ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಅತ್ಯಾಚಾರ, ಖ್ಯಾತ ನಟ ವಿಜಯ್ ಬಾಬು ವಿರುದ್ಧ ರೇಪ್ ಕೆಸ್!

Published : Apr 26, 2022, 10:24 PM ISTUpdated : Apr 26, 2022, 10:45 PM IST
ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಅತ್ಯಾಚಾರ, ಖ್ಯಾತ ನಟ ವಿಜಯ್ ಬಾಬು ವಿರುದ್ಧ ರೇಪ್ ಕೆಸ್!

ಸಾರಾಂಶ

ನಟ, ನಿರ್ದೇಶಕ ವಿಜಯ್ ಬಾಬು ವಿರುದ್ಧ ರೇಪ್ ಕೇಸ್ ಮಲಯಾಳಂನ ಖ್ಯಾತ ನಟ ಹಾಗೂ ನಿರ್ದೇಶಕ

ಕೊಚ್ಚಿ(ಏ.26): ಮಲೆಯಾಳಂ ಮತ್ತೊಬ್ಬ ಖ್ಯಾತ ನಟನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ನಟ ಹಾಗೂ ನಿರ್ದೇಶಕ ವಿಜಯ್ ಬಾಬು ವಿರುದ್ಧ ಪ್ರಕರಣ ದಾಖಲಾಗಿದೆ.ಚಲನಚಿತ್ರದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿ ಎರನಾಕುಲಂ ಫ್ಲ್ಯಾಟ್ ಒಂದರಲ್ಲಿ ಹಲವು ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ದೂರು ದಾಖಲಾಗಿದೆ.

ಕೋಝಿಕೋಡ್ ನಿವಾಸಿ ನೀಡಿರುವ ದೂರಿನ ಆಧಾರದಲ್ಲಿ ಇದೀಗ ಎರ್ನಾಕುಲಂ ಸೌತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏಪ್ರಿಲ್ 22 ರಂದು ಯುವತಿ ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾಳೆ. ಆದರೆ ಇದುವರೆಗೂ ಪೊಲೀಸರು ವಿಜಯ್ ಬಾಬುವನ್ನು ಕರೆಸಿ ವಿಚಾರಣೆ ನಡೆಸಿಲ್ಲ. ಬದಲಾಗಿ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ಮಾಡಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ. 

ನನ್ನೊಂದಿಗೆ ಮಲಗ್ತೀರಾ ಎಂದು ನೇರವಾಗಿ ಕೇಳ್ತೀನಿ; ನಟ ವಿನಾಯಕನ್ ಹೇಳಿಕೆಗೆ ಕ್ಷಮೆಯಾಚಿಸಿದ ನವ್ಯಾ ನಾಯರ್

ವಿಜಯ್ ಬಾಬು ವಿರುದ್ಧ ಯುವತಿ ಅತ್ಯಾಚಾರ ಹಾಗೂ ದೈಹಿಕ ಹಲ್ಲೆ ದೂರು ನೀಡಿದ್ದಾರೆ. ಅತ್ಯಂತ ಗಂಭೀರ ಪ್ರಕರಣವಾಗಿದ್ದರೂ ಇದುವರೆಗೂ ನಟನನ್ನು ಪೊಲೀಸರು ಪ್ರಶ್ನೆ ಮಾಡದಿರುವುದು ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. 

ಫ್ರೈಡೇ ಫಿಲ್ಮ್ ಹೌಸ್ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿರುವ ವಿಜಯ್ ಬಾಬು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಸ್ವತಃ ವಿಜಯ್ ಬಾಬು ಕೇರಳದಲ್ಲಿ ಜನಪ್ರಿಯವಾಗಿ ನಟನಾಗಿ ಹೊರಹೊಮ್ಮಿದ್ದಾರೆ. 1983ರಲ್ಲಿ ಬಾಲ ನಟನಾಗಿ ಮಲೆಯಾಳಂ ಸಿನಿಮಾಗೆ ಎಂಟ್ರಿಕೊಟ್ಟ ವಿಜಯ್ ಬಾಬು ಸದ್ಯ ಬಾರಿ ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ.

ಪಿಲಿಪ್ಸ್ ಆ್ಯಂಡ್ ಮಂಕಿ ಪೆನ್ ಅನ್ನೋ ಚಿತ್ರ ನಿರ್ಮಿಸಿದ ವಿಜಯ್ ಬಾಬು ಕೇರಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು. ಈ ಚಿತ್ರಕ್ಕೆ ಕೇರಳ ರಾಜ್ಯ ಮಕ್ಕಳ ಅತ್ಯುತ್ತಮ ಚಿತ್ರ(ನಿರ್ಮಾಪಕ) ಪ್ರಶಸ್ತಿಯನ್ನೂ ಪಡೆದಿದ್ದಾರೆ.

ನಿಯಮ ಉಲ್ಲಂಘನೆ: ಮಲಯಾಳಂ ಬಿಗ್ ಬಾಸ್‌ ಸೆಟ್ ಸೀಲ್!

ಖಾಸಗಿ ಮಾಧ್ಯಮದ ಮೂಲಕ ವೃತ್ತಿ ಬದುಕು ಆರಂಭಿಸಿದ ವಿಜಯ್ ಬಾಬು, ಬಳಿಕ ಉದ್ಯೋಗ ತೊರೆದು ದುಬೈನಲ್ಲಿ ಉದ್ಯಮಿಯಾಗಿ ಯಶಸ್ಸುಕಂಡಿದ್ದಾರೆ. ಬಳಿಕ ಮಾಧ್ಯಮದ ಮುಖ್ಯಸ್ಥನಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ಬಳಿಕ ನಿರ್ಮಾಣ ಸಂಸ್ಥೆ ಮೂಲಕ ಪೆರುಚ್ಚಾಯಿ, ಆಡು, ಮುದ್ದುಗೌ, ಹೋಮ್ ಸೇರಿದಂತೆ ಹಲವು ಯಶಸ್ವಿ ಚಿ್ತ್ರಗಳನ್ನು ನಿರ್ಮಿಸಿದ್ದಾರೆ, ಜೊತೆಗೆ ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!