ಚೆನ್ನೈನ ಭಾರಿ ಚಂಡಮಾರುತದ ಸುಳಿಗೆ ಸಿಲುಕಿದ್ದ ಆಮೀರ್​ ಖಾನ್​! ವೈರಲ್​ ಚಿತ್ರದಿಂದ ವಿಷಯ ಬಹಿರಂಗ...

By Suvarna News  |  First Published Dec 5, 2023, 5:31 PM IST

ಮೈಚಾಂಗ್ ಚಂಡಮಾರುತವು ಚೆನ್ನೈನಲ್ಲಿ ತೀವ್ರಗೊಂಡಿದ್ದು, ಇದರ ಸುಳಿಗೆ ಸಿಲುಕಿದ್ದ ನಟರಾದ ಆಮೀರ್​ ಖಾನ್ ಮತ್ತು ವಿಷ್ಣು ವಿಶಾಲ್ ಅವರನ್ನು ರಕ್ಷಿಸಲಾಗಿದೆ.  
 


ಮೈಚಾಂಗ್ ಚಂಡಮಾರುತವು ಚೆನ್ನೈ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ದಿನಗಳಿಂದ ಭಾರಿ ಹಾನಿಯನ್ನುಂಟುಮಾಡುತ್ತಿದೆ. ತೀವ್ರ ಚಂಡಮಾರುತದಿಂದ ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ  ಎರಡು ದಿನಗಳಿಂದ ನಗರ ಸಂಪೂರ್ಣ ಸ್ತಬ್ಧಗೊಂಡಿದೆ. ಇದೀಗ ಕರಪಾಕ್ಕಂನಲ್ಲಿ ಸಿಲುಕಿದ್ದ ನಟ ವಿಷ್ಣು ವಿಶಾಲ್ ಅವರನ್ನು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ರಕ್ಷಿಸಿದೆ. ಆದರೆ ಕುತೂಹಲದ ವಿಷಯ ಏನೆಂದರೆ, ವಿಷ್ಣು ವಿಶಾಲ್​ ಅವರನ್ನು ರಕ್ಷಿಸುವ ಸಮಯದಲ್ಲಿ ಆಮೀರ್​ ಖಾನ್​ ಕೂಡ ಚಂಡಮಾರುತದ ಸುಳಿಗೆ ಸಿಲುಕಿದ್ದರು ಎನ್ನುವ ವಿಷಯ ಬಹಿರಂಗಗೊಂಡಿದೆ! ಹೌದು.  ವಿಷ್ಣು ವಿಶಾಲ್​  ಅವರು ತಮ್ಮ ರಕ್ಷಣಾ ಕಾರ್ಯಾಚರಣೆಯ ಫೋಟೋ ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ನಟ ಅಮೀರ್ ಖಾನ್ ಅವರನ್ನು ಸಹ ಗುರುತಿಸಬಹುದು. ಇದು ವೈರಲ್​ ಆದಾಗಲೇ ಆಮೀರ್​ ಖಾನ್​ ಕೂಡ ಇಲ್ಲಿ ಸಿಲುಕಿದ್ದರು ಎನ್ನುವ ವಿಷಯ ಬಹಿರಂಗಗೊಂಡಿದೆ.
 
ಮೈಚಾಂಗ್ ಚಂಡಮಾರುತದಿಂದ ಉಂಟಾದ ಚೆನ್ನೈ ಪ್ರವಾಹದಿಂದ ತಮ್ಮನ್ನು ರಕ್ಷಿಸಲಾಗಿದೆ ಎಂದು ವಿಷ್ಣು ವಿಶಾಲ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಬಹಿರಂಗಪಡಿಸಿದ್ದಾರೆ. ಪ್ರಯಾಣಿಕರನ್ನು ರಕ್ಷಿಸಲು ದೋಣಿಗಳನ್ನು ನಿಯೋಜಿಸಿದ ಎರಡು ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಅಮೀರ್ ಖಾನ್ ಅವರನ್ನೂ ಕಾಣಬಹುದು. ವಿಷ್ಣು ವಿಶಾಲ್ ಅವರ ಪತ್ನಿ, ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರನ್ನೂ ಗುರುತಿಸಬಹುದು.

ರಣಬೀರ್‌ ಕಪೂರ್‌ ಅಪ್ಪ ರಿಷಿ ಕಪೂರ್‌ಗಿತ್ತು ಹಲವು ಸಂಬಂಧ! 'ರಾತ್ರಿ ಸುಖ'ದ ಗುಟ್ಟು ಬಿಚ್ಚಿಟ್ಟ ಪತ್ನಿ ನೀತು ಸಿಂಗ್!

Latest Videos

undefined

ಚಿತ್ರಗಳನ್ನು ಹಂಚಿಕೊಂಡ ವಿಶಾಲ್, 'ನಮ್ಮಂತಹ ಸಿಕ್ಕಿಬಿದ್ದಿರುವ ಜನರಿಗೆ ಸಹಾಯ ಮಾಡಿದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಧನ್ಯವಾದಗಳು. ಕರಪಾಕ್ಕಂನಲ್ಲಿ ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾಗಿವೆ.. ಈಗಾಗಲೇ 3 ಬೋಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಪರೀಕ್ಷೆಯ ಸಮಯದಲ್ಲಿ ಟಿಎನ್ ಸರ್ಕಾರವು ಉತ್ತಮ ಕೆಲಸ ಮಾಡಿದೆ. ಧನ್ಯವಾದಗಳು ಪಟ್ಟುಬಿಡದೆ ಕೆಲಸ ಮಾಡುತ್ತಿರುವ ಎಲ್ಲಾ ರಕ್ಷಣಾದಳಕ್ಕೆ ಎಂದು ಹೇಳಿದ್ದಾರೆ. 

ತಾನು ಕರಪಕ್ಕಂನಲ್ಲಿ ಸಿಕ್ಕಿಬಿದ್ದಿದ್ದೇನೆ ಎಂದು ವಿಶಾಲ್ ಈ ಹಿಂದೆ ಬಹಿರಂಗಪಡಿಸಿದ್ದರು.  ನನ್ನ ಮನೆಗೆ ನೀರು ನುಗ್ಗುತ್ತಿದೆ ಮತ್ತು ಕರಪಾಕ್ಕಂನಲ್ಲಿ ನೀರಿನ ಮಟ್ಟವು ಕೆಟ್ಟದಾಗಿ ಏರುತ್ತಿದೆ, ನಾನು ಸಹಾಯಕ್ಕಾಗಿ ಕರೆ ಮಾಡಿದ್ದೇನೆ. ಕರೆಂಟ್ ಇಲ್ಲ, ವೈಫೈ ಇಲ್ಲ, ಫೋನ್ ಸಿಗ್ನಲ್ ಇಲ್ಲ, ಏನೂ ಇಲ್ಲ.  ನಿರ್ದಿಷ್ಟ ಹಂತದಲ್ಲಿ ಟೆರೇಸ್​ನಲ್ಲಿ ಮಾತ್ರ  ಸ್ವಲ್ಪ ಸಿಗ್ನಲ್​ ಸಿಗುತ್ತಿದೆ.  ನಾನು ಮತ್ತು ಇಲ್ಲಿರುವ ಅನೇಕರು ಚೆನ್ನೈನಾದ್ಯಂತ ಇರುವ ಜನರು ಸಹಾಯಕ್ಕಾಗಿ ಕೋರಿಕೊಂಡಿದ್ದಾರೆ ಎಂದು ಹೇಳಿದ್ದರು. ಬಳಿಕ ಅವರನ್ನು ರಕ್ಷಿಸಲಾಗಿದೆ. ಇದೇ ವೇಳೆ, ತಮಿಳುನಾಡು  ಕೈಗಾರಿಕೆಗಳ ಸಚಿವ ಡಾ. ಟಿಆರ್‌ಬಿ ರಾಜಾ ಅವರು ಎಕ್ಸ್‌ ಖಾತೆಯಲ್ಲಿ  ನಟ ಆಮೀರ್ ಖಾನ್ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ತಾಳ್ಮೆಯಿಂದಿದ್ದಕ್ಕಾಗಿ ಪ್ರಶಂಸಿಸಿದ್ದಾರೆ.   

ಶಾರುಖ್ ಖಾನ್-ಪ್ರಿಯಾಂಕಾ ಚೋಪ್ರಾ ಮದ್ವೆ ಆಗಿದ್ರಾ? ಏನಿದು ಹೊಸ ಸುದ್ದಿ?

click me!