ಕಂಗನಾ ರಣಾವತ್ ಅವರು ತಮ್ಮ ಮಾಜಿ ಸ್ನೇಹಿತನ ಕುರಿತು ಕುತೂಹಲದ ಮಾಹಿತಿಯೊಂದು ಶೇರ್ ಮಾಡಿದ್ದು, ಅದರ ವಿಡಿಯೋ ಪುನಃ ವೈರಲ್ ಆಗಿದೆ.
ಕಾಂಟ್ರವರ್ಸಿ ಕ್ವೀನ್ ಎಂದೇ ಫೇಮಸ್ ಆಗಿರೋ ನಟಿ ಕಂಗನಾ ರಣಾವತ್. ನೇರ ದಿಟ್ಟ ಮಾತಿನಿಂದ ಒಂದು ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗ್ತಿರೋ ನಟಿ ಕಂಗನಾ ಅವರ ನಟನಾ ಕೌಶಲಕ್ಕೆ ಅವರೇ ಸಾಟಿ. ಇದೀಗ ಅವರ ಬಹು ನಿರೀಕ್ಷಿತ ಹಾಗೆಯೇ ಬಹು ಚರ್ಚಿತ ಎಮರ್ಜೆನ್ಸಿ ಚಿತ್ರದ ಬಿಡುಗಡೆಯ ಡೇಟ್ ಫಿಕ್ಸ್ ಆಗಿದೆ. ಕಳೆದ ಎರಡು ವರ್ಷಗಳಿಂದ ಬಹಳ ಚರ್ಚೆಗೆ ಗ್ರಾಸವಾಗಿರೋ ಈ ಚಿತ್ರದ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಇದಾಗಲೇ ಕೆಲವು ಸಲ ಈ ಚಿತ್ರದ ಬಿಡುಗಡೆ ದಿನಾಂಕ ಒಂದಿಲ್ಲೊಂದು ಕಾರಣಗಳಿಂದ ಮುಂದೆ ಹೋಗುತ್ತಲೇ ಇದೆ. ಇದೀಗ ಕೊನೆಗೂ ಡೇಟ್ ಫಿಕ್ಸ್ ಆಗಿದೆ. ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಸುದ್ದಿಯಲ್ಲಿರುವ ಕಂಗನಾ ರಣಾವತ್ (Kangana Ranaut) ಅವರ ಈ ಚಿತ್ರವೂ ಸಕತ್ ಸುದ್ದಿ ಮಾಡುತ್ತಲೇ ಇದೆ. ಚಿತ್ರದ ಆರಂಭದ ಕುರಿತು ಚರ್ಚೆ ಶುರುವಾದಾಗಿನಿಂದಲೂ ಈ ಚಿತ್ರ ಹಾಗೂ ಕಂಗನಾ ಇಬ್ಬರೂ ಸಕತ್ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಚಿತ್ರವು, ಜೂನ್ 14ರಂದು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
ಈ ನಡುವೆಯೇ, ನಟಿಯ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಈಕೆ ತಮ್ಮ ಮಾಜಿ ಲವರ್ ಕುರಿತು ಮಾತನಾಡಿದ್ದಾರೆ. ಅಷ್ಟಕ್ಕೂ 36 ವರ್ಷದ ಕಂಗನಾ ಅವರು ಇನ್ನೂ ಅವಿವಾಹಿತರು. ಇತ್ತೀಚೆಗೆ ಇವರ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಉದ್ಯಮಿ ಈಸಿ ಮೈ ಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ ಜೊತೆಗೆ ಇವರು ಸಂಬಂಧದಲ್ಲಿದ್ದಾರೆ ಎಂಬ ಸುದ್ದಿಯೊಂದು ಕೆಲ ದಿನಗಳಿಂದ ಸಿನಿ ವೆಬ್‌ಸೈಟ್‌ಗಳಲ್ಲಿ ಬಲವಾಗಿ ಹರಿದಾಡುತ್ತಿದೆ. ಸಲೂನ್ ಒಂದರ ಎದುರು ಕಂಗನಾ ಹಾಗೂ ಈಸಿ ಮೈ ಟ್ರಿಪ್‌ನ ಸಂಸ್ಥಾಪಕ ನಿಶಾಂತ್ ಪಿಟ್ಟಿ ಕೈ ಕೈ ಹಿಡಿದು ಓಡಾಡುತ್ತಿರುವ ಫೋಟೋವೊಂದನ್ನು ಸಿನಿಮಾ ಪಪಾರಾಜಿಗಳು ಸೆರೆ ಹಿಡಿದು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಕಂಗನಾ ಉದ್ಯಮಿ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ರೂಮರ್ಸ್‌ಗಳು ಹರಿದಾಡಿದ್ದವು. ಇದಾದ ನಂತರ ಕಂಗನಾ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿಯೂ ಇವರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದರಿಂದ ಈ ಗಾಸಿಪ್‌ಗೆ ಮತ್ತಷ್ಟು ರೆಕ್ಕೆಪುಕ್ಕ ಹುಟ್ಟಿಕೊಂಡಿದ್ದವು. ಆದರೆ ಈ ಸುದ್ದಿಗಳನ್ನು ನಟಿ ಕಂಗನಾ ರಣಾವತ್ ನಿರಾಕರಿಸಿದ್ದಾರೆ.
ಇಂದಿರಾಗಾಂಧಿಯಾಗಿ ಕಂಗನಾ ರಣಾವತ್- ಅಯೋಧ್ಯೆ ಭೇಟಿ ಬೆನ್ನಲ್ಲೇ ಎಮರ್ಜೆನ್ಸಿ ಬಿಡುಗಡೆಗೆ ಡೇಟ್ ಫಿಕ್ಸ್!
ಈ ವಿಚಾರದಿಂದ ಆಕ್ರೋಶಗೊಂಡಿದ್ದ ಅವರು, ನಾನು ನಿಶಾಂತ್ ಪಿಟ್ಟಿ ಜೊತೆ ಡೇಟಿಂಗ್ ಮಾಡ್ತಿಲ್ಲ, ಅವರಿಗೆ ಈಗಾಗಲೇ ಮದ್ವೆಯಾಗಿದ್ದು,ಅವರು ಖುಷಿಯಾಗಿ ಇದ್ದಾರೆ. ಮಾಧ್ಯಮಗಳಿಗೆ ನನ್ನ ವಿನಮ್ರ ಮನವಿ, ದಯವಿಟ್ಟು ಇಂತಹ ಸುಳ್ಳು ಸುದ್ದಿಯನ್ನು ದಯವಿಟ್ಟು ಹಬ್ಬಿಸಬೇಡಿ, ನಿಶಾಂತ್ ತಮ್ಮ ದಾಂಪತ್ಯದಲ್ಲಿ ಖುಷಿಯಾಗಿದ್ದು, ನಾನು ಬೇರೆ ಯಾರೊಂದಿಗೋ ಡೇಟಿಂಗ್‌ನಲ್ಲಿ ಇದ್ದೇನೆ. ಒಳ್ಳೆಯ ಸಮಯಕ್ಕಾಗಿ ನಿರೀಕ್ಷಿಸುತ್ತಿದ್ದೇನೆ. ನಮ್ಮನ್ನು ಮುಜುಗರಕ್ಕೊಳಪಡಿಸಬೇಡಿ, ಜೊತೆಯಾಗಿ ಫೋಟೋ ಕ್ಲಿಕ್ಕಿಸಿದ್ದೇವೆ ಎಂಬ ಕಾರಣಕ್ಕೆ ಅವಿವಾಹಿತ ಹೆಣ್ಣು ಮಕ್ಕಳ ಹೆಸರು ಬೇರೆ ಯಾವುದೋ ಹೊಸ ವ್ಯಕ್ತಿ ಜೊತೆ ಸದಾ ಲಿಂಕ್ ಆಗುವುದು ಅಷ್ಟೊಂದು ಸರಿ ಕಾಣುವುದಿಲ್ಲ ಎಂದಿದ್ದರು.
ಅಷ್ಟಕ್ಕೂ ಕಂಗನಾ ಹೆಸರುಇದಾಗಲೇ ಕೆಲವು ನಟರ ಜೊತೆ ಕೇಳಿಬಂದಿತ್ತು. ಅದರಲ್ಲಿಯೂ ಹೃತಿಕ್ ರೋಷನ್ ಅವರ ಜೊತೆ ಕಂಗನಾ ಸಂಬಂಧ ಒಂದು ಹೆಜ್ಜೆ ಮುಂದಕ್ಕೆ ಹೋಗಿತ್ತು. ಕಂಗನಾರಿಗಾಗಿ ಹೃತಿಕ್ ತಮ್ಮ ಪತ್ನಿಯನ್ನು ಬಿಡಲು ರೆಡಿ ಇದ್ದರು ಎನ್ನಲಾಗಿದೆ. ಆದರೆ ಅದ್ಹೇಗೋ ಇಬ್ಬರ ಸಂಬಂಧ ಮುರಿದು ಬಿತ್ತು. ಈ ಬಗ್ಗೆ ಕಂಗನಾ ಕೂಡ ಹೃತಿಕ್ ತಮಗೆ ಮೋಸ ಮಾಡಿದ್ದರು ಎಂಬ ಅರ್ಥದಲ್ಲಿ ಸಂದರ್ಶನ ನೀಡಿದ್ದರು. ಇದೀಗ ಫ್ರಾನ್ಸ್ ಬಾಯ್ಫ್ರೆಂಡ್ ಕುರಿತು ಕಂಗನಾ ಮಾತನಾಡಿರುವ ಹಳೆಯ ವಿಡಿಯೋ ವೈರಲ್ ಆಗುತ್ತಿದೆ.
ಇದರಲ್ಲಿ ಅವರು ಫುಡ್ ಬ್ಲಾಗರ್ ಕರ್ಲಿ ಟೇಲ್ಸ್ ಜೊತೆ ಮಾತನಾಡಿದ್ದರು. ನಾನು ನನ್ನ ಮಾಜಿ ಬಾಯ್ಫ್ರೆಂಡ್ ಜೊತೆ ಪ್ಯಾರೀಸ್ನಲ್ಲಿ ಇದ್ದಾಗ ಘಟನೆಯೊಂದು ನಡೆದಿದ್ದು, ಅದರ ಬಗ್ಗೆ ಹೇಳುತ್ತಿದ್ದೇನೆ ಎಂದಿದ್ದಾರೆ. ನಂತರ ಆ ಸ್ನೇಹಿತನ ಕುರಿತು ಮಾತನಾಡಿದ ಕಂಗನಾ, ಆತ ಇಂಗ್ಲಿಷ್ನವನು. ನಾವು ಪ್ಯಾರಿಸ್ನಲ್ಲಿ ಊಟಕ್ಕೆ ಹೋದಾಗ ಅವನು ಏನೋ ಒಂದು ಆರ್ಡರ್ ಮಾಡಿದ್ದ. ಅದು ಫ್ರೆಂಚ್ನ ಅಡುಗೆಯಾಗಿತ್ತು. ಅದು ಕಪ್ಪೆ ಎಂದು ನನಗೆ ನೋಡಿದಾಗಲೇ ಗೊತ್ತಾಯ್ತು. ಅದನ್ನು ಬೆಣ್ಣೆಯಲ್ಲಿ ಫ್ರೈ ಮಾಡಲಾಗಿತ್ತು. ಅದರ ಆಕಾರ ನೋಡಿ ಕಪ್ಪೆ ಎಂದು ಗೊತ್ತಾಯಿತು. ಅವನು ಆ ಕಪ್ಪೆಗಳನ್ನು ಸಲೀಸಾಗಿ ತಿಂದ. ನನಗೆ ಶಾಕ್ ಆಗಿತ್ತು ಎಂದರು. ಇದಕ್ಕೇನಾದ್ರೂ ನೀವು ಬ್ರೇಕಪ್ ಮಾಡಿಕೊಂಡ್ರಾ ಎಂದಾಗ ಕಂಗನಾ ಇಲ್ಲ ಇಲ್ಲ ಎಂದಿದ್ದಾರೆ. ಆದರೂ ಇದರಿಂದಲೇ ಇವರಿಬ್ಬರ ನಡುವೆ ಬ್ರೇಕಪ್ ಆಗಿದ್ದು ಎಂದು ಹೇಳಲಾಗುತ್ತಿದೆ.
ಬಾಲರಾಮನ ಪ್ರಾಣಪ್ರತಿಷ್ಠೆಯಾಗ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ ನಟಿ ಕಂಗನಾ ರಣಾವತ್: ವಿಡಿಯೋ ವೈರಲ್
ನಟಿಯ ಸಂದರ್ಶನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ:
ಕಂಗನಾ ರಣಾವತ್ ಬ್ರೇಕಪ್ಗೆ ಕಾರಣವಾಯ್ತಾ ಕಪ್ಪೆ? ಮಾಜಿ ಲವರ್ ಬಗ್ಗೆ ನಟಿ ಹೇಳಿದ್ದೇನು?