ಈಗಿನ ಸ್ಟಾರ್ ಪ್ರಭಾಸ್‌ಗೆ ಮೊದಲ ಚಾನ್ಸ್ ಕೊಟ್ಟಿದ್ದು ಕನ್ನಡಿಗ, ಆಗ ಅವರ ಸಂಭಾವನೆ ಎಷ್ಟಿತ್ತು?

Published : Nov 17, 2025, 12:31 PM IST
Prabhas

ಸಾರಾಂಶ

ಪ್ರಭಾಸ್ ಆಗಿನ್ನೂ ಸಿನಿಮಾ ನಟ ಆಗಿರಲಿಲ್ಲ. ಆದರೆ, ಸಿನಿಮಾ ನಟನರಾಗುವ ಕನಸು ಹೊತ್ತು ನಟನಾ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದರು. ಇದೇ ವೇಳೆ, ಜಯಂತ್ ಸಿ ಪರಾಂಜೆ ಅವರು ಮಹೇಶ್ ಬಾಬು ನಟನೆಯ 'ಟಕ್ಕರಿ ದೊಂಗ' ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಮುಂದೇನಾಯ್ತು ನೋಡಿ..

ಪ್ರಭಾಸ್ ನಟರಾಗಿದ್ದು ಹೇಗೆ?

ಟಾಲಿವುಡ್ ನಟ ಪ್ರಭಾಸ್ (Prabhas) ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ, ಭಾರತದಲ್ಲಿ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರು ಕೂಡ. ಅವರಿಗೆ 'ಡಾರ್ಲಿಂಗ್ ಪ್ರಭಾಸ್' ಅನ್ನೋ ಹೆಸರು ಕೂಡ ಚಾಲ್ತಿಯಲ್ಲಿದೆ. 'ಬಾಹುಬಲಿ' ಚಿತ್ರದ ಬಳಿಕವಂತೂ ನಟ ಪ್ರಭಾಸ್ ಅವರ ತಾರಾಮೌಲ್ಯ ಮುಗಿಲು ಮುಟ್ಟಿದೆ. ಆದರೆ, ಇಂಥ ಪ್ರಭಾಸ್‌ ಅವರಿಗೆ ಮೊಟ್ಟಮೊದಲ ಚಿತ್ರದ ಮೂಲಕ ಸ್ಟಾರ್ ನಟರನ್ನಾಗಿ ಮಾಡಿರೋದು ಒಬ್ಬ ಕನ್ನಡಿಗ. ಹೌದು, ಪ್ರಭಾಸ್ ಅವರನ್ನು 'ಈಶ್ವರ್' ಚಿತ್ರದ ಮೂಲಕ ನಟರನ್ನಾಗಿ ಮಾಡಿರುವ ನಿರ್ದೇಶಕರು ಕನ್ನಡಿಗರು. ಆ ಡೈರೆಕ್ಟರ್ ಹೆಸರು ಜಯಂತ್ ಸಿ ಪರಾಂಜೆ

ಆಗಿನ್ನೂ ಸಿನಿಮಾ ನಟ ಆಗಿರಲಿಲ್ಲ

ಯೆಸ್, ಪ್ರಭಾಸ್ ಆಗಿನ್ನೂ ಸಿನಿಮಾ ನಟ ಆಗಿರಲಿಲ್ಲ. ಆದರೆ, ಸಿನಿಮಾ ನಟನರಾಗುವ ಕನಸು ಹೊತ್ತು ನಟನಾ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದರು. ಇದೇ ವೇಳೆ, ಜಯಂತ್ ಸಿ ಪರಾಂಜೆ ಅವರು ಮಹೇಶ್ ಬಾಬು ನಟನೆಯ 'ಟಕ್ಕರಿ ದೊಂಗ' ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಆಗ ಅಲ್ಲಿಗೆ ಸಿನಿಮಾ ನಿರ್ಮಾಪಕರಾದ ಅಶೋಕ್ ಕುಮಾರ್ (ಈಶ್ವರ್ ನಿರ್ಮಾಪಕರು) ಅವರು ಬಂದು ತಮಗಾಗಿ ಒಂದು ಸಿನಿಮಾ ಮಾಡಿಕೊಡುವಂತೆ ನಿರ್ದೇಶಕ ಜಯಂತ್ ಸಿ ಪರಾಂಜೆ ಅವರನ್ನು ಕೇಳಿದ್ದಾರೆ. ಅದನ್ನು ಒಪ್ಪಿಕೊಂಡಿದ್ದಾರೆ ಪರಾಂಜೆ.

ಅದರಂತೆ, ಜಯಂತ್ ಸಿ ಪರಾಂಜೆ ಅವರು ಸಿನಿಮಾ ಕಥೆಯೊಂದನ್ನು ಮಾಡಿಕೊಂಡು ಅದಕ್ಕೆ ನಾಯಕರನ್ನಾಗಿ ನಟ ಕ್ರಷ್ಣಂರಾಜು ಅವರ ಸಹೋದರನ ಮಗ ಪ್ರಭಾಸ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಆಗಿನ್ನು ತರಬೇತಿ ಕೋರ್ಸ್‌ ಕಂಪ್ಲೀಟ್ ಆಗದಿರುವುದರಿಂದ ಅವರನ್ನು ಕೈಬಿಟ್ಟು ಬೇರೆಯವರನ್ನು ನೋಡಲು ಮನೆಯವರಿಂದ ಸಲಹೆ ಬಂದಿದೆ. ಆದರೆ ನಿರ್ದೇಶಕ ಜಯಂತ್ ಸಿ ಪರಾಂಜೆ ಅವರು 'ಅದೇನೂ ತೊಂದರೆಯಿಲ್ಲ. ಅವರು ಕೋರ್ಸ್ ಬದಲು ಕ್ಯಾಮೆರಾ ಮುಂದೆಯೇ ನಟನೆ ಕಲಿಯಲಿ ಬಿಡಿ' ಎಂದು ಹೇಳಿ ಪ್ರಭಾಸ್ ಅವರಿಗೇ ಚಾನ್ಸ್ ಕೊಟ್ಟಿದ್ದಾರೆ. ಆಗ ನಟರಾದ ಪ್ರಭಾಸ್ ಪಡೆದ ಸಂಭಾವನೆ 4 ಲಕ್ಷ ರೂಪಾಯಿಗಳು!

ಈಶ್ವರ್ ಸಿನಿಮಾ ಸೂಪರ್ ಹಿಟ್

ಈಶ್ವರ್ ಸಿನಿಮಾ 2002ರಲ್ಲಿ ತೆರೆಗೆ ಬಂದು ಸೂಪರ್ ಹಿಟ್ ಆಗಿದೆ. ಅಂದಿನ ಕಾಲಕ್ಕೆ ಒಂದು ಕೋಟಿ (1) ರೂಪಾಯಿ ಖರ್ಚು ಮಾಡಿದ್ದ ನಿರ್ಮಾಪಕರು ಈಶ್ವರ್ ಸಿನಿಮಾ ಮೂಲಕ 3.5 ಕೋಟಿ ಗಳಿಸಿ ಲಾಭ ಮಾಡಿಕೊಂಡಿದ್ದಾರೆ. ಅಲ್ಲಿಂದ ಮುಂದೆ ಪ್ರಭಾಸ್ ತೆಲುಗು ಸಿನಿಮಾ ಉದ್ಯಮದಲ್ಲಿ ಸ್ಟಾರ್ ನಟರಾಗಿ ಬೆಳೆದಿದ್ದಾರೆ. ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿಯ 'ಬಾಹುಬಲಿ' ಸಿನಿಮಾ ಮೂಲಕ ನಟ ಪ್ರಭಾಸ್ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಹಾಗಂತ, ನಟ ಪ್ರಭಾಸ್ ಅವರು ಸೋಲು ನೋಡಿಲ್ಲ ಅಂತಿಲ್ಲ, ಆದರೆ ಅವರ ಸಿನಿಮಾ ಸೋತರೂ ಹಾಕಿದ ಬಂಡವಾಳ ವಾಪಸ್ ಬಂದಿದೆ ಎಂಬ ಮಾತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌