ಆಲಿಯಾ ಭಟ್ ಆಯ್ತು ಈಗ ಪೂಜಾಭಟ್; ಸಡಕ್-2 ಲುಕ್‌ನಿಂದ ಸಹೋದರಿಯರು ಟ್ರೋಲ್!

By Suvarna News  |  First Published Jul 7, 2020, 2:38 PM IST

ಹಿರಿಯ ನಿರ್ದೇಶಕ ಮಹೇಶ್‌ ಭಟ್ ನಿರ್ದೇಶನದ 'ಸಡಕ್-2' ಚಿತ್ರದ ಫೈನಲ್ ಎಡಿಟ್‌ ರೆಡಿಯಾಗಿದೆ ಎಂದು ಘೋಷಿಸಿದ ಪೂಜಾ ಭಟ್‌, 'ನೀವು ಕುಣಿಯುವುದೇ ನೋಡಕ್ಕಾಗಲ್ಲ ಎಂದ ಪ್ರೇಕ್ಷಕರು. 


ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಪೂಜಾ ಭಟ್, ಆಲಿಯಾ ಭಟ್ ಮತ್ತು ಮಹೇಶ್ ಭಟ್ ಅವರು ತಮ್ಮ ಸಿನಿಮಾ ಬಗ್ಗೆ ಇರುವ ಭರವಸೆಯನ್ನು ವ್ಯಕ್ತ ಪಡಿಸುತ್ತಲೇ ಹೊಸ ಹೊಸ ಅಪ್ಡೇಟ್ಸ್‌ ನೀಡುತ್ತಲೇ ಇರುತ್ತಾರೆ ಆದರೆ ಇವರ ಪ್ರತಿ ಟ್ಟೀಟ್‌ಗೂ ನೆಟ್ಟಿಗರು ಕ್ಲಾಸ್‌ ತೆಗೆದುಕೊಳ್ಳುತ್ತಲೇ ಇರುವುದು ಸಿನಿಮಾ ತಂಡಕ್ಕೆ ಆತಂಕ ಶುರುವಾಗಿದೆ. 

ಆಲಿಯಾ ಭಟ್ 'ಸಡಕ್-2' ಪೋಸ್ಟರ್‌ ರಿಲೀಸ್‌; ಬಹಿಷ್ಕರಿಸುವಂತೆ ನೆಟ್ಟಿಗರಿಂದ ಆಕ್ರೋಶ! 

Tap to resize

Latest Videos

undefined

ಸತತ ಇಪ್ಪತ್ತು ವರ್ಷಗಳ ನಂತರ ತಮ್ಮ ಮಕ್ಕಳಾದ ಪೂಜಾ ಭಟ್‌ ಮತ್ತು ಆಲಿಯಾ ಭಟ್ ಸಿನಿಮಾ ನಿರ್ದೇಶನ ಮಾಡುವ ಮೂಲಕ ಬಾಲಿವುಡ್‌ಗೆ ಕಮ್ ಬ್ಯಾಕ್ ಮಾಡುತ್ತಿರುವ ಮಹೇಶ್‌ ಭಟ್ ಸಂತಸ ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ ಸಹೋದರ ಮುಖೇಶ್‌ ಭಟ್‌ ನಿರ್ಮಾಣ ಮಾಡುತ್ತಿರುವುದಕ್ಕೆ ಡಬಲ್ ಖುಷಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ಮತ್ತ ಆದಿತ್ಯಾ ರಾಯ್ ಕಪೂರ್‌ ಕೂಡ ಅಭಿನಯಿಸಲಿದ್ದಾರೆ.

ಸದ್ಯ ಸಡಕ್-2 ಚಿತ್ರದ ಮತ್ತೊಂದು ಲುಕ್‌ ಬಗ್ಗೆ ಚರ್ಚೆ ನಡೆಯುತ್ತಿದ್ದು ಸೋಮವಾರ ಟ್ಟಿಟರ್‌ನಲ್ಲಿ ಪೂಜಾ ಭಟ್‌ ಲುಕ್‌ ಬಗ್ಗೆ ಅಪ್ಡೇಟ್‌ ನೀಡಿದ್ದಾರೆ. ಅಪರಿಚಿತ ಪುಟ್ಟ ಹುಡುಗಿ ಡ್ಯಾನ್ಸ್ ಮಾಡುತ್ತಿರುವ  ಮೀಮ್ಸ್‌ ಅಪ್ಲೋಡ್ ಮಾಡಿ 'ಸಂತೋಷದ ಕ್ಷಣ! ಸಡಕ್ -2 ಚಿತ್ರದ ಅಂತಿಮ ಲುಕ್ ಸಿದ್ಧವಾಗಿದೆ.  ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಬರಲಿದೆ' ಎಂದು ಬರೆದುಕೊಂಡಿದ್ದಾರೆ.

 

Mooood! final edit locked and ready to be delivered to all key departments! pic.twitter.com/fdmnFgPGL3

— Pooja Bhatt (@PoojaB1972)

ಈ ಟ್ಟೀಟಿಗೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 'ಸುಶಾಂತ್ ಸಿಂಗ್ ದಿಲ್ ಬೇಚಾರಾ ಸಿನಿಮಾ ಬಗ್ಗೆ ಒಂದು ಮಾತನಾಡದ ನಿಮ್ಮ ಸಿನಿಮಾ ನಾವು ವೀಕ್ಷಿಸಲು ಸಾಧ್ಯವೇ ಇಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು 'ಮತ್ತೊಂದು ನೆಪೊಟಿಸಂ ತಂಡ ರೆಡಿಯಾಗುತ್ತಿದೆ' ಎಂದಿದ್ದಾರೆ.

click me!