
ಬಾಲಿವುಡ್ ಬಾದ್ಶಾಹ್ ಎಂದೇ ಕರೆಯಲ್ಪಡುವ ಶಾರುಖ್ ಖಾನ್ ಇದೀಗ ಪಠಾಣ್ ಮತ್ತು ಜವಾನ್ ಯಶಸ್ಸಿನ ಗೆಲುವಿನಿಂದ ಬೀಗುತ್ತಿದ್ದಾರೆ. ಅವರ ಡಂಕಿ ಕೂಡ ಯಶಸ್ಸು ಕಂಡಿದೆ. ಈಗ ಕಿಂಗ್ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಇದಾಗಲೇ ಪಠಾಣ್ ಮತ್ತು ಜವಾನ್ ಬಾಲಿವುಡ್ನ ಬಹುತೇಕ ದಾಖಲೆಗಳನ್ನೂ ಉಡೀಸ್ ಮಾಡಿದೆ. ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇಂಥ ಹಿಟ್ ಚಿತ್ರಗಳನ್ನು ಕೊಟ್ಟಿರುವ ಶಾರುಖ್ ಅವರ ಕೆಲವು ಚಿತ್ರಗಳು ರಿಲೀಸೇ ಆಗಿಲ್ಲ ಎನ್ನುವುದು ಗೊತ್ತಾ? 95ಕ್ಕೂ ಚಿತ್ರಗಳಲ್ಲಿ ನಟಿಸಿರುವ ಶಾರುಖ್ ಅವರ ಕೆಲವು ಚಿತ್ರಗಳು ಫ್ಲಾಪ್ ಎಂದು ಸಾಬೀತಾಗಿದ್ದರೆ ಐದು ಚಿತ್ರಗಳು ಬಿಡುಗಡೆಯೇ ಕಾಣಲಿಲ್ಲ. ಇವುಗಳ ಪೈಕಿ ಒಂದು ಹಾಲಿವುಡ್ ಚಿತ್ರ ಕೂಡ ಇದೆ. 2011 ರಲ್ಲಿ, ಅವರು ಹಾಲಿವುಡ್ ಚಲನಚಿತ್ರ ಎಕ್ಸ್ಟ್ರೀಮ್ ಸಿಟಿ ಕೆಲಸ ಮಾಡಿದರು. ಈ ಚಿತ್ರದಲ್ಲಿ ಲಿಯೊನಾರ್ಡೊ ಡಿಕಾಪ್ರಿಯೊ ಕೂಡ ಅವರ ಜೊತೆಗಿದ್ದರು. ಆದರೆ ಚಿತ್ರ ಬಿಡುಗಡೆಯಾಗಲೇ ಇಲ್ಲ.
ಆದರೆ, ಈಗ ಶಾರುಖ್ ಅವರ ಕನಸು ನನಸಾಗುವ ಕಾಲ ಸನ್ನಿಹಿತವಾಗುವಂತೆ ಕಾಣಿಸುತ್ತಿದೆ. ಹಾಲಿವುಡ್ ನಟ ಅಂಥೋನಿ ಮ್ಯಾಕಿ ಅವರ ಅವೆಂಜರ್ಸ್‌ನ ಮುಂದಿನ ಸರಣಿಗೆ ಶಾರುಖ್ ಆಯ್ಕೆ ಆಗಿರುವುದಾಗಿ ವರದಿಯಾಗಿದೆ. ‘ಕ್ಯಾಪ್ಟನ್ ಅಮೆರಿಕ: ಬ್ರೇವ್ ನ್ಯೂ ವರ್ಲ್ಡ್ ಖ್ಯಾತಿಯ ಅಂಥೋನಿ ಅವರು, ನಟ ಶಾರುಖ್ ಅವರನ್ನು ಆಯ್ಕೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಇದಾಗಲೇ ಅಂಥೋನಿ ಮ್ಯಾಕಿ ಅವರು, ಶಾರುಖ್ ಬಗ್ಗೆ ಮಾತನಾಡಿದ್ದು, ಶಾರುಖ್ ಖಾನ್ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ಮಂದಿಗೂ ಪರಿಚಿತರು. ಅನೇಕರು ಇವರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ ಎಂದಿದ್ದಾರೆ.
ಮಗಳ ಹೊಕ್ಕಳು ಕಾಣದಂತೆ ವೇದಿಕೆ ಮೇಲೆಯೇ ಶಾರುಖ್ ಏನ್ ಮಾಡಿದ್ರು ನೋಡಿ! ನಟನಿಗೆ ಅಪಾರ ಮೆಚ್ಚುಗೆ
ಹಲವಾರು ನಟರನ್ನು ನೋಡಿದ ಬಳಿಕ, ಮ್ಯಾಕಿ ಅವರು, ಶಾರುಖ್ ಅವರನ್ನು ಆಯ್ಕೆ ಮಾಡಿದ್ದು, ಇದರಿಂದ ಕಿಂಗ್ ಖಾನ್ ಹಾಲಿವುಡ್ಗೆ ಹಾರಲಿದ್ದಾರೆ ಎನ್ನಲಾಗಿದೆ. ಆದರೆ ಸದ್ಯ ಅವರು ಬಾಲಿವುಡ್ ಬಿಡುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಷ್ಟಕ್ಕೂ ಬಾಲಿವುಡ್‌ನಲ್ಲಿ ತಮ್ಮದೇ ಆಗಿರುವ ಛಾಪು ಮೂಡಿಸಿರುವ ಶಾರುಖ್, ವಯಸ್ಸು 60ಕ್ಕೆ ಸಮೀಪವಾದರೂ ನಾಯಕನಾಗಿಯೇ ಮಿಂಚುತ್ತಿದ್ದಾರೆ. ಮಗಳ ವಯಸ್ಸಿನ ನಾಯಕಿಯರ ಜೊತೆ ರೊಮಾನ್ಸ್ ಕೂಡ ಮಾಡುತ್ತಿದ್ದಾರೆ. ಆದ್ದರಿಂದ ಸದ್ಯ ಅವರು ಬಾಲಿವುಡ್ ಬಿಡುವುದಿಲ್ಲ. ಆದರೆ ಹಾಲಿವುಡ್ನಲ್ಲಿ ಅವರಿಗೆ ಇನ್ನಷ್ಟು ಆಫರ್ಗಳು ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
‘ಅವೆಂಜರ್ಸ್ ಮುಂದಿನ ಸರಣಿಯಲ್ಲಿ ಯಾವ ಬಾಲಿವುಡ್ ಹೀರೋನ ನೀವು ಆಯ್ಕೆ ಮಾಡಿಕೊಳ್ಳುತ್ತೀರಿ’ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ನನ್ನ ಪ್ರಕಾರ ಶಾರುಖ್ ಖಾನ್. ಅವರು ಇದಕ್ಕೆ ಅತ್ಯುತ್ತಮ ಆಯ್ಕೆ’ ಎಂದು ಹೇಳಿದ್ದಾರೆ. ಇದರಿಂದ ಹಾಲಿವುಡ್ನಲ್ಲಿ ಶಾರುಖ್ ಖಾನ್ಗೆ ಒಳ್ಳೆಯ ಅವಕಾಶ ಸಿಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
'ದಂತದ ಬೊಂಬೆ' ಶಾರುಖ್ ಪುತ್ರಿ ಸುಹಾನಾಳ ದೇಹದ ಯಾವ್ಯಾವ ಭಾಗಕ್ಕೆ ಕತ್ತರಿ ಬಿದ್ದಿದೆ ನೋಡಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.