
ಇದೇನಾಯ್ತು ರಾಜಮೌಳಿಗೆ?
ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಎಸ್‌ಎಸ್ ರಾಜಮೌಳಿಯವರ (SS Rajamouli) ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗೆ ರಾಮೋಜಿ ರಾವ್ ಫೀಲಂ ಸಿಟಿಯಲ್ಲಿ ನಡೆದ ಭರ್ಜರಿ ಈವೆಂಟ್‌ನಲ್ಲಿ ಮಹೇಶ್ ಬಾಬು-ಪ್ರಿಯಾಂಕಾ ಚೋಪ್ರಾ ಜೋಡಿ ನಟನೆ, ರಾಜಮೌಳಿ ನಿರ್ದೇಶನದ ಸಿನಿಮಾಗೆ 'ವಾರಣಾಸಿ' ಎಂಬ ಟೈಟಲ್ ಫಿಕ್ಸ್ ಆಗಿದ್ದನ್ನು ರಿವೀಲ್ ಮಾಡಲಾಗಿದೆ. ಅಷ್ಟೇ ಅಲ್ಲ, ಅಲ್ಲಿ ಆಗಿದ್ದ ತಾಂತ್ರಿಕ ತೊಂದರೆಗೆ ಸಂಬಂಧಿಸಿ ರಾಜಮೌಳಿಯವರು ಆಡಿರುವ ಮಾತುಗಳು ಇದೀಗ ಅವರ ಬಗ್ಗೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಿದ್ದರೆ ವಿಷಯವೇನು? ಮುಂದೆ ನೋಡಿ..
ಹೌದು, ರಾಜಮೌಳಿ ಸಿನಿಮಾ ಟೈಟಲ್ (Varanasi) ಅನಾವರಣಕ್ಕೆ ಈವೆಂಟ್‌ನಲ್ಲಿ ದೊಡ್ಡ ಸ್ಕ್ರೀನ್ ಹಾಕಲಾಗಿತ್ತು. ಆದರೆ, ನಿರ್ಧಿಷ್ಟ ಸಮಯಕ್ಕೆ ಅದು ಓಪನ್ ಆಗದೇ ಸಮಸ್ಯೆ ಕಾಣಿಸಿಕೊಂಡಿತು. ಇದರಿಂದ ಕೆಲವು ಸಮಯ ಟೈಟಲ್ ಅನಾವರಣ ಮಾಡಲು ಸಾಧ್ಯವಾಗದೇ ಚಿತ್ರತಂಡ ಮುಜುಗರ ಅನುಭವಿಸುವಂತಾಯ್ತು. ಕೊನೆಗೆ ಸಮಸ್ಯೆ ಪರಿಹಾರವಾಗಿ ಟೈಟಲ್ ಟೀಸರ್ ತೋರಿಸಲಾಯ್ತು. ಆಗ ವೇದಿಕೆ ಮೇಲಿದ್ದ ವಾರಣಾಸಿ ಚಿತ್ರದ ನಿರ್ದೇಶಕರಾದ ರಾಜಮೌಳಿಯವರು ಅಲ್ಲಿ ನೆರೆದಿದ್ದ ಎಲ್ಲರ ಕ್ಷಮೆ ಕೇಳಿದ್ದಾರೆ. ಆದರೆ, ಆ ಬಳಿಕ ಅವರು ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ.
'ನನಗೆ ದೇವರ ಮೇಲೆ ಅಂತಹ ನಂಬಿಕೆಯೇನೂ ಇಲ್ಲ. ನನ್ನ ಮೇಲೆ ಹನುಮಂತನ ಆಶೀರ್ವಾದ ಇರುತ್ತದೆ ಎಂದು ನನ್ನ ತಂದೆ ವಿಜಯ್ ಪ್ರಸಾದ್ ಅವರು ಒಮ್ಮೆ ಹೇಳಿದ್ದರು. ಈ ತಾಂತ್ರಿಕ ಸಮಸ್ಯೆ ಆದಾಗ ನನಗೆ ಕೋಪ ಬಂತು. ಈ ರೀತಿಯಾ ಅವನು (ಹನುಮಂತ) ನನಗೆ ಸಹಾಯ ಮಾಡೋದು?' ಎಂದು ರಾಜಮೌಳಿಯವರು ಅಲ್ಲಿ ಹೇಳಿದ್ದಾರೆ.
ಜೊತೆಗೆ, 'ನನ್ನ ಪತ್ನಿ ಹನುಮಂತನ ಪರಮ ಭಕ್ತೆ. ತನ್ನ ಗೆಳೆಯ ಎನ್ನುವ ರೀತಿಯಲ್ಲಿ ಅವಳು ಆಗಾಗ ಅವನೊಂದಿಗೆ ಮಾತನ್ನಾಡುತ್ತ ಇರುತ್ತಾಳೆ. ನನಗೆ ಅವಳ ಮೇಲೂ ಕೋಪ ಬಂತು. ನನ್ನ ಪತ್ನಿಯ ಗೆಳೆಯ ಹನುಮಂತ ಈ ಬಾರಿಯಾದರೂ ನನಗೆ ಸಹಾಯ ಮಾಡುತ್ತಾನಾ ನೋಡೋಣ ಎಮದು ಹೇಳುತ್ತ ಟೀಸರ್ ಅನಾವರಣ ಮಾಡಿದ್ದಾರೆ. ಆದರೆ ಅದೀಗ ಹನುಮಂತನ ಭಕ್ತರೂ ಸೇರಿದಂತೆ ಹಲವರ ಮನಸ್ಸಿನ ಬೇಸರಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.
ರಾಜಮೌಳಿ ಹೇಳಿಕೆಯನ್ನು ಬಹಳಷ್ಟು ಜನರು ಖಂಡಿಸಿ ಮಾತನ್ನಾಡಿದ್ದಾರೆ. ಚಿತ್ರತಂಡದವರು ಮಾಡಿಕೊಂಡ ಯಡವಟ್ಟಿಗೆ ಹನುಮಂತನನ್ನು ದೂಷಿಸೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ರಾಜಮೌಳಿ ಸೇರಿದಂತೆ ಚಿತ್ರತಂಡ ಹಿಂದಿನ ದಿನ ಅಥವಾ ಟೈಟಲ್ ಅನಾವರಣಕ್ಕೆ ಮೊದಲೊಮ್ಮ ಚೆಕ್ ಮಾಡಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ತಾವು ಮಾಡಿಕೊಂಡ ಎಡವಟ್ಟಿಗೆ ಹನುಮಂತನನ್ನು ಎಳೆದು ತಂದಿದ್ದು ಅದೆಷ್ಟು ಸರಿ ಎಂಬುದು ಅನೇಕರ ಅನಿಸಿಕೆ.
ಹಲವರು ಈ ಬಗ್ಗೆ, ಅಂದರೆ ತಾವು ಹನುಮಂತನ ಬಗ್ಗೆ ಆಡಿರೋ ಮಾತಿಗೆ ಕ್ಷಮೆ ಕೇಳಬೇಕು ಎಂದಿದ್ದಾರೆ. ಬಿಲ್ ಗೇಟ್ಸ್ ಕೂಡ ಹಲವು ಬಾರಿ ತಾಂತ್ರಿಕ ಸಮಸ್ಯೆ ಎದುರಿಸಿದ್ದಾರೆ. ಆದರೆ ಅವರು ಆಗ ಏಸುಕ್ರಿಸ್ತನನ್ನು ದೂಷಿಸಲಿಲ್ಲ. ಹಿಂದುಗಳಲ್ಲಿ ಮಾತ್ರ ಈ ಚಾಳಿ ಎದ್ದುಕಾಣಿಸುತ್ತದೆ. ಈ ನಿರ್ದೇಶಕ ಯಾಕೋ ಮುಂದೆ ಹಿಂದೂಗಳ ಪಾಲಿಗೆ ಮುಳ್ಳಾಗುವಂತೆ ತೋರುತ್ತಿದೆ. ಈತನ ಸಿನಿಮಾ ಬ್ಯಾನ್ ಮಾಡಬೇಕು' ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಾದ-ವಿವಾದಗಳು ಮುಂದೆ ಎಲ್ಲಿಗೆ ಹೋಗಿ ತಲುಪುತ್ತೋ ಏನೋ, ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.