'ನೀವೆಲ್ಲರೂ ಕ್ರಿಮಿನಲ್‌ಗಳಿಗೆ ಸಮಾ' ಎಂದು ಬಾಲಿವುಡ್ ನಟ ಅಜಯ್ ದೇವಗನ್ ಹೇಳಿದ ಮಾತಿಗೆ ನೆಟ್ಟಿಗರು ಇದೇ ಮೊದಲ ಬಾರಿ ಸಾಥ್ ನೀಡಿದ್ದಾರೆ. ಕಾರಣವೇನು?
ಬಾಲಿವುಡ್‌ನ ಆಂಗ್ರಿ ಮ್ಯಾನ್ ಅಜಯ್ ದೇವಗನ್ ದಿನೇ ದಿನೇ ತಮ್ಮ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಇದಕ್ಕೆ ಕಾರಣವೇ ಸಾರ್ವಜನಿಕರು ವರ್ತಿಸುತ್ತಿರುವ ರೀತಿ.
ಎಲ್ಲೆಡೆ ಹಬ್ಬುತ್ತಿರುವ ಕೊರೋನಾ ವೈರಸ್ ಈಗಾಗಲೇ ಮೂರನೇ ಹಂತ ತಲುಪಿದ್ದು ಇದರಿಂದ ಜನರನ್ನು ರಕ್ಷಿಸಬೇಕೆಂದು ಭಾರತ ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಿದೆ. ಪೊಲೀಸರು, ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ಹಗಲು- ರಾತ್ರಿ ಲೆಕ್ಕಿಸದೇ ಜಾಗೃತಿ ಮೂಡಿಸುತ್ತ ಜನರ ಆರೋಗ್ಯ ಕಾಪಾಡುತ್ತಿದ್ದಾರೆ. ಆದರೆ ಕೆಲವರು ಇವರೊಟ್ಟಿಗೆ ನಡೆದುಕೊಳ್ಳುತ್ತಿರುವ ರೀತಿ ಅಜಯ್‌ಗೆ ಕೋಪ ತಂದಿದೆ. ಈ ಬಗ್ಗೆ ಟ್ಟೀಟ್ ಮಾಡಿದ್ದಾರೆ.
ನಮ್ಮಲ್ಲಿರುವ ವಿದ್ಯಾವಂತರೇ ನಮ್ಮಗೆಂದು ಕಷ್ಟ ಪಟ್ಟು ಕೆಲಸ ಮಾಡುತ್ತಿರುವ ವೈದ್ಯರ ಮೇಲೆ ಹಲ್ಲೆ ಮಾಡುತ್ತಿರುವುದನ್ನು ನೋಡುವುದಕ್ಕೆ 'DISGUSTED & ANGRY (ಅಸಹ್ಯ ಹಾಗೂ ಕೋಪ) ಬರುತ್ತದೆ. ಈ ರೀತಿ ವರ್ತಿಸುವವರು ಕ್ರಿಮಿನಲ್‌ಗಳಿಗೆ ಸಮಾ' ಎಂದು ಬರೆದುಕೊಂಡಿದ್ದಾರೆ.
DISGUSTED & ANGRY to read reports of “educated” persons attacking doctors in their neighbourhood on baseless assumptions. Such insensitive people are the worst criminals😡
— Ajay Devgn (@ajaydevgn)ಕೆಲ ತಿಂಗಳುಗಳ ಹಿಂದೆ ಅಜಯ್ ಪುತ್ರಿ ನೈಸಾಳಿಗೂ ಕೊರೋನಾ ವೈರಸ್ ಬಂದಿದೆ ಎಂದು ಹಬ್ಬಿದಾಗಲು ಅಜಯ್ ಗರಂ ಆಗಿದ್ದರು. ನೈಸಾ ಲಂಡನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದು ಕೊರೋನಾ ವೈರಸ್ ಹೆಚ್ಚಾದ ಕಾರಣ ಕಾಜೋಲ್ ಲಂಡನ್‌ಗೆ ತೆರಳಿ ಮಗಳನ್ನು ಭಾರತಕ್ಕೆ ಕರೆತಂದಿದ್ದಾರೆ. ಭಾರತಕ್ಕೆ ಹಿಂತಿರುಗಿದ ನಂತರ ಸರ್ಕಾರ ನಿಯಮಗಳ ಪ್ರಕಾರ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸೇಲ್ಫ್ ಕ್ವಾರಂಟೈನ್ ಆಗಿದ್ದರು. ಈ ವೇಳೆ ಜನರು ನೈಸಾ ಹಾಗೂ ಕಾಜೋಲ್‌ಗೂ ಕೊರೋನಾ ವೈರಸ್ ಬಂದಿದೆ ಎಂದು ಹಬ್ಬಿಸಿದ್ದರು.