
ನಿತೇಶ್ ತಿವಾರಿ ನಿರ್ದೇಶನದ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ 4000 ಕೋಟಿಯಷ್ಟು ಅತಿದೊಡ್ಡ ಬಜೆಟ್‌ನ ರಾಮಾಯಣ ಇಂದು(ನವೆಂಬರ್ 5, 2026) ದೇಶಾದ್ಯಂತ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಯಾಗುವ ಮೊದಲೇ ಸಾಕಷ್ಟು ಸಂಚಲನ ಸೃಷ್ಟಿಸುತ್ತಿರುವುದಲ್ಲದೆ ಅಡ್ವಾನ್ಸ್ ಬುಕಿಂಗ್‌ನಲ್ಲಿ ನೂರು ಕೋಟಿ ಗಡಿ ದಾಟುವ ಮೂಲಕ ಹಲವು ರೆಕಾರ್ಡ್ ಗಳು ಮುರಿದೆ. ರಣಬೀರ್ ಕಪೂರ್ ಭಗವಾನ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಮುಖ್ಯವಾಗಿ ರಾವಣನಾಗಿ ಅಬ್ಬರಿಸಿರುವ ಕನ್ನಡಿಗ ನಟ ಯಶ್ ನಿರ್ಮಾಣ ನಟನೆಯ ಈ ಪೌರಾಣಿಕ ಮಹಾಕಾವ್ಯವು ಜಗತ್ತಿನಾದ್ಯಂತ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. ಹೀಗಾಗಿ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಟಿಕೆಟ್‌ಗಳ ಮುಂಗಡ ಬುಕಿಂಗ್‌ಗಳು ಹೆಚ್ಚುತ್ತಿವೆ.
ಜಪಾನ್, ಚೀನಾ ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಮಾತ್ರ ನೋಡಬಹುದಾಗಿದ್ದ 4DX ಥಿಯೇಟರ್ ಇದೀಗ ಭಾರತದಲ್ಲೂ ನೋಡಲು ಸಾಧ್ಯವಿದೆ. 3D ಸಿನಿಮಾ ಒಂದು ಅನುಭವವಾದರೆ, 4DX ನಲ್ಲಿ ಕುಳಿತಿರುವ ಸೀಟುಗಳೇ ಚಲಿಸುತ್ತವೆ! ಗಾಳಿ, ಮಿಂಚು, ಯುದ್ಧ ಅಬ್ಬಬ್ಬ ಈ ದೃಶ್ಯಗಳು ಕಣ್ಮುಂದೆ ನಡೆಯುತ್ತಿದೆ ಎಂಬಂತಹ ನೈಜ ಅನುಭವ ಪಡೆಯಬಹುದು. ಬೆಂಗಳೂರಿನಲ್ಲೇ 4DX ಥಿಯೇಟರ್ ಗಳಿದ್ದು, ನೀವು ರಾಮಾಯಣವನ್ನು 4Dx ನೋಡುವ ಆಸೆ ಇದ್ದರೆ ಈ ಕೆಳಗಿನ ಥಿಯೇಟರ್‌ಗಳಿಗೆ ಹೋಗಿ ನೋಡಬಹುದು!
ಪಿವಿಆರ್ ನೆಕ್ಸಸ್ ಮಾಲ್( PVR Nexus Mall} (ಹಿಂದಿನ Forum Mall): ಕೋರಮಂಗಲ
ಪಿವಿಆರ್ ವೆಗಾ ಸಿಟಿ ಮಾಲ್ (PVR Vega City Mal: ಬನ್ನೇರುಘಟ್ಟ ರಸ್ತೆ
PVR Phoenix Marketcity: ಮಹದೇವಪುರ / ವೈಟ್‌ಫೀಲ್ಡ್ ರಸ್ತೆ
PVR Forum Mall: ಕನಕಪುರ ರಸ್ತೆ
PVR Bhartiya Mall of Bengaluru: ಥಣಿಸಂದ್ರ / ಹೆಣ್ಣೂರು ರಸ್ತೆ
ಬೆಂಗಳೂರಿನ ಥಿಯೇಟರ್‌ಗಳಲ್ಲಿ ರಾಮಯಾಣ ಟಿಕೆಟ್ ದರ ಸುಮಾರು ₹800 ರಿಂದ ₹1,400 (ಶೋ ಸಮಯ ಮತ್ತು ಸೀಟಿನ ಪ್ರಕಾರ) ಇದ. ಇನ್ನು ಸಿನಿಮಾ ವೀಕ್ಷಿಸಲು ಪ್ರವೇಶ ದ್ವಾರದಲ್ಲೇ ವಿತರಿಸುವ 3D ಗ್ಲಾಸ್‌ಗೆ ಪ್ರತ್ಯೇಕವಾಗಿ ₹30 ರಿಂದ ₹50 ನೀಡಬೇಕಾಗುತ್ತೆ.ಬುಕ್ ಮೈ ಶೋದಲ್ಲಿ 4DX 3D ಯಲ್ಲಿ ನೋಡಬಹುದಾದ ಥಿಯೇಟರ್‌ಗಳನ್ನು ಹುಡುಕಿ. 4DX ಆಯ್ಕೆ ಮಾಡಿ ಟಿಕೆಟ್ ಬುಕ್ ಮಾಡಬಹುದು. ಅಥವಾ ನೇರವಾಗಿ ಥಿಯೇಟರ್‌ಗೆ ಹೋಗಿ ಬುಕ್ ಮಾಡಬಹುದು.
ರಾಮಾಯಣ: ಭಾಗ 1 ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ ಮತ್ತು ನಮಿತ್ ಮಲ್ಹೋತ್ರಾ ಮತ್ತು ಯಶ್ ನಿರ್ಮಿಸಿದ್ದಾರೆ, ರಣಬೀರ್ ಕಪೂರ್, ಸಾಯಿ ಪಲ್ಲವಿ, ರವಿ ದುಬೆ, ಸನ್ನಿ ಡಿಯೋಲ್, ಯಶ್, ಅನುಪಮ್ ಖೇರ್, ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಮತ್ತು ವಿವೇಕ್ ಒಬೆರಾಯ್ ನಟಿಸಿದ್ದಾರೆ.
ರಾಮಾಯಣ: ರೈಸ್ ಆಫ್ ಎ ಲೆಜೆಂಡ್ ನವೆಂಬರ್ 5, 2026 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸೋನಿ ಪಿಕ್ಚರ್ಸ್ ಅಂತರರಾಷ್ಟ್ರೀಯ ಬಿಡುಗಡೆ ಹಕ್ಕು ಪಡೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.