ವಿಜಯಲಕ್ಷ್ಮಿ ಊದಿದ್ದ ಆ ರಣ ಕಹಳೆಯಲ್ಲಿ ವಿಜಯ! ಜೂನ್​​ 2026ರ ಒಳಗೆ ದರ್ಶನ್‌ಗೆ ಸಿಗುತ್ತಂತೆ ಬೇಲ್!

Published : Jan 22, 2026, 05:03 PM IST
Vijayalakshmi Darshan

ಸಾರಾಂಶ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಮಾಡಿದ್ದ 8 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದ್ದು, ಇದು ಅವರಿಗೆ ಸಿಕ್ಕ ಮೊದಲ ಗೆಲುವಾಗಿದೆ. ಮತ್ತೊಂದೆಡೆ, ಜ್ಯೋತಿಷಿಯೊಬ್ಬರು 2026ರೊಳಗೆ ದರ್ಶನ್‌ಗೆ ಜಾಮೀನು ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ನಟ ದರ್ಶನ್​ ಕುಟುಂಬದ ಟೈಮ್ ಸರಿ ಹೋಯ್ತಾ? ದರ್ಶನ್ ಫ್ಯಾಮಿಲಿಗೆ ಅಂಟಿದ್ದ ಒಂದೊಂದೇ ಗ್ರಹಚಾರಗಳು ನೆಟ್ಟಗಾಗ್ತಾ ಇದೆಯಾ? ಇಂತದ್ದೊಂದು ಚರ್ಚೆ ಕನ್ನಡ ಸಿನಿ ದುನಿಯಾದಲ್ಲಿ ದರ್ಶನ್ ಅಭಿಮಾನಿಗಳ ಪಡಸಾಲೆಯಲ್ಲಿ ಆಗುತ್ತಿದೆ. ಅದಕ್ಕೆ ಕಾರಣ ದರ್ಶನ್ ಪತ್ನಿ ವಿಜಯಲಕ್ಷ್ಮಿ ಊದಿದ್ದ ಆ ರಣ ಕಹಳೆಯಲ್ಲಿ ವಿಜಯ ಸಿಕ್ಕಿರೋದು? ಹಾಗಾದ್ರೆ ದಾಸನ ಹೆಂಡತಿ ಗೆದ್ದಿದ್ದು ಎಲ್ಲಿ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ..

ಮೊದಲು ಗೆಲುವು ಪಡೆದ ದರ್ಶನ್ ಪತ್ನಿಗೆ ಫ್ಯಾನ್ಸ್ ಹೂ ಮಳೆ

ಯೆಸ್, ಎಲ್ಲವೂ ನಿಧಾನಕ್ಕೆ ಸರಿ ಹೋಗುತ್ತಿದೆ. ಕಾನೂನಿನ ಮೇಲೆ ನಂಬಿಕೆಯೇ ಇಲ್ಲ ಎನ್ನುತ್ತಿದ್ದ ವಿಜಯಲಕ್ಷ್ಮಿಗೆ ಈಗ ಭರವಸೆಗಳು ಹುಟ್ಟಿಕೊಳ್ಳುತ್ತಿವೆ. ನನಗೂ ನ್ಯಾಯ ಸಿಗುತ್ತಪ್ಪಾ ಅನ್ನೋ ಆಶಾ ಭಾವನೆ ಚಿಗುರೊಡೆದಿದೆ. ಅದಕ್ಕೆ ಕಾರಣ ಆಗಂತುಕರ ವಿರುದ್ಧ ದರ್ಶನ್ ಪತ್ನಿ ಊದಿದ್ದ ರಣ ಕಹಳೆ. ಆ ಯುದ್ಧದಲ್ಲಿ ದರ್ಶನ್ ಪತ್ನಿಗೆ ಮೊಲದು ಗೆಲುವು ದಕ್ಕಿದೆ.

8 ಆರೋಪಿಗಳ ಮೇಲೆ ಚಾರ್ಜ್​ ಶೀಟ್​ ಫೈನಲ್!

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕೆಟ್ಟ ಕಮೆಂಟ್​​ ಮಾಡಿದ್ದಕ್ಕೆ ದರ್ಶನ್ ಫ್ಯಾನ್ಸ್​ ಆದಿಯಾಗಿ ವಿಜಯಲಕ್ಷ್ಮಿ ಕೂಡ ಮಹಾ ಯುದ್ಧವನ್ನೇ ಮಾಡಿದ್ರು. ಆದ್ರೆ ಈ ಯುದ್ಧದಲ್ಲಿ ಜನ ಸಿಗುತ್ತೋ ಇಲ್ಲವೋ ಅಂತ ಅನುಮಾನ ಪಟ್ಟಿದ್ದ ವಿಜಯಲಕ್ಷ್ಮಿಗೆ ಈಗ ಉತ್ತರ ಸಿಕ್ಕಿದೆ. ದಾಸನ ಪತ್ನಿಗೆ ಕೆಟ್ಟ ಕಮೆಂಟ್ ಮಾಡಿದ್ದ 8 ಮಂದಿಯನ್ನ ಸೈಬರ್ ಕ್ರೈಮ್ ಪೊಲೀಸರು ಅರೆಸ್ಟ್ ಮಾಡಿ ತಂದಿದ್ದು, ಇನ್ನೊಂದು ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

ಶುಕ್ರವಾರ ಸಿಸಿಬಿ ಮುಂದೆ ವಿಜಯಲಕ್ಷ್ಮಿ ಸ್ಟೇಟ್ಮೆಂಟ್!

ವಿಜಯಲಕ್ಷ್ಮೀ ದರ್ಶನ್‌ಗೆ ಅಶ್ಲೀಲ ಕಾಮೆಂಟ್ ಪ್ರಕರಣಕ್ಕೆ ಮೇಲಿಂದ ಮೇಲೆ ಟ್ವಿಸ್ಟ್​ ಸಿಕ್ತಾ ಇದೆ. ಈ ಬಗ್ಗೆ ಹೇಳಿಕೆ ಪಡೆಯೋಕೆ ದರ್ಶನ್ ಪತ್ನಿಗೆ ಸಿಸಿಬಿ ನೋಟಿಸ್​ ಕೊಟ್ಟಿದೆ. ನ್ಯಾಯಾದೀಶರ ಮುಂದೆ ಹಾಜರಾಗಿ ವಿಜಯಲಕ್ಷ್ಮಿ ಹೇಳಿಕೆ ದಾಖಲಿಸಬೇಕಿದೆ.

ದರ್ಶನ್ ಇರೋ ಜೈಲಲ್ಲಿ ಆಶ್ಲೀಲ ಕಮೆಂಟ್ ಆರೋಪಿಗಳು!

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿತ್ವ ಹರಣ ಮಾಡುವವರಿಗೆ ಸಿಸಿಬಿ ಪಾಠ ಕಲಿಸುತ್ತಿದೆ. ಆದ್ರೆ ಅವರೆಲ್ಲಾ ಕಮೆಂಟ್​ ಮಾಡಿದ್ದು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ. ಈ ಪ್ರಕರಣದಲ್ಲಿ ಸದ್ಯ ಸಿಕ್ಕಿ ಬಿದ್ದಿರೋ 8 ಜನ ಆರೋಪಿಗಳಿಗೆ ಜಾಮೀನು ಸಿಕ್ಕಿಲ್ಲ. ಅವರೆಲ್ಲಾ ಈಗ ದರ್ಶನ್ ಇರೋ ಭದ್ರ ಕೋಟೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಎಂಥಾ ವಿಪರ್ಯಾಸ ನೋಡಿ. ಕೊಲೆ ಕೇಸ್​​ ಆರೋಪದಲ್ಲಿ ಅಂದರ್ ಆಗಿರೋ ದರ್ಶನ್ ಈಗ ತನ್ನ ಹೆಂಡತಿಗೆ ಅಶ್ಲೀಲ ಕಮೆಂಟ್ ಮಾಡಿದ ಆರೋಪಿಗಳ ಮುಖ ನೋಡಿಕೊಂಡು ಸುಮ್ಮನಿರಬೇಕಿದೆ.

ಹಾಗ್ ನೋಡಿದ್ರೆ ದರ್ಶನ್ ಜೈಲು ಸೇರೋಕೆ ಕಾರಣವೇ ತನ್ನ ಗೆಳತಿ ಸ್ನೇಹಿತೆ ಪವಿತ್ರಾ ಗೌಡಗೆ ಕೆಟ್ಟ ಕಮೆಂಟ್​ ಮಾಡಿದ ಅನ್ನೋ ಕಾರಣಕ್ಕೆ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಹಾಗು ಮರ್ಡರ್​ ಮಾಡಿದ ಅನ್ನೋ ಆರೋಪ. ಈಗ ತನ್ನ ಮನೆ ಮಹಾಲಕ್ಷ್ಮೀಗೆ ಕೆಟ್ಟ ಕಮೆಂಟ್ ಮಾಡಿದ ಆರೋಪ ಹೊತ್ತವರ ಜೊತೆಗೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಜೂನ್​​ 2026ರ ಒಳಗೆ ದರ್ಶನ್‌ಗೆ ಸಿಗುತ್ತಂತೆ ಬೇಲ್!

ಇದೆಲ್ಲವೂ ಒಂದು ಕಡೆ ಆದ್ರೆ ಮತ್ತೊಂದು ಕಡೆ ದರ್ಶನ್‌ಗೆ ಜಾಮೀನು ಸಿಗುತ್ತೆ ಅನ್ನೋ ಭವಿಷ್ಯವಾಣಿ ಭಾರಿ ಜೋರಾಗಿ ಕೇಳಿಸ್ತಾ ಇದೆ. ಅದಕ್ಕೆ ಕಾರಣ ಜ್ಯೋತಿಷಿ ಪ್ರಶಾಂತ್ ಕಿಣಿ ಹೇಳಿರೋ ದಾಸನ ಭವಿಷ್ಯ. ಜ್ಯೋತಿಷಿ ಪ್ರಶಾಂತ್ ಪ್ರಕಾರ, ಇದೇ ಜೂನ್ 2026ರಲ್ಲಿ ನಟ ದರ್ಶನ್ ಗೆ ಜಾಮೀನು ಸಿಗಲಿದೆ. ಬಳಿಕ 2029ರಲ್ಲಿ ದರ್ಶನ್ ಈ ಪ್ರಕರಣದಿಂದಲೇ ಖುಲಾಸೆಯಾಗಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ದರ್ಶನ್ ಅಭಿಮಾನಿಗಳ ಹೃದಯದಲ್ಲಿ ಹಚ್ಚೆಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಮಾತ್ರ ನಾನು ನಟ ಎಂದ ರಾಮ್ ಚರಣ್; ಈ ಶಾಕಿಂಗ್ ಸ್ಟೇಟ್‌ಮೆಂಟ್ ಹೇಳಿದ್ಯಾಕೆ?
RRR Movie ನಟ ಜ್ಯೂನಿಯರ್‌ ಎನ್‌ಟಿಆರ್‌ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಕನ್ನಡ ಕಿರುತೆರೆ ನಟಿ ಪ್ರತ್ಯಕ್ಷ, ಯಾರದು?