
ಕೊನೆಗೂ ಸಿಕ್ರು ಡೈರೆಕ್ಟರ್
ಕಾಲಿವುಡ್ ಚಿತ್ರರಂಗದಲ್ಲಿ ಈ ಇಬ್ಬರೂ ಸೂಪರ್ ಸ್ಟಾರ್‌ಗಳು. ಅದರಲ್ಲೂ ರಜನಿಕಾಂತ್ ಅವರಂತೂ ಅತ್ಯಂತ ಹೆಚ್ಚು ಸಂಭಾವನೆಯನ್ನು ಪಡೆಯುವ ನಟ. ಇದೀಗ ಕಮಲ್ ಹಾಸನ್ (Kamal Haasan) ಮತ್ತು ರಜನೀಕಾಂತ್ (Rajinikanth) ಜೋಡಿಯ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಇಬ್ಬರೂ ತಮಿಳುನಾಡಿಗೆ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಮೇರು ಸೂಪರ್ ಸ್ಟಾರ್‌ಗಳು. ಇಬ್ಬರ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಒಟ್ಟಿಗೇ ನಟಿಸಿದ್ದರು. ಆ ಸಿನಿಮಾಗಳು ಆಗ ಸೂಪರ್ ಹಿಟ್ ಆಗಿದ್ದವು. ಆದರೆ ಇಬ್ಬರಿಗೂ ಸ್ಮಾರ್‌ಡಮ್ ಬಂದ ಬಳಿಕ ಒಟ್ಟಿಗೆ ನಟಿಸಿದ್ದೇ ಇಲ್ಲ. ಆದರೆ, ಇದೀಗ ಮತ್ತೆ ಇಬ್ಬರೂ ಒಟ್ಟಿಗೇ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ರಜನಿಕಾಂತ್ ಹಾಗೂ ಕಮಲ್ ಹಾಸನ್ ಒಳ್ಳೆಯ ಗೆಳೆಯರೂ ಸಹ ಆಗಿದ್ದಾರೆ. ಕಮಲ್ ಹಾಸನ್ ಮತ್ತು ರಜನೀಕಾಂತ್ ಅವರನ್ನು ಒಟ್ಟಿಗೆ ತರಲು ಹಲವು ನಿರ್ಮಾಪಕರು, ನಿರ್ದೇಶಕರು ಪ್ರಯತ್ನಿಸಿದರಾದರೂ ಸಾಧ್ಯ ಆಗಿರಲಿಲ್ಲ. ಆದರೆ ಇದೀಗ ಸ್ವತಃ ಕಮಲ್ ಹಾಸನ್ ಅವರೇ ಈ ಅಸಾಧ್ಯವನ್ನು ಸಾಧ್ಯ ಮಾಡಲು ಮುಂದಾಗಿದ್ದಾರೆ. ಅವರೇ ತನ್ನ ಸ್ನೇಹಿತನಿಗಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೌದು, ಕಮಲ್ ಹಾಸನ್ ಅವರು ತಮ್ಮ ಬಹು ದಶಕದ ಗೆಳೆಯ ರಜನೀಕಾಂತ್ ಅವರಿಗಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಕಮಲ್ ಹಾಸನ್ ಅತಿಥಿ ಪಾತ್ರ?
ಅಚ್ಚರಿ ಎಂದರೆ, ರಜನಿಗಾಗಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ನಟ ಕಮಲ್ ಹಾಸನ್ ಅತಿಥಿ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಕೆಲವು ವಾರಗಳ ಹಿಂದಷ್ಟೆ ಈ ಸಿನಿಮಾದ ಘೋಷಣೆ ಆಗಿತ್ತು. ಕಮಲ್-ರಜನಿ ಜೋಡಿಯ ಈ ಸಿನಿಮಾವನ್ನು ತಮಿಳು ಚಿತ್ರರಂಗದ ಅನುಭವಿ ನಿರ್ದೇಶಕ ಸುಂದರ್ ಸಿ ನಿರ್ದೇಶನ ಮಾಡಲಿದ್ದಾರೆ ಎಂದು ಈ ಮೊದಲು ಘೋಷಿಸಲಾಗಿತ್ತು. ಆದರೆ ಕೆಲ ದಿನಗಳ ಬಳಿಕ ಸುಂದರ್ ಸಿ ಅವರು ಸ್ವತಃ ಸಿನಿಮಾದಿಂದ ಹೊರಗೆ ಹೋದರು.
ಸುಂದರ್ ಸಿ ಅವರ ನಿರ್ಗಮನದ ಬಳಿಕ ರಜನೀಕಾಂತ್ ಅವರ 173ನೇ ಸಿನಿಮಾದ ನಿರ್ದೇಶಕನಿಗಾಗಿ ಹುಡುಕಾಟ ನಡೆಸಲಾಯ್ತು. ಇದೀಗ ನಿರ್ದೇಶಕನ ನಿಗದಿ ಆಗಿದ್ದು, ಈ ಚಾನ್ಸ್ ಯುವ ನಿರ್ದೇಶಕರೊಬ್ಬರಿಗೆ ಸಿಕ್ಕಿದೆ. ಹೌದು, ರಜನೀಕಾಂತ್ ಅವರ 173ನೇ ಸಿನಿಮಾ ನಿರ್ದೇಶಿಸುವ ಅವಕಾಶ ಸಿಗುವ ಜೊತೆಗೆ ಕಮಲ್ ಹಾಸನ್ ಅವರ ನೇತೃತ್ವದಲ್ಲಿ ಈ ಸಿನಿಮಾದ ನಿರ್ದೇಶನ ಮಾಡುವ ಅವಕಾಶ ಒದಗಿ ಬಂದಿದೆ ಆ ಯುವ ನಿರ್ದೇಶಕರನಿಗೆ!
ಯುವ ನಿರ್ದೇಶಕ ಶಿಬಿ ಚಕ್ರವರ್ತಿ ಅವರು ರಜನೀಕಾಂತ್ ನಟಿನೆ, ಕಮಲ್ ಹಾಸನ್ ನಿರ್ಮಾಣದ ಈ ಹೊಸ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಶಿಬಿ ಈವರೆಗೆ ನಿರ್ದೇಶನ ಮಾಡಿರುವುದು ಕೇವಲ ಒಂದು ಸಿನಿಮಾ ಮಾತ್ರ. ಶಿವಕಾರ್ತಿಕೇಯನ್ ನಟನೆಯ 'ಡಾನ್' ಸಿನಿಮಾ ನಿರ್ದೇಶನ ಮಾಡಿದ್ದ ಶಿಬಿ, ಇದೀಗ ಈ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಈ ಮೊದಲು ಕೆಲವು ಸಿನಿಮಾಗಳಿಗೆ ಪ್ರಮುಖ ಅಸಿಸ್ಟೆಂಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇನ್ಮುಂದೆ ರಜನೀಕಾಂತ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
ಅಸಲಿಗೆ ಈ ಸಿನಿಮಾ ನಿರ್ದೇಶನ ಮಾಡುವ ರೇಸಿನಲ್ಲಿ ತಮಿಳಿನ ಹಲವು ಖ್ಯಾತ ನಿರ್ದೇಶಕರುಗಳಿದ್ದರು. ನೆಲ್ಸನ್, ನಿಥಿಲನ್ ಸಾಮಿನಾಥನ್, ಎಸ್‌ಯು ಅರುಣ್‌ಕುಮಾರ್, ಆರ್‌ಜೆ ಬಾಲಾಜಿ, ಬಾಲಕೃಷ್ಣನ್ ಇನ್ನೂ ಕೆಲವರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಅವಕಾಶ ಶಿಬಿ ಅವರಿಗೆ ದೊರೆತಿದೆ. ಶೂಟಿಂಗ್ ಯಾವಾಗ ಎಂಬ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.