
ಬ್ಯಾಡ್ ಲಕ್ ಗರ್ಲ್ ಆಗ್ಬಿಟ್ರಾ ಶ್ರೀಲೀಲಾ?
ನಟಿ ಶ್ರೀಲೀಲಾಗೆ (Sreeleela) ಅಂಟಿರೋ ಬ್ಯಾಡ್ಲಕ್ ಅದ್ಯಾಕೋ ಬಿಡುವಂತೆ ಕಾಣ್ತಾ ಇಲ್ಲ. ಶ್ರೀಲೀಲಾ ಕುಣಿದ ಹಾಡುಗಳು ಸೂಪರ್ ಡೂಪರ್ ಹಿಟ್ ಆದ್ರೂ, ಲೀಲಾ ನಟಿಸಿದ ಸಿನಿಮಾಗಳು ಮಾತ್ರ ಹಿಟ್ ಆಗ್ಲಿಲ್ಲ. ಬಾಲಿವುಡ್ನ ಮೊದಲ ಪ್ರಾಜೆಕ್ಟ್ ಮೂಲಕ ಆ ಶಾಪ ನಿವಾರಣೆಗೆ ರೆಡಿಯಾಗಿದ್ದ ಲೀಲಾಗೀಗ ಶಾಕ್ ಎದುರಾಗಿದೆ.
ಯೆಸ್ ಕಿಸ್ ಬ್ಯೂಟಿ ಶ್ರೀಲೀಲಾ ಅಂದ್ರೆ ಆಕೆ ರಶ್ಮಿಕಾ ಉತ್ತರಾಧಿಕಾರಿ ಅನ್ನೋ ಮಾತುಗಳು ಸಿನಿಇಂಡಸ್ಟ್ರಿಯಲ್ಲಿ ಹರಿದಾಡಿದ್ವು. ರಶ್ಮಿಕಾರಂತೆ ಕನ್ನಡದಿಂದ ಕರೀಯರ್ ಶುರುಮಾಡಿದ್ದ ಲೀಲಾಗೆ ಟಾಲಿವುಡ್ ನಿಂದ ಅವಕಾಶ ಸುರಿಮಳೆಯೇ ಆಗಿತ್ತು.
ಶ್ರೀಲೀಲಾಗೆ ಸಾಲು ಸಾಲು ಅವಕಾಶಗಳು ಬಂದಿದ್ದು ಸುಳ್ಳಲ್ಲ. ಒಂದು ಹಂತದಲ್ಲಿ ಈಕೆ ಟಾಲಿವುಡ್ ಟಾಪ್ ಹೀರೋಯಿನ್ ಆಗ್ತಾಳೆ ಅನ್ನೋ ಮಾತು ಕೇಳಿಬಂದ್ವು. ಆದ್ರೆ ಅದ್ಯಾಕೋ ರಶ್ಮಿಕಾಗಿದ್ದಂಥ ಅದೃಷ್ಟ ಈಕೆಗಿಲ್ಲ ಅನ್ನೋದು ಬಹುಬೇಗ ಪ್ರೂವ್ ಆಗೋಯ್ತು.
ಲೀಲಾ ಕುಣಿದ ಸಾಂಗ್ಸ್ ಹಿಟ್.. ಸಿನಿಮಾ ಮಾತ್ರ ಫ್ಲಾಪ್..!
ಹೌದು ಶ್ರೀಲೀಲಾ ಕರೀಯರ್ನಲ್ಲಿ ಬಹುತೇಕ ಇಂಥದ್ದೇ ಬ್ಲಂಡರ್ ಆಗ್ತಾ ಬಂದಿದೆ. ಲೀಲಾ ಸ್ಕ್ರೀನ್ ಪ್ರೆಸೆನ್ಸ್ ಮುದ್ದು ಮುದ್ದಾಗಿ ಇರುತ್ತೆ, ಆಕೆ ನರ್ತನವಂತೂ ನವಿಲು ನಾಚುವಂತೆ ಇರುತ್ತೆ. ಹಾಡು ಸೂಪರ್ ಡೂಪರ್ ಹಿಟ್ ಆಗುತ್ತೆ. ಆದ್ರೆ ಸಿನಿಮಾ ಮಾತ್ರ ಗೆಲ್ಲಲ್ಲ.
ಶ್ರೀಲೀಲಾ ಕನ್ನಡದಲ್ಲಿ ನಟಿಸಿದ ಕಿಸ್ ಕಥೆಯೂ ಅಷ್ಟೇ. ಹಾಡು ಸೂಪರ್ ಹಿಟ್ ಆದ್ವು, ಚಿತ್ರ ದೊಡ್ಡ ಸಕ್ಸಸ್ ಕಾಣಲಿಲ್ಲ. ಭರಾಟೆ, ಬೈಟು ಲವ್ ಚಿತ್ರಗಳ ಕಥೆಯೂ ಅಷ್ಟೇ.
ಟಾಲಿವುಡ್ನಲ್ಲೂ ಅಷ್ಟೇ ಶ್ರೀಲೀಲಾ ಕುಣಿತವನ್ನ ಎಲ್ಲರೂ ಮೆಚ್ಚಿ ಕೊಂಡಾಡ್ತಾರೆ. ಆದ್ರೆ ಆಕೆ ನಟಿಸಿದ ಸಿನಿಮಾಗಳು ಯಾವವೂ ಬಿಗ್ ಹಿಟ್ ಆಗಿಲ್ಲ. ಭಗವಂತ್ ಕೇಸರಿ ಬಿಗ್ ಹಿಟ್ ಆಯ್ತು. ಆದ್ರೆ ಕ್ರೆಡಿಟ್ ಬಾಲಯ್ಯಗೆ ಹೋಯ್ತು.
ಇನ್ನೂ ಪುಷ್ಪ ಸಿನಿಮಾದಲ್ಲಿ ಶ್ರೀಲೀಲಾ ಕಿಸಕ್ ಅನ್ನೋ ಸಾಂಗ್ಗೆ ನಡುಬಳುಕಿಸಿದ್ದು ಗೊತ್ತೇ ಇದೆ. ಪುಷ್ಪ ವರ್ಲ್ಡ್ ವೈಡ್ ಹಿಟ್ ಆಯ್ತು. ಅದರ ಕ್ರೆಡಿಟ್ ನಾಯಕಿ ರಶ್ಮಿಕಾಗೆ ಸಿಕ್ತೇ ಹೊರತಿ ಕಿಸಕ್ ಅಂತ ಕುಣಿದ ಲೀಲಾಗೆ ಸಿಗಲೇ ಇಲ್ಲ.
ಹೌದು ಶ್ರೀಲೀಲಾ ಸದ್ಯ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಎರಡು ಹಿಂದಿ ಪ್ರಾಜೆಕ್ಟ್ಗಳಲ್ಲಿ ನಟಿಸ್ತಾ ಇದ್ದಾರೆ. ಅದ್ರಲ್ಲೂ ಕಾರ್ತಿಕ್ ಆರ್ಯನ್ ಜೊತೆ ನಟಿಸ್ತಾ ಇರೋ ಆಶಿಕಿ-3 ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಅನುರಾಗ್ ಬಸು ಈ ಚಿತ್ರವನ್ನ ಡೈರೆಕ್ಟ್ ಮಾಡ್ತಾ ಇದ್ದು, ಈ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು,.
ಆದ್ರೆ ಈಗ ಬಂದಿರೋ ಲೇಟೆಸ್ಟ್ ಸುದ್ದಿ ಪ್ರಕಾರ ಆಶಿಕಿ-3 ಜಸ್ಟ್ 45 ದಿನಗಳ ಕಾಲ ಶೂಟ್ ಆಗಿದೆಯಂತೆ. ಸಿನಿಮಾ ಮುಗಿಯೋಕೆ ತಡವಾಗಲಿದ್ದು ಈ ವರ್ಷಾಂತ್ಯಕ್ಕೆ ಸಿನಿಮಾ ಬರೋದು ಡೌಟ್ ಅಂತೆ.
ಈ ವರ್ಷ 'ಉಸ್ತಾದ್ ಭಗತ್ ಸಿಂಗ್'ನಲ್ಲಿ ನಟಿಸಿ ಸೋಲುಂಡಿದ್ದ ಲೀಲಾ, ಆಶಿಕಿ ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ರು. ಆದ್ರೆ ಆಶಿಕಿ-3 ಕೂಡ ತಡವಾಗ್ತಾ ಇದ್ದು, ತನಗೆ ಶಾಪಮುಕ್ತಿ ಸಿಕ್ಕೋದ್ಯಾವಾಗ ಅಂತ ಶ್ರೀಲೀಲಾ ಕಾಯ್ತಾ ಇದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.