Aamir Khan: ಹೊಸ ಇನ್ನಿಂಗ್ಸ್ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಅಮೀರ್ ಖಾನ್

Published : Jul 10, 2026, 07:14 PM IST
Aamir Khan

ಸಾರಾಂಶ

ಆಮೀರ್ ಖಾನ್ ಈ ಬಾರಿ ಕೈಹಾಕಿರುವುದು ಸಣ್ಣಪುಟ್ಟ ಕಥೆಗಲ್ಲ. 2023ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ, ಉತ್ತರಾಖಂಡದ ಸಿಲ್ಕ್ಯಾರ ಸುರಂಗದಲ್ಲಿ ನಡೆದ ರೋಚಕ ರಕ್ಷಣಾ ಕಾರ್ಯಾಚರಣೆಯನ್ನೇ ಬೆಳ್ಳಿತೆರೆಯ ಮೇಲೆ ತರಲು ಅವರು ಸಜ್ಜಾಗಿದ್ದಾರೆ.

ಹನಿಮೂನ್ ಬಿಟ್ಟು ಮೈದಾನಕ್ಕಿಳಿದ ಮಿಸ್ಟರ್ ಪರ್ಫೆಕ್ಷನಿಸ್ಟ್: ಮದುವೆಯಾದ ಐದೇ ದಿನಕ್ಕೆ ಆಮೀರ್ ಕೊಟ್ಟ ‘ಬಿಗ್ ಸರ್ಪ್ರೈಸ್’ ಏನು ಗೊತ್ತಾ?

ಬಾಲಿವುಡ್‌ನ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಆಮೀರ್ ಖಾನ್ (Aamir Khan) ಸದಾ ಸುದ್ದಿಯಲ್ಲಿರುವ ನಟ. ಇತ್ತೀಚೆಗಷ್ಟೇ ಗೌರಿ ಸ್ಪ್ರಾಟ್ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವ ಮೂಲಕ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಮೀರ್ ಖಾನ್, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಸಾಮಾನ್ಯವಾಗಿ ಮದುವೆಯಾದ ಹೊಸತರಲ್ಲಿ ನಟ-ನಟಿಯರು ವಿದೇಶ ಪ್ರವಾಸ, ಹನಿಮೂನ್ ಅಂತ ಎಂಜಾಯ್ ಮಾಡೋದು ವಾಡಿಕೆ. ಆದರೆ ಆಮೀರ್ ಖಾನ್ ಯಾವಾಗಲೂ ಡಿಫ್ರೆಂಟ್.. ಅವರ ವಿಷಯಕ್ಕೆ ಬಂದರೆ ಅಲ್ಲಿ ರೂಲ್ಸ್ ಅನ್ವಯಿಸುವುದೇ ಇಲ್ಲ!

ಹೌದು, ಮದುವೆಯಾಗಿ ಕೇವಲ ಐದೇ ದಿನ ಕಳೆಯುವಷ್ಟರಲ್ಲಿ ಆಮೀರ್ ಖಾನ್ ಕಡೆಯಿಂದ ಮತ್ತೊಂದು ‘ಗುಡ್ ನ್ಯೂಸ್’ ಹೊರಬಿದ್ದಿದೆ. ಈ ಸುದ್ದಿ ಕೇಳಿದ ಅಭಿಮಾನಿಗಳು 'ಇದು ಆಮೀರ್ ಸ್ಟೈಲ್ ಅಂದ್ರೆ' ಎಂದು ಹುಬ್ಬೇರಿಸಿದ್ದಾರೆ. ಅಷ್ಟಕ್ಕೂ ಆಮೀರ್ ಕೊಟ್ಟ ಆ ಸರ್ಪ್ರೈಸ್ ಏನು ಗೊತ್ತಾ? ಅದು ಅವರ ಬಹುನಿರೀಕ್ಷಿತ ಸಿನಿಮಾದ ಅಧಿಕೃತ ಘೋಷಣೆ!

ಜಾಗತಿಕ ಮಟ್ಟದ ಸಾಹಸಗಾಥೆ: ‘ಸಿಲ್ಕ್ಯಾರ 41’

ಆಮೀರ್ ಖಾನ್ ಈ ಬಾರಿ ಕೈಹಾಕಿರುವುದು ಸಣ್ಣಪುಟ್ಟ ಕಥೆಗಲ್ಲ. 2023ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ, ಉತ್ತರಾಖಂಡದ ಸಿಲ್ಕ್ಯಾರ ಸುರಂಗದಲ್ಲಿ ನಡೆದ ರೋಚಕ ರಕ್ಷಣಾ ಕಾರ್ಯಾಚರಣೆಯನ್ನೇ ಬೆಳ್ಳಿತೆರೆಯ ಮೇಲೆ ತರಲು ಅವರು ಸಜ್ಜಾಗಿದ್ದಾರೆ. ಸುರಂಗ ಕುಸಿತದಿಂದಾಗಿ 41 ಕಾರ್ಮಿಕರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಗ, 17 ದಿನಗಳ ಕಾಲ ಇಡೀ ಭಾರತವೇ ಪ್ರಾರ್ಥನೆ ಮಾಡಿತ್ತು. ಆ 41 ಜೀವಗಳನ್ನು ಸಾವಿನ ದವಡೆಯಿಂದ ಹೊರತಂದ 'ರಿಯಲ್ ಲೈಫ್' ಸಾಹಸಗಾಥೆಯೇ ಈ ಸಿನಿಮಾದ ಕಥಾಹಂದರ.

3 ದೈತ್ಯ ಸಂಸ್ಥೆಗಳ ಜುಗಲ್‌ಬಂದಿ:

ಕೇವಲ ಭಾರತೀಯರಿಗಷ್ಟೇ ಅಲ್ಲದೆ, ಜಾಗತಿಕ ಮಟ್ಟದ ಪ್ರೇಕ್ಷಕರಿಗೂ ಈ ಕಥೆಯನ್ನು ತಲುಪಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಆಮೀರ್, ಇದಕ್ಕಾಗಿ ದೊಡ್ಡ ಪ್ಲಾನ್ ಮಾಡಿದ್ದಾರೆ. 'ಆಮಿರ್ ಖಾನ್ ಪ್ರೊಡಕ್ಷನ್ಸ್', ಆಸ್ಟ್ರೇಲಿಯಾದ 'ಮೈಂಡ್ ಬ್ಲೋಯಿಂಗ್ ಫಿಲ್ಮ್ಸ್' ಮತ್ತು ಸ್ಟಾರ್ ನಿರ್ದೇಶಕ ಕಬೀರ್ ಖಾನ್ ಅವರ 'ಕಬೀರ್ ಖಾನ್ ಫಿಲ್ಮ್ಸ್' ಜೊತೆಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ಇದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಒಂದು ಅಪರೂಪದ ಕ್ರಿಯೇಟಿವ್ ಕೊಲಬ್ರೇಷನ್ ಆಗಲಿದೆ.

ತೆರೆಯ ಮೇಲೆ ರಕ್ಷಕನ ಅಬ್ಬರ!

ಈ ಕಾರ್ಯಾಚರಣೆಯ ಹೀರೋಗಳಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಸುರಂಗ ತಜ್ಞ 'ಆರ್ನಾಲ್ಡ್ ಡಿಕ್ಸ್' ಅವರ ಪಾತ್ರ ಈ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ. ಅಸಾಧ್ಯವೆನಿಸಿದ ಜಾಗದಲ್ಲಿ ರ್ಯಾಟ್ ಹೋಲ್ ಮೈನರ್ಸ್ ಮತ್ತು ಇಂಜಿನಿಯರ್‌ಗಳ ಸಹಾಯದಿಂದ ಕಾರ್ಮಿಕರನ್ನು ಉಳಿಸಿದ ಆ ಛಲದ ಕಥೆ ಪ್ರೇಕ್ಷಕರ ಎದೆ ಬಡಿತ ಹೆಚ್ಚಿಸುವುದು ಖಂಡಿತ. ಆ ಘಟನೆ ಗೊತ್ತಿದ್ದರೂ ತೆರೆಯ ಮೇಲೆ ಅದನ್ನು ನೋಡುವಾಗಿನ ಅನುಭವವೇ ಬೇರೆ.

'ಭಜರಂಗಿ ಭಾಯಿಜಾನ್', '83' ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಕಬೀರ್ ಖಾನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ. ಇನ್ನು ಚಿತ್ರಕ್ಕೆ ಕಥೆ ಬರೆಯುತ್ತಿರುವುದು 'ದಿ ವಾಟರ್ ಡಿವೈನರ್' ಖ್ಯಾತಿಯ ಆಂಡ್ರ್ಯೂ ಅನಸ್ತಾಸಿಯಸ್.

ಆಮೀರ್ ನಟಿಸ್ತಾರಾ ಇಲ್ವಾ?

ಸದ್ಯಕ್ಕೆ ಅಭಿಮಾನಿಗಳನ್ನು ಕಾಡುತ್ತಿರುವ ಏಕೈಕ ಪ್ರಶ್ನೆಯೆಂದರೆ, ಈ ಸಿನಿಮಾದಲ್ಲಿ ಆಮೀರ್ ಖಾನ್ ಅಭಿನಯಿಸುತ್ತಾರಾ ಅಥವಾ ಬರೀ ನಿರ್ಮಾಣಕ್ಕೆ ಸೀಮಿತವಾಗುತ್ತಾರಾ? ಅನ್ನೋದು. ಸದ್ಯಕ್ಕೆ ಚಿತ್ರತಂಡ ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಆಮೀರ್ ಖಾನ್ ಈ ಚಿತ್ರದಲ್ಲಿ ನಟಿಸಿದರೆ, ಅದು ಅವರ ಕೆರಿಯರ್‌ನ ಮತ್ತೊಂದು ಮೈಲಿಗಲ್ಲು ಆಗುವುದರಲ್ಲಿ ಸಂಶಯವಿಲ್ಲ.

ಒಟ್ಟಿನಲ್ಲಿ, ಮದುವೆಯ ಸಂಭ್ರಮದಲ್ಲೂ ಸಿನಿಮಾದ ಮೇಲಿರುವ ತಮ್ಮ ಪ್ರೀತಿಯನ್ನು ತೋರಿರುವ ಆಮೀರ್, ಮತ್ತೊಮ್ಮೆ ಸಿನಿಮಾ ಪ್ರೇಮಿಗಳ ಮನ ಗೆದ್ದಿದ್ದಾರೆ. ಅಂದಹಾಗೆ, ಈ 'ಸಿಲ್ಕ್ಯಾರ 41' (Silkyara 41) ಸಿನಿಮಾದ ಅಪ್‌ಡೇಟ್ ಕೇಳಿ ಭಾರತ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಬಹುಭಾಗ ಖುಷಿಯಲ್ಲಿ ತೇಲಾಡುತ್ತಿದೆ ಎನ್ನಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Chezhiyan: ಭಾರತೀರಾಜ, ಭಾಗ್ಯರಾಜ್ ಬಳಿಕ ತಮಿಳು ಚಿತ್ರರಂಗಕ್ಕೆ ಮತ್ತೊಂದು ಆಘಾತ: ಖ್ಯಾತ ನಿರ್ದೇಶಕ ಇನ್ನಿಲ್ಲ
'This Fool, This Idiot...': ಇಂಗ್ಲಿಷ್‌ನಲ್ಲಿ ಬಾಲಯ್ಯಗೆ ಬೈದ ಸಿಲ್ಕ್ ಸ್ಮಿತಾ: ನಂತರ ಏನಾಯ್ತು?