
ಟಾಲಿವುಡ್ ಹೆಸರಾಂತ ಛಾಯಾಗ್ರಾಹಕ ಶ್ಯಾಮ್ ಕೆ ನಾಯ್ಡು ಕಿರುತೆರೆ ಕಲಾವಿದೆಯನ್ನು ಪ್ರೀತಿಸಿ ಮದುವೆಯಾಗುವುದಾಗಿ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ ನಂತರ ಎಸ್‌ಆರ್ ನಗರದ ಪೊಲೀಸರು ಶ್ಯಾಮ್ ಅವರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.
ನಟಿ ಯಾರು:
ಹಲವು ವರ್ಷಗಳಿಂದ ಶ್ಯಾಮ್ ಹಾಗೂ ಸುಧಾ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿಯೂ ನಟಿಗೆ ಮಾತು ನೀಡಿದ್ದರಂತೆ ಆದರೆ ಮಾತನ್ನು ಉಳಿಸಿಕೊಳ್ಳದೇ ಯಾಮಾರಿಸಲು ಆರಂಭಿಸಿದಾಗ ನಟಿ ಹೈದರಾಬಾದ್‌ನ ಎಸ್‌ಆರ್ ನಗರದ ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರ ಶ್ಯಾಮನನ್ನು ಬಂಧಿಸಿ ಗುರುವಾರ ವಿಚಾರಣೆ ಆರಂಭಿಸಿದ್ದಾರೆ.
'ಪ್ರೀತ್ಸೆ' ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್‌ಗೆ ಅಂಜದೆ ಕಂಗೊಳ್ಳಿಸುತ್ತಿರುವುದು ಹೀಗೆ!
ಸುಧಾ ಕಿರುತೆರೆಯಲ್ಲಿ ಪ್ರಸಾರವಾಗುವ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ವಿಜಯ್ ದೇವರಕೊಂಡ ಅಭಿನಯದ 'ಅರ್ಜುನ್ ರೆಡ್ಡಿ' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ವಿಚಾರಣೆ:
ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. 6 ತಿಂಗಳುಗಳಿಂದ ಮದುವೆಯಾಗುವುದಾಗಿ ಹೇಳಿ ನಂಬಿಸಿರುವ ಶ್ಯಾಮ್ ಒಪ್ಪಿಕೊಳ್ಳದಿದ್ದರೆ ಅವರ ವಿರುದ್ಧ ಸೆಕ್ಷನ್ 493 ಬುಕ್ ಮಾಡಲಾಗುತ್ತದೆ. ಇದು ನಾನ್ ಬೇಲಬಲ್ ಆಗಿದ್ದು 10 ವರ್ಷಗಳ ಕಾಲ ಕಂಬಿ ಹಿಂದೆ ಇರಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ.
ಶ್ಯಾಮ್ ಕಾಂಟ್ರವರ್ಸಿ:
2017ರ ಹೈದರಾಬಾದ್ ಡ್ರಗ್ಸ್ ರಾಕೆಟ್‌ನಲ್ಲಿ ಶ್ಯಾಮ್ ಹೆಸರು ಕೇಳಿ ಬಂದಿತ್ತು. ವಿಶೇಷ ತನಿಖಾ ತಂಡವೊಂದು 10 ಗಂಟೆಗಳ ಕಾಲ ವಿಚಾರಣೆ ನಡೆಸಿ ಅವರ ಜೊತೆ ಸಂಪರ್ಕ ಹೊಂದಿದ್ದ 12 ಚಿತ್ರರಂಗದ ಮಂದಿಯನ್ನು ಬಂಧಿಸಿದ್ದರು ಎನ್ನಲಾಗಿದೆ.
ಲಾಕ್‌ಡೌನ್ ನಡುವೆ ಸೆಕ್ಸ್ ರಾಕೆಟ್, ಇಬ್ಬರು ಮಹಿಳೆಯರು ಸೇರಿ 6 ಮಂದಿ ಅರೆಸ್ಟ್!
ಈ ಹಿಂದೆಯೂ ಕೆಲವೊಂದು ಕೇಸ್ ಶ್ಯಾಮ್ ವಿರುದ್ಧ ಇರುವ ಕಾರಣ ಪೊಲೀಸರು ನಿಗಾವಹಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.