ಹಿಂದೂ ಭಾವನೆಗಳಿಗೆ ಧಕ್ಕೆ : ಆಕ್ಷೇಪಾರ್ಹ ಸೀನ್‌ ಕಟ್ ಮಾಡಿದ ದಬಾಂಗ್-3 ತಂಡ

Suvarna News   | Asianet News
Published : Dec 19, 2019, 04:53 PM IST
ಹಿಂದೂ ಭಾವನೆಗಳಿಗೆ ಧಕ್ಕೆ : ಆಕ್ಷೇಪಾರ್ಹ ಸೀನ್‌ ಕಟ್ ಮಾಡಿದ ದಬಾಂಗ್-3 ತಂಡ

ಸಾರಾಂಶ

ಸಲ್ಲು ಬಾಯ್- ಕಿಚ್ಚ ಸುದೀಪ್ ಬಹುನಿರೀಕ್ಷಿತ 'ದಬಾಂಗ್-3' ಡಿಸಂಬರ್ 20 ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಟೈಟಲ್ ಟ್ರಾಕ್‌ನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಂಶಗಳಿವೆ ಎನ್ನಲಾಗಿದ್ದು ಆ ಸೀನ್‌ಗಳಿಗೆ ಚಿತ್ರತಂಡ ಕತ್ತರಿ ಹಾಕಿದೆ. 

ಕಿಚ್ಚ ಸುದೀಪ್- ಸಲ್ಮಾನ್ ಖಾನ್ ಬಹುನಿರೀಕ್ಷಿತ 'ದಬಾಂಗ್-3' ಚಿತ್ರದ ಟೈಟಲ್ ಹಾಡಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಅಂಶಗಳಿವೆ ಎಂದು ಹಿಂದೂಪರ ಸಂಘಟನೆಗಳು ಆರೋಪ ಮಾಡಿದ್ದು ಚಿತ್ರತಂಡ ಅದಕ್ಕೆ ಕತ್ತರಿ ಪ್ರಯೋಗ ಮಾಡಿದೆ. 

ಈ ಬಗ್ಗೆ ಸಲ್ಮಾನ್ ಖಾನ್ ಪ್ರೊಡಕ್ಷನ್ ಹೌಸ್ SKF ಟ್ವಿಟರ್'ನಲ್ಲಿ ಅಧಿಕೃತಗೊಳಿಸಿದೆ. 'ಎಲ್ಲರ ಧಾರ್ಮಿಕ ಮನೋಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅಂತಹ ಸೀನ್‌ಗಳನ್ನು ಕಟ್ ಮಾಡಲಾಗಿದೆ' ಎಂದು ಸ್ಪಷ್ಟಪಡಿಸಿದೆ. 

 

ದಬಾಂಗ್ -3 ಟೈಟಲ್ ಟ್ರಾಕ್‌ ಬ್ಯಾಕ್‌ಗ್ರೌಂಡ್‌ನಲ್ಲಿ ಸಾಧು -ಸಂತರು ಗಿಟಾರ್ ಹಿಡಿದುಕೊಂಡು ಡ್ಯಾನ್ಸ್ ಮಾಡುತ್ತಿರುದಾಗಿ ತೋರಿಸಿದ್ದಾರೆ. ಇದನ್ನು ಪ್ರಶ್ನಿಸಿ ಹಿಂದೂ ಜನಜಾಗೃತಿ ಸಮಿತಿ ಸೆನ್ಸಾರ್ ಮಂಡಳಿಗೆ ಪತ್ರ ಬರೆದಿದ್ದರು.

'ದಬಾಂಗ್‌ 3’ ಕನ್ನಡಿಗರ ಸಿನಿಮಾ: ಸುದೀಪ್ ನನ್ನ ಸೋದರ, ಅವರೇ ಹೀರೋ' 

ದಬಾಂಗ್ -3 ನಟಿ ಸೋನಾಕ್ಷಿ ಸಿನ್ಹಾ ಸಂದರ್ಶವೊಂದರಲ್ಲಿ ಮಾತನಾಡುತ್ತಾ, 'ಯಾರ ಭಾವನೆಗಳಿಗೂ ನೋವುಂಟು ಮಾಡುವುದು ನಮ್ಮ ಉದ್ದೇಶವಲ್ಲ. ಯಾರಿಗಾದರೂ ನಮ್ಮ ಸಿನಿಮಾದಿಂದ ತೊಂದರೆ ಉಂಟಾದಲ್ಲಿ ಮಾಧ್ಯಮದ ಮುಂದೆ ಹೋಗುವ ಮುನ್ನ ನಮ್ಮ ಬಳಿಯೇ ಬನ್ನಿ' ಎಂದಿದ್ದರು.  

ಸಲ್ಲುಭಾಯ್, ಕಿಚ್ಚ ಅಭಿನಯದ ದಬಾಂಗ್ 3 ಸಿನಿಮಾ ಪ್ರಚಾರದಲ್ಲಿ BY ವಿಜಯೇಂದ್ರ ಮಿಂಚಿಂಗ್

ಡಿಸಂಬರ್ 20 ರಂದು ದಬಾಂಗ್-3 ದೇಶಾದ್ಯಂತ ತೆರೆ ಕಾಣಲಿದೆ. ಸಲ್ಮಾನ್ ಖಾನ್, ಕಿಚ್ಚ ಸುದೀಪ್, ಸೋನಾಕ್ಷಿ ಸಿನ್ಹಾ, ಅರ್ಬಜ್ ಖಾನ್, ಮಹಿ ಗಿಲ್, ತಿನ್ನು ಆನಂದ್ ನಟಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Rajinikanth Birthday.. ಅಬ್ಬಬ್ಬಾ ಸರಳತೆಯ ಶಿಖರ ರಜನಿಕಾಂತ್ ಇಷ್ಟೊಂದು ಕೋಟಿ ಆಸ್ತಿಗೆ ಒಡೆಯನಾ?
HBD Rajinikanth: ಕಾಲಿವುಡ್‌ನ 'ಪವರ್‌ಹೌಸ್'.. ಭಾರತೀಯ ಸಿನಿಮಾದ ರಾಜಾಧಿರಾಜ ರಜನಿಕಾಂತ್ ಬಗ್ಗೆ ನಿಮಗೆಷ್ಟು ಗೊತ್ತು?