ಅಂಬಾನಿ ಮದುವೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು 83 ಕೋಟಿ ರೂ ಸಂಭಾವನೆ ಪಡೆದ ಕೆನಡಾ ಗಾಯಕ ಜಸ್ಟಿನ್ ಬೈಬರ್ ಅವರು ತೊಟ್ಟ ಬಟ್ಟೆ ಬಗ್ಗೆ ಜನ ಏನಂತಿದ್ದಾರೆ?
ವಿಶ್ವದ ಅತ್ಯಂತ ದುಬಾರಿ ಮದುವೆಗಳಲ್ಲಿ ಒಂದು ಎನ್ನಲಾದ ಮುಕೇಶ್ ಅಂಬಾನಿ-ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ ಮದುವೆ ಮುಗಿದರೂ ಇನ್ನೂ ಹಲವು ಶಾಸ್ತ್ರಗಳು ನಡೆಯುತ್ತಲೇ ಇವೆ. ಸಹಸ್ರಾರು ಕೋಟಿ ರೂಪಾಯಿಗಳ ಈ ಗ್ರ್ಯಾಂಡ್ ಫಂಕ್ಷನ್ನಲ್ಲಿ ದೇಶ-ವಿದೇಶಗಳ ಗಣ್ಯಾತಿಗಣ್ಯ ಅತಿಥಿಗಳು ಆಗಮಿಸಿ ನೂತನ ವಧು-ವರರಿಗೆ ಶುಭ ಹಾರೈಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿದ್ದರು. ಈ ವಿವಾಹ ಸಂಭ್ರಮವನ್ನು ಹೆಚ್ಚಿಸಲು ವಿದೇಶಗಳಿಂದ ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನು ಕರೆಸಲಾಗಿತ್ತು. ವಿದೇಶಿ ಕಲಾವಿದರಾದ ಅಡೇಲ್, ಡ್ರೇಕ್ ಮತ್ತು ಲಾನಾ ಡೆಲ್ ರೇ ಸೇರಿದಂತೆ ಹಲವರು ಅಂಬಾನಿ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದರು.
ಆದರೆ ಇವರಲ್ಲಿ ಹೆಚ್ಚಿನ ಗಮನ ಸೆಳೆಯುತ್ತಿರುವವರು, ಗಮನ ಸೆಳೆಯುವುದಕ್ಕಿಂತಲೂ ಮುಖ್ಯವಾಗಿ ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿರುವವರು ಜೊತೆ ಟ್ರೋಲ್ ಆಗುತ್ತಿರುವವರು ಎಂದರೆ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸಂಗೀತ ಸಮಾರಂಭಕ್ಕೆ ಆಗಮಿಸಿದ್ದ ಕೆನಡಾದ ಸುಪ್ರಸಿದ್ಧ ಪಾಪ್ ಗಾಯಕ ಜಸ್ಟಿನ್ ಬೈಬರ್ . ಸುಮಾರು ನಾಲ್ಕು ಗಂಟೆಗಳ ಪ್ರದರ್ಶನದಲ್ಲಿ ಬೇಬಿ, ಪೀಚ್, ಲವ್ ಯುವರ್ಸೆಲ್ಫ್, ಸಾರಿ... ಸೇರಿದಂತೆ ಹಲವು ಸಂಗೀತಗಳಿಗೆ ದನಿಯಾದ ಜಸ್ಟಿನ್ ಅವರು, ವಿದೇಶಿ ಸಂಗೀತ ಪ್ರಿಯರಿಗೆ ಹುಚ್ಚೆಬ್ಬಿಸಿದ್ದರು. ಇವರ ಗಾಯನಕ್ಕಿಂತಲೂ ಹೆಚ್ಚಾಗಿ ಇವರ ಅಂಗಿ, ಚಡ್ಡಿ ಸೋಷಿಯಲ್ ಮೀಡಿಯಾದಲ್ಲಿ ಇಂದಿಗೂ ಸುದ್ದಿಯಾಗುತ್ತಿದೆ.
ಮಗನ ಮದುವೆಯ ಬೆನ್ನಲ್ಲೇ ಎಲ್ಲರ ಕ್ಷಮೆ ಕೋರಿದ ನೀತಾ ಅಂಬಾನಿ: ವಿಡಿಯೋದಲ್ಲಿ ಹೇಳಿದ್ದೇನು?
ಅಂದಹಾಗೆ, ಮುಕೇಶ್ ಅಂಬಾನಿಯವರು ವಿದೇಶಿ ಕಲಾವಿದರಿಗೆ ನೂರಾರು ಕೋಟಿ ರೂಪಾಯಿಗಳ ಸಂಭಾವನೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಜಸ್ಟಿನ್ ಅವರಿಗೆ 83 ಕೋಟಿ ರೂಪಾಯಿ ಸಂಭಾವನೆ ನೀಡಿರುವುದಾಗಿ ವರದಿಯಾಗಿದೆ. ಇಷ್ಟು ಸಂಭಾವನೆ ಪಡೆದ ಗಾಯಕ, ಬನಿಯನ್, ಪಾಯಿಜಾಮಾ ಮತ್ತು ಚಡ್ಡಿಯಲ್ಲಿ ಕಾಣಿಸಿಕೊಂಡಿರುವುದರಿಂದ ಸಕತ್ ಟ್ರೋಲ್ ಮಾಡಲಾಗುತ್ತಿದೆ. ಗಾಯಕ ಧರಿಸಿರುವ ಈ ಡ್ರೆಸ್ಗಳ ಬೆಲೆ ಬಲು ದುಬಾರಿ ಇದ್ದರಿರಲಿಕ್ಕೂ ಸಾಕು. ಸಿಂಪಲ್ ಎನ್ನುವಂತೆ ಕಾಣಿಸುವ ಇವೆಲ್ಲಾ ದುಬಾರಿ ಬ್ರ್ಯಾಂಡೆಡ್ ಬಟ್ಟೆಗಳೇ. ಆದರೆ ಟ್ರೋಲಿಗರು ಹೇಳುತ್ತಿರುವುದೇ ಬೇರೆ. ಬನಿಯನ್ 100 ರೂ, ಚಡ್ಡಿ 40 ರೂ. ಪೈಜಾಮ 200 ರೂ... ಸಂಭಾವನೆ 83 ಕೋಟಿ... ಇದ್ಯಾವ ಸೀಮೆ ನ್ಯಾಯನಪ್ಪಾ ಎಂದು ಪ್ರಶ್ನಿಸುತ್ತಿದ್ದಾರೆ.
ಸಾಮಾನ್ಯ ಜನರ ಮದುವೆಗೆ ಹೋಗಲು ಭಾರತದಲ್ಲಿ ಹೆಚ್ಚಿನವರು ಏನು ಧರಿಸಬೇಕು, ಯಾವ ಒಡವೆ ಹಾಕಬೇಕು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಅದರಲ್ಲಿಯೂ ಸ್ವಲ್ಪ ಶ್ರೀಮಂತ ಕುಟುಂಬದ ಮದುವೆಗೆ ಹೋಗಬೇಕಾದರೆ ಹಲ ತಿಂಗಳುಗಳಿಂದಲೇ ರೆಡಿ ಶುರುವಾಗಿರುತ್ತದೆ. ಶಾಪಿಂಗ್ ಕೂಡ ಭರ್ಜರಿ ಮಾಡಲಾಗುತ್ತದೆ. ಕೆಲವೊಮ್ಮೆ ಅಂತಸ್ತಿಗೂ ಮೀರಿ ಖರ್ಚು ಮಾಡುವವರೂ ಇದ್ದಾರೆ. ಒಡವೆಗಳನ್ನು ಬಾಡಿಗೆಗೆ ಪಡೆದುಕೊಂಡು ಹೋಗುವವರೂ ಇದ್ದಾರೆ. ಅದರಲ್ಲಿ ಬಿಲೇನಿಯ್ ಒಬ್ಬರ ಮದುವೆಗೆ ಹೋಗುವುದು ಎಂದರೆ ಸುಮ್ಮನೆನಾ? ಅಂಬಾನಿ ಪುತ್ರನ ಮದುವೆಗೆ ಬಂದ ಸೆಲೆಬ್ರಿಟಿಗಳ ಪೈಕಿ ಹಲವು ಮಹಿಳೆಯರು ಚಿನ್ನ, ವಜ್ರಾಭರಣಗಳಿಂದ ಕಂಗೊಳಿಸಿದ್ದರೆ, ಪುರುಷರು ಚಿನ್ನ, ವಜ್ರ ಖಚಿತ ಗಡಿಯಾರ, ಚೈನುಗಳನ್ನು ಧರಿಸಿ ಬಂದವರೇ. ಅಂಥದ್ದರಲ್ಲಿ ಈ ಪರಿಯ ಖ್ಯಾತ ಗಾಯಕನೊಬ್ಬ ಅಂಗಿ-ಚಡ್ಡಿಯಲ್ಲಿ ಬಂದದ್ದು ಭಾರತೀಯರಿಗೆ ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಆಗುತ್ತಿದೆ.
ಅಂಬಾನಿ ಮದ್ವೆಯಲ್ಲಿ ಸೈಫ್ ಪುತ್ರನಿಂದ ನಾಚಿಕೆಗೇಡಿನ ವರ್ತನೆ! ದುಂಬಾಲು ಬಿದ್ದರೂ ಸಿಗ್ಲಿಲ್ಲ ಗಾಯಕನ ಜಾಕೆಟ್