ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ಮೊದಲನೇ ಪುತ್ರಿ ಜಾಹ್ನವಿ ಈಗಾಗಲೇ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಎರಡನೇ ಪುತ್ರಿ ಖುಷಿಯ ಸರದಿ. ಅಂತೂ ಶ್ರೀದೇವಿ ಅವರ ಎರಡನೇ ಮಗಳೂ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ.
ನಿರ್ಮಾಪಕ ಬೋನಿ ಕಪೂರ್ ಮತ್ತು ನಟಿ ಶ್ರೀದೇವಿ ಅವರ ಎರಡನೇ ಪುತ್ರಿ ಖುಷಿ ಕಪೂರ್ ಬಾಲಿವುಡ್‌ಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. ತಾಯಿ ಶ್ರೀದೇವಿ ಮತ್ತು ಸಹೋದರಿ ಜಾಹ್ನವಿ ಅವರಂತೆಯೇ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಮೊದ ಮೊದಲ ಹೆಜ್ಜೆ ಇಡೋಕೆ ಖುಷಿಯಲ್ಲಿ ತಯಾರಾಗಿದ್ದಾರೆ ಖುಷಿ ಕಪೂರ್.
ಸಿನಿಮಾ ಇಂಡಸ್ಟ್ರಿಗೆ ಬರೋಕೆ ಖುಷಿ ತುಂಬಾ ಎಕ್ಸೈಟೆಡ್ ಆಗಿದ್ದು, ಶೀಘ್ರವೇ ತನ್ನ ಮೊದಲ ಎನೌನ್ಸ್‌ಮೆಂಟ್ ಮಾಡಲಿದ್ದಾಳೆ ಎಂದಿದ್ದಾರೆ ತಂದೆ ಬೋನಿ ಕಪೂರ್. ಇದು ಸಿನಿ ಪ್ರಿಯರು ಮತ್ತು ಶ್ರೀದೇವಿ ಫ್ಯಾನ್ಸ್‌ಗೆ ಥ್ರಿಲ್ಲಿಂಗ್ ಸುದ್ದಿಯಾಗಿದೆ.
ಟ್ರೆಡಿಷನಲ್ ಲುಕ್‌ನಲ್ಲಿ ಖುಷಿ ಹಾಗೂ ಜಾನ್ವಿ ಕಪೂರ್ ಪೋಟೋ ವೈರಲ್ !
ಬೋನಿ ಅವರು ಕೆಲವು ದಶಕಗಳ ಹಿಂದೆ ತಮ್ಮ ಸಹೋದರ ಸಂಜಯ್ ಕಪೂರ್ ಅವರನ್ನು ಇಂಟ್ರೊಡ್ಯೂಸ್ ಮಾಡಿದಂತೆ ಅವರು ಖುಷಿಯನ್ನು ಇಂಟ್ರೊಡ್ಯೂಸ್ ಮಾಡೋದಿಲ್ಲ ಎಂದೂ ಹೇಳಿದ್ದಾರೆ.
ನನ್ನ ಬಳಿ ಸಂಪನ್ಮೂಲಗಳಿರಬಹುದು, ಆದರೆ ಬೇರೊಬ್ಬರು ಖುಷಿಯನ್ನು ಇಂಟ್ರೊಡ್ಯೂಸ್ ಮಾಡಲಿ ಎಂದೇ ನಾನು ಬಯಸುತ್ತೇನೆ. ಏಕೆಂದರೆ ನಾನು ಅವಳ ತಂದೆ. ಚಲನಚಿತ್ರ ನಿರ್ಮಾಪಕರಾಗಿ ನಾನು ಅದನ್ನು ಮಾಡಲು ಸಾಧ್ಯವಿಲ್ಲ ಮತ್ತು ಅದು ನಟಿಯಾಗುವ ಖುಷಿಗೂ ಒಳ್ಳೆಯದಲ್ಲ ಎಂದಿದ್ದಾರೆ.