಯಾವುದು ಡಿಲೀಟ್ ಮಾಡಬೇಕು, ಮತ್ತೇನನ್ನು ಸೇರಿಸಬೇಕು ಎಂದು ನಿರ್ದೇಶಕ ಸುಕುಮಾರ್ ಯೋಚಿಸುತ್ತಿದ್ದಾರೆ. ಹಾಗಾಗಿ ಚಿತ್ರೀಕರಣ ಮತ್ತೆ ನಿಲ್ಲಿಸಲಾಗಿದೆ ಎನ್ನುವ ಮಾತು ಕೇಳಿಬಂದಿದೆ. ಈ ಬಗ್ಗೆ ಸಿನಿಮಾತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಚಿತ್ರೀಕರಣವನ್ನು ಸ್ಥಗಿತ ಗೊಳಸಿಲಾಗಿದಿಯಾ ಅಥವಾ ಮುಂದೂಡಲಾಗಿದಿಯಾ ಎನ್ನುವುದು ಬಹಿರಂಗವಾಗಬೇಕಿದೆ. 

ಅಲ್ಲು ಅರ್ಜುನ್ 'ಪುಷ್ಪ-2' ಹೇರ್ ಸ್ಟೈಲ್ ವೈರಲ್; 'ತಗ್ಗೋದೇ ಇಲ್ಲ' ಎಂದ ಫ್ಯಾನ್ಸ್

Tap to resize

Latest Videos

ಪುಷ್ಪ-2 ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಶೂಟಿಂಗ್ ಪ್ರಾರಂಭವಾಗಿ ಅನೇಕ ಸಮಯವಾಗಬೇಕಿತ್ತು. ಆದರೆ ಇನ್ನೂ ನಿರ್ದೇಶಕ ಸುಕುಮಾರ್ ಸ್ಕ್ರಿಪ್ಟ್ ಕೆಲಸ ಮಾಡುತ್ತಲೇ ಇದ್ದಾರೆ. ಪಾರ್ಟ್-2 ಮೇಲೆ ಭಾರಿ ನಿರೀಕ್ಷೆ ಇರುವುದರಿಂದ ಸಾಕಷ್ಟ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಚಿತ್ರೀಕರಣ ತಡವಾಗುತ್ತಿದೆ ಎನ್ನಲಾಗಿದೆ. ಈ ಬಾರಿ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಕಾದಿದ್ದರು. ಆದರೆ ಟೀಸರ್ ಇರಲಿ ಫಸ್ಟ್ ಲುಕ್ ಕೂಡ ಸಿಗದೆ ಅಭಿಮಾನಿಗಳು ನಿರಾಸೆಯಾಗಿದ್ದರು. 

ಅಲ್ಲು ಅರ್ಜುನ್ 'ಪುಷ್ಪ-2'ಗೂ ಬೆಂಗಳೂರಿಗೂ ಇದೆ ನಂಟು? ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ

ಅಂದಹಾಗೆ ಪುಷ್ಪ-2 ಶೂಟಿಂಗ್ ಬೆಂಗಳೂರಿನಲ್ಲಿ  ನಡೆಯಲಿದೆ ಎನ್ನಲಾಗಿತ್ತು. ಇಡೀ ಸಿನಿಮಾತಂಡ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಶಿಫ್ಟ್ ಆಗಲಿದೆ. ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಇಬ್ಬರೂ ಬೆಂಗಳೂರಿಗೆ ಬರುತ್ತಿದೆ ಎನ್ನಲಾಗಿತ್ತು. ಆದರೀಗ ಶೂಟಿಂಗ್ ಸ್ಥಗಿತವಾಗಿದೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಪುಷ್ಪ-2ಗಾಗಿ ಇನ್ನು ಎಷ್ಟು ಕಾಯಬೇಕಿದೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.    

click me!