2500 ರೂಪಾಯಿ ಕೊಡದ ನಿರ್ಮಾಪಕನಿಂದ ನವಾಜುದ್ದೀನ್ ಸಿದ್ದಿಕಿ ವಸೂಲಿ ಮಾಡಿದ್ದು ಹೀಗೆ!

By Suvarna News  |  First Published Apr 27, 2022, 10:30 AM IST

ವೇಟರ್‌ ಪಾತ್ರಕ್ಕೆ ಸಂಭಾವನೆ ಕೊಡದೆ ಸತಾಯಿಸಿದ ನಿರ್ಮಾಪಕನಿಂದ ನವಾಜುದ್ದೀನ್ ವಸೂಲಿ ಮಾಡಿದ್ದು ಹೀಗೆ... 


ಬಾಲಿವುಡ್‌ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳು ಹೆಸರು ಮತ್ತು ಹಣ ಮಾಡುವುದು ತುಂಬಾನೇ ಕಷ್ಟ. ನೂರಾರು ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಬೇಕು, ಸಂಭಾವನೆ ಸಿಗದೇ ಇದ್ದರೂ ಜನರಿಗೆ ಮುಖ ಪರಿಚಯ ಮಾಡಲು ನಟಿಸಬೇಕು, ಮುಂಬೈನಲ್ಲಿ ಮನೆ ಮತ್ತು ಹಣ ಇಲ್ಲದೆ ಪರದಾಡುವುದು ಬಹುತೇಕ ಕಲಾವಿದರ ಕಥೆ. ಈಗ ಕೋಟಿ ಬೆಲೆ ಬಾಳುವ ಮನೆಯಲ್ಲಿ ವಾಸಿಸುತ್ತಿರುವ ನಟ ನವಾಜುದ್ದೀನ್‌ (Nawazuddin Siddiqui) ವೇಟರ್‌ ಪಾತ್ರಕ್ಕೆ ಸಂಭಾವೆನೆ ಸಿಗದ ಸಮಯದಲ್ಲಿ ಏನು ಮಾಡಿ ವಸೂಲಿ ಮಾಡಿದ್ದರು ಎಂದು ರಿವೀಲ್ ಮಾಡಿದ್ದಾರೆ. 

1999ರಲ್ಲಿ ರವೀನಾ ಟಂಡನ್ (Raveen Tandon) ಮತ್ತು ಮನೋಜ್‌ ಬಾಜ್‌ಪೇಯಿ (Manoj Bajpayee) ಅಭಿನಯಿಸಿರುವ ಶೂಲ್ (Shool) ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಖಿ ವೇಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಐಷಾರಾಮಿ ಹೋಟೆಲ್‌ಗೆ ಮನೋಜ್‌ ಮತ್ತು ರವೀನಾ ಬರುತ್ತಾರೆ ಆಗ ನವಾಜುದ್ದೀನ್ ಎಂಟ್ರಿ ಕೊಟ್ಟು ಅವರಿಗೆ ತಿನ್ನಲು ಕುಡಿಯಲ್ಲಿ ಏನು ಬೇಕು ಎಂದು ಕೇಳಬೇಕು. ಪಾತ್ರ ತುಂಬಾನೇ ಚಿಕ್ಕದಾಗಿದ್ದರೂ ಆಗಿನ ಕಾಲದಲ್ಲಿ 2500 ಕೊಡುವುದಾಗಿ ನಿರ್ಮಾಪಕರು ಹೇಳಿದ್ದರಂತೆ. ಮಾತುಕತೆ ನಡೆದ ನಂತರ ಹಣ ಕೊಡದೆ ಸತಾಯಿಸಿದ್ದಾರೆ. 

Tap to resize

Latest Videos

'ನನಗೆ ಹಣ ಅಗತ್ಯವಿತ್ತು, ಹಣ ಇಲ್ಲದೆ ಒಂದು ದಿನವೂ ಬದುಕು ಆಗುತ್ತಿರಲಿಲ್ಲ. ದುಡಿಯ ಬೇಕು ಜೀವನ ಮಾಡಬೇಕು ಅಷ್ಟೇ ನನ್ನ ದಾರಿ ಆಗಿತ್ತು. ಶೂಲ್‌ ಸಿನಿಮಾದಲ್ಲಿ ನಾನು ವೇಟರ್ ಪಾತ್ರ ಮಾಡಿದ್ದೆ. ರವೀನಾ ಮತ್ತು ಮನೋಜ್ ಟೇಬಲ್‌ ಮೇಲೆ ಕುಳಿತಿರುತ್ತಾರೆ ಆಗ ನಾನು ಎಂಟ್ರಿ ಕೊಟ್ಟು ಏನು ಆರ್ಡರ್‌ ತೆಗೆದುಕೊಳ್ಳಲಿ ಎಂದು ಕೇಳಬೇಕು. ಸಣ್ಣ ಸೀನ್ ಅಷ್ಟೆ.  ನಿರ್ಮಾಪಕರು ಹೇಳಿದ್ದರು ನನಗೆ 2500 ಕೊಡುವುದಾಗಿ ಆದರೆ ಆ ಹಣ ನನ್ನ ಕೈ ಸೇರಲಿಲ್ಲ. ಈ ರೀತಿ ತುಂಬಾ ಘಟನೆಗಳು ನಡೆದಿದೆ ಆದರೆ ನನಗೆ ಶೂಲ್ ಸಿನಿಮಾ ಘಟನೆ ಎಂದೂ ಮರೆಯುವುದಕ್ಕೆ ಆಗೋಲ್ಲ. ಅದು ನನ್ನ ಕೆಲಸ ನನ್ನ ಜೀವನ' ಎಂದು ನವಾಜುದ್ದೀನ್ ಬಾಲಿವುಡ್‌ ಬಬಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಶಾರುಖ್ ಮನೆ ಪಕ್ಕದಲ್ಲೇ ನವಾಜುದ್ದೀನ್ ಸಿದ್ದಿಕಿ ಬಂಗಲೆ; ತಂದೆಯ ಹೆಸರಿಟ್ಟ ನಟ!

ನ್ಯಾಷನಲ್ ಸ್ಕೂಲ್ ಆಫ್‌ ಡ್ರಾಮಾದಲ್ಲಿ (National School of Drama) ನಟನೆ ಕಲಿತಿರುವ ನವಾಜುದ್ದೀನ್ ಕೆಲವು ದಿನಗಳ ಕಾಲ ಐಟಿ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. 'ಕಷ್ಟದ ದಿನಗಳು ನನಗೆ ಇನ್ನೂ ನೆನಪಿದೆ. 6ರಿಂದ 7 ಗಂಟೆಗಳ ಕಾಲ  2500 ರೂಪಾಯಿಗೆ ಕೆಲಸ ಮಾಡಿದ್ದೀನಿ. ಆಗ ಸಂಭಾವನೆ ಸಿಗುತ್ತಿರಲಿಲ್ಲ ಆದರೆ ಊಟ ಸಿಗುತ್ತಿತ್ತು. ಆದರೆ ಸಿನಿಮಾದಲ್ಲಿ ನಿರ್ಮಾಪಕರಿಂದ ಹಣ ಪಡೆದುಕೊಳ್ಳಲು ನಾನು ಊಟದ ಸಮಯಕ್ಕೆ ಸರಿಯಾಗಿ ಅವರ ಆಫೀಸ್‌ಗೆ ಹೋಗುತ್ತಿದ್ದೆ. ಅಲ್ಲಿ ಊಟ ಸಿಗುತ್ತಿತ್ತು. ಅವರು 'ಊಟ ಮಾಡ್ತೀಯಾ? ದುಡ್ಡು ಸಿಗೋಲ್ಲ ಆದರೆ ಊಟ ಸಿಗುತ್ತೆ ಊಟ ಮಾಡ್ಕೋ' ಎನ್ನುತ್ತಿದ್ದರು. ಹೀಗಾಗಿ ನಾನು ಒಂದುವರೆ ತಿಂಗಳುಗಳ ಕಾಲ ಅಲ್ಲಿ ಊಟ ಮಾಡಿ ಅವರ ಹಣವನ್ನು ಪಡೆದುಕೊಂಡೆ' ಎಂದು ನವಾಜುದ್ದೀನ್‌ ಹೇಳಿದ್ದಾರೆ.

'ಶೂಲ್‌ ಸಿನಿಮಾದಲ್ಲಿ ಮಾತ್ರವಲ್ಲದೆ 'ಸರ್ಫರೋಶ್ ನ್ಯೂಯಾರ್ಕ್', 'ಮುನ್ನಾ ಭಾಯಿ M.B.B.S' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಾನು ಅಭಿನಯಿಸಿದ್ದೀನಿ ಈ ಆದರೆ ನಾನು ಎಂದೂ ಜನರೊಂದಿಗೆ ಹೇಳಿಕೊಂಡಿಲ್ಲ ನಾನು ಇದ್ದೀನಿ ಸಿನಿಮಾ ನೋಡಿ ಹಾಗೆ ಹೀಗೆ ಅಂತ' ಎಂದು ನವಾಜುದ್ದೀನ್ ಹೇಳಿದ್ದಾರೆ.

Nawazuddin Siddiqui: ಬರೀ ನಕಲಿ, ಬಾಲಿವುಡ್ ಪಾರ್ಟಿಗಳು ಇಷ್ಟವಿಲ್ಲ ಎಂದ ನಟ

ಕಷ್ಟ ಜೀವನ ನೋಡಿರುವ ನಟ ನವಾಜುದ್ದೀನಿ ಮುಂಬೈನ (Mumbai) ವೆರ್ಸೋವದಲ್ಲಿ ಏಳಿ ಬೆಡ್‌ರೂಮ್‌, ಎರಡು ಬಹತ್ ಡೈನಿಂಗ್ ಹಾಲ್ ಇರುವ ಬಂಗಲೆಯನ್ನು ನವಾಜುದ್ದೀನ್ ಸಿದ್ದಿಖಿ ಕಟ್ಟಿಸಿದ್ದಾರೆ ಮೂರು ವರ್ಷಗಳ ಕಾಲ ಈ ಮನೆಯನ್ನು ಕಟ್ಟಿಸಿದ್ದಾರೆ ಅದಕ್ಕೆ ನವಾಬ್‌ ಎಂದು ತಂದೆಯ ಹೆಸರನ್ನಿಟ್ಟಿದ್ದಾರೆ. 

click me!