ಮ್ಯಾಗಜಿನ್‌ಗೆ ಪೋಸ್‌ ಕೊಡಲು ಹೋಗಿ ಟಾಯ್ಲೆಟ್ ನಲ್ಲಿ ಸಿಲುಕಿಕೊಂಡ 'ತಪ್ಪಡ್' ನಟಿ ?

By Suvarna News  |  First Published May 21, 2020, 4:02 PM IST

ಲಾಕ್‌ಡೌನ್‌ ಇದ್ದರೂ ಮನೆಯಲ್ಲಿಯೇ ಜಾಹಿರಾತಿಗೆ ಪೋಸ್‌ ಕೊಟ್ಟ ನಟಿ ತಾಪ್ಸಿ ಪನ್ನು. ಬೆಟರ್‌ ಲುಕ್ ಬೇಕು ಎಂದು ಬಾತ್‌ರೂಮ್‌ಗೆ ಹೋಗೋದಾ?
 


ಬಾಲಿವುಡ್‌ ಬೋಲ್ಡ್‌ ನಟಿ ತಾಪ್ಸಿ ಪನ್ನು ಲಾಕ್‌ಡೌನ್‌ ಇದ್ದರೂ ಮನೆಯಲ್ಲಿ ಎಷ್ಟು ದಿನ ಕಾಲ ಕಳೆಯುವುದಕ್ಕೆ ಆಗುತ್ತದೆ ಎಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಕೆಲ ದಿನಗಳ ಹಿಂದೆ ಜಾಹ್ನವಿ ಕಪೂರ್‌ ಮನೆಯಲ್ಲಿಯೇ ಫೋಟೋ ಶೋಟ್ ಮಾಡಿಸಿದ ನಂತರ ತಾಪ್ಸಿನೂ ಅದನ್ನೇ ಫಾಲೋ ಮಾಡಿದ್ದಾರೆ.

ಮ್ಯಾಗಜಿನ್‌ ಲುಕ್‌ ವೈರಲ್:

Tap to resize

Latest Videos

ಮುಂಬೈ ನಿವಾಸಿಯಾಗಿರುವ ತಾಪ್ಸಿ ಮನೆ ಕೊಂಚ ವಿಭಿನ್ನವಾಗಿದೆ. ಅದಕ್ಕೆ ಇನ್ನು ಹೆಚ್ಚು  ನ್ಯಾಚುಲರ್‌ ಲುಕ್‌ ನೀಡಲು ಮನೆಯನ್ನೇ ಮೇಕ್‌ ಓವರ್‌ ಮಾಡಿ ಫೋಟೋ ಶೋಟ್‌ ಮಾಡಿಸಿದ್ದಾರೆ.

ಮನೆಯ ಟಾಯ್ಲೇಟ್‌ ಸಿಂಕ್ ಮೇಲೆ ಕುಳಿತುಕೊಂಡು ಫೋಸ್‌ ನೀಡಿದ್ದಾರೆ. 'ಲಾಕ್‌ಡೌನ್‌ನಲ್ಲಿ ನಿಮ್ಮ ಜೊತೆ ಸ್ಟೈಲಿಸ್ಟ್‌, ಫೋಟೋಗ್ರಾಫರ್‌ ಹಾಗೂ ಆರ್ಟ್‌ ಡೈರೆಕ್ಟರ್‌ ಇದ್ರೆ ಹೀಗೆ ಆಗೋದು' ಎಂದು ಬರೆದುಕೊಂಡಿದ್ದಾರೆ. ಫೋಟೋ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಆದ ಕೆಲವೇ ಕ್ಷಣದಲ್ಲಿ ವೈರಲ್ ಆಗಿದೆ.

ಸಿಂಕ್ ಬಳಿ ಕುಳಿತುಕೊಂಡು ಲಿಪ್‌ಸ್ಟಿಕ್‌ ಹಚ್ಚಿಕೊಳ್ಳುತ್ತಿರುವ ಪನ್ನು ಲುಕ್‌ಗೆ ಅಂಗನಾ ಬೇಡಿ 'ಮನೆಯಲ್ಲಿದ್ದರೂ ಸೂಪರ್ ಲುಕ್‌' ಎಂದು ಕಾಮೆಂಟ್‌ ಮಾಡಿದ್ದಾರೆ.

 

ಎರಡು ವರ್ಷಗಳ ಹಿಂದೆ ತಾಪ್ಸಿ ಖರೀದಿಸಿದ ಮುಂಬೈ ಅಪಾರ್ಟ್ಮೆಂಟ್‌ನಲ್ಲಿ ಸಹೋದರಿ ದೇವಿಕಾ ಹಾಗೂ ಶಾಗ್ನೂ ಜೊತೆ ವಾಸವಿದ್ದಾರೆ. ಈ ಫೋಟೋಗೆ ಸಹೋದರಿ 'ನಾನು ಬಾತ್‌ರೂಮ್‌ ಕ್ಲೀನ್‌ ಮಾಡಿರುವೆ' ಎಂದು ಕಾಮೆಂಟ್‌ ಮಾಡಿದ್ದಾರೆ. 

ಒಟ್ಟಿನಲ್ಲಿ ಮನೆಯಲ್ಲಿ ಸುಮ್ಮನೆ ಕೂರಲಾಗದೆ ತಾರೆಯರು ಮಾಡಿತ್ತಿರುವ ವಿಭಿನ್ನ ಕೆಲಸಗಳು ಅನೇಕರಿಗೆ  ಸ್ಪೂರ್ತಿಯಾಗಿದೆ.

ಮಗುವಿನ ಹಂಬಲ:

ತನ್ನ ಅದ್ಭುತ ನಟನೆ ಮೂಲಕ ಸಾಕಷ್ಟು ಜನರ ಗಮನ ಸೆಳೆದಿರುವ ತಾಪ್ಸಿ ಈಗ ಮಗು ಬೇಕೆಂದು ಹಂಬಲಿಸುತ್ತಿದ್ದಾರಂತೆ. ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಮಾಡಲಿಂಗ್‌ ಮೂಲಕ ಬಣ್ಣದ  ಲೋಕಕ್ಕೆ ಕಾಲಿಟ್ಟ ತಾಪ್ಸಿ ಸೆಲೆಬ್ರಿಟಿಗಳ ಮಕ್ಕಳನ್ನು ನೋಡಿ ನನಗೂ ಮಗು ಬೇಕೆಂದು ಕಾಮೆಂಟ್‌ ಮಾಡಿದ್ದಾರೆ.

ಅನ್ನ ತಿಂದೂ ಸಣ್ಣಗಿರೋ ಪನ್ನು ...

ಫಿಟ್ನೆಸ್‌  ಪ್ರೀಕ್:

ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ  ಒಂದೇ ಬಾಡಿ ವೇಟ್‌ ಕಾಪಾಡಿಕೊಂಡು ಬಂದಿರುವ ತಾಪ್ಸಿ ಸಿಕ್ರೇಟ್‌ ಏನೆಂದು ರಿವೀಲ್ ಮಾಡಿದ್ದಾರೆ. ಬೆಳಗ್ಗೆ ಬಿಸಿ ನೀರಿನ ಜೊತೆ ನಟ್ಸ್‌ ಸೇವಿಸುತ್ತಾರಂತೆ. ಆಗಾಗ ಗ್ರೀನ್‌ ಟೀ ಹಾಗೂ ಸೌತೆಕಾಯಿ ತಿನ್ನೋದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ರಾತ್ರಿ 8.30ಗೆ ಊಟ ಸೇವಿಸಿ ಮಲಗುವುದಕ್ಕೆ ಸಿದ್ಧರಾಗುತ್ತಾರಂತೆ.

click me!