ಮದುವೆ ಬಳಿಕ ಬದಲಾದ್ರಾ ರಶ್ಮಿಕಾ..? ಅದಕ್ಕೆ 'ಸಾಕ್ಷಿ' ಕೂಡ ಸಿಕ್ಕೇ ಬಿಡ್ತು ಅಂತಿದಾರೆ ನೆಟ್ಟಿಗರು; ಅದ್ಯಾವುದು..?!

Published : Jul 10, 2026, 05:00 PM IST
Rashmika Mandanna

ಸಾರಾಂಶ

ರಶ್ಮಿಕಾ ಮಂದಣ್ಣ ಮದುವೆ ಬಳಿಕ ಸೊಸೆಯಾಗಿ ಸಂಸಾರ ಸಾಗಿಸೋ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ಅದರ ಮಧ್ಯೆದಲ್ಲಿ ಸಿನಿಮಾ ಜಗತ್ತಿನ ನಂಟು ಬಿಡದ ಲಿಲ್ಲಿ ತನ್ನ ಸಿನಿಮಾ ಪಾತ್ರಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಮಾಡಿಕೊಂಡಿದ್ದಾರೆ. ಈ ಸ್ಟೋರಿನಲ್ಲಿ ಸಾಕ್ಷಿ ಇದೆ ನೋಡಿ..

ಶ್ರೀವಲ್ಲಿ ರಶ್ಮಿಕಾ ಮಂದಣ್ಣ 'ಕಲ್ಯಾಣವಂತೆ' ಆದ್ಮೇಲೆ ಸಿನಿಮಾ ಪಾತ್ರಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚೂಸಿ ಆಗಿದ್ದಾರಂತೆ. ರಶ್ಮಿಕಾ (Rashmika Mandanna) ಮದುವೆಗೂ ಮೊದಲು ಆಯ್ಕೆ ಮಾಡಿಕೊಳ್ಳುತ್ತಿದ್ದ ಗಂಡುಬೀರಿ ರೋಲ್​ಗಳಿಂದ ಈಗ ಸ್ವಲ್ಪ ಅಂತರ ಇಟ್ಕೊಂಡಿದ್ದಾರಂತೆ. ಮಹಿಳಾ ಪ್ರಧಾನ ಸಿನಿಮಾಗಳನ್ನೇ ಹೆಚ್ಚು ಆಯ್ಕೆ ಮಾಡುತ್ತಿದ್ದಾರಂತೆ ವಿಜಯ್ ದೇವರಕೊಂಡ ಪತ್ನಿ.. ಇದೀಗ ಈ ತೆಲುಗು ಸೊಸೆ ಮೈಸಾದಲ್ಲಿ ವಾರಿಯರ್​ ಆಗಿದ್ದು, ಲಿಲ್ಲಿ ಲುಕ್ಕು ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ..

ಮದುವೆ ಬಳಿಕ ಬದಲಾಯ್ತು ರಶ್ಮಿಕಾ ಸಿನಿಮಾ ಆಯ್ಕೆ..! ಮಹಿಳಾ ಪ್ರಧಾನ ಸಿನಿಮಾಗಳೇ ಬೇಕೆನ್ನುತ್ತಾರಂತೆ ಲಿಲ್ಲಿ!

ಮರ ಸುತ್ತೋ ಬೋಲ್ಡ್ ಅವತಾರದಿಂದ ದೂರ ಹೋದಾ ಶ್ರೀವಲ್ಲಿ!

ರಶ್ಮಿಕಾ ಮಂದಣ್ಣ.. ತಮ್ಮ ಸಹಜ ಸೌಂದರ್ಯ, ಸಹಜ ನಟನೆಯ ಜೊತೆಗೆ ಕೆಲವು ಸಿನಿಮಾದ ಸತತ ಯಶಸ್ಸಿನ ಮೂಲಕ 'ನ್ಯಾಷನಲ್ ಕ್ರಶ್' ಆಗಿರುವ ನಟಿ. ತೆಲುಗು ಹೀರೋ ಜೊತೆ ಯಾರ ಹಂಗಿಲ್ಲದೇ ಸುತ್ತಾಡಿ, ಹಿಂದಿಯಲ್ಲಿ ಹೆಸರು ಮಾಡಿ ಕೊನೆಗೆ ಮದುವೆ ಆದ ರಶ್ಮಿಕಾ ಈಗ ಸಿನಿಮಾಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚೂಸಿ ಆಗಿದ್ದಾರೆ.

ಹೌದು, ರಶ್ಮಿಕಾ ಮಂದಣ್ಣ ಮದುವೆ ಬಳಿಕ ಸೊಸೆಯಾಗಿ ಸಂಸಾರ ಸಾಗಿಸೋ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ಅದರ ಮಧ್ಯೆದಲ್ಲಿ ಸಿನಿಮಾ ಜಗತ್ತಿನ ನಂಟು ಬಿಡದ ಲಿಲ್ಲಿ ತನ್ನ ಸಿನಿಮಾ ಪಾತ್ರಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಮಾಡಿಕೊಂಡಿದ್ದಾರೆ. ಮರ ಸುತ್ತೋ ರೋಲ್, ಹಾಟ್​ಆಗಿ ಬಿಚ್ಚಮ್ಮನಾಗಿ ಕಾಣಿಸಿಕೊಳ್ಳೋ ಪಾತ್ರಗಳಾವವೂ ಈಗ ರಶ್ಮಿಕಾ ಅಕ್ಕಪಕ್ಕನೂ ಸುಳಿಬಾರದಂತೆ. ಏನಿದ್ರು, ವಾರಿಯರ್​ರೋಲ್, ನಾಯಕಿ ಪ್ರಧಾನ ಪಾತ್ರ, ಹೋಮ್ಲಿ ಆಗಿರೋ ಕ್ಯಾರೆಕ್ಟರ್ ಮಾತ್ರ ಲಿಲ್ಲಿಯ ಮೊದಲ ಆಯ್ಕೆ ಆಗಿದೆ. .

ಮೈಸಾದಲ್ಲಿ ವಾರಿಯರ್​ರಶ್ಮಿಕಾ.. ನೋಡಿದ್ರೆ ಥ್ರಿಲ್ ಆಗ್ತೀರಾ!

ಹೌದು, ರಶ್ಮಿಕಾ ಮಂದಣ್ಣ ರಿಯಲ್ ಲೈಫ್ ನಲ್ಲೂ ವಾರಿಯರ್.. ಕಿರಿಕ್ ಪಾರ್ಟಿ ಸಿನಿಮಾ ಮಾಡಿ ಸಿನಿಮಾ ಜಗತ್ತಲ್ಲಿ ವಾರಿಯರ್ ರೀತಿಯೇ ಹೋರಾಡಿ ಗೆದ್ದು ಸೂಪರ್ ಸ್ಟಾರ್ ನಟಿ ಅನ್ನೋ ಗದ್ದುಗೆ ಏರಿರುವ ನಟಿ.. ಅಷ್ಟೆ ಅಲ್ಲ, ನಿಜ ಜೀವನದಲ್ಲೂ ರಶ್ಮಿಕಾ ಬೇಡದ ವಿವಾದಗಳನ್ನ ಮೈಮೇಲೆ ಎಳೆದುಕೊಂಡು ಅದರ ಬಗ್ಗೆ ಕೊಂಚವೂ ತಲೆ ಕೆಡಿಸಿಕೊಳ್ಳದೇ ಇದ್ದ ಗಟ್ಟಿಗಿತ್ತಿ.. ಇದೀಗ ರಶ್ಮಿಕಾ ಮದುವೆ ಬಳಿಕ ಪಾತ್ರಗಳ ಆಯ್ಕೆ ಬದಲಾಗ್ತಿದ್ದಂತೆ ಮೈಸಾ ಸಿನಿಮಾದಲ್ಲಿ ವಾರಿಯರ್​ರೋಲ್ ಮಾಡುತ್ತಿದ್ದಾರೆ.

'ಮೈಸಾ' ಪೋಸ್ಟರ್ ನಲ್ಲಿ ಗಾಢ ಕೆಂಪು ಸೀರೆ ತೊಟ್ಟಿರುವ ರಶ್ಮಿಕಾ, ಕೈಯಲ್ಲಿ ಆಯುಧ ಹಿಡಿದು, ಮುಖಕ್ಕೆ ರಕ್ತ ಮೆತ್ತಿಕೊಂಡು ದುರ್ಗೆಯ ರೀತಿ ಕಾಣುತ್ತಿದ್ದಾರೆ. ಅನುಷ್ಕಾ ಶೆಟ್ಟಿ ನಟಿಸಿದ್ದ 'ಅರುಂಧತಿ' ಸಿನಿಮಾದ ಪೋಸ್ಟರ್ ಹೀಗೆಯೇ ಇತ್ತು. ಇದೀಗ 'ಮೈಸಾ' ಸಹ 'ಅರುಂಧತಿ' ಫ್ಲೇವರ್ ಸಿನಿಮಾ ಎನ್ನಲಾಗುತ್ತಿದೆ. 'ಅರುಂಧತಿ' ಸಿನಿಮಾದ ಬಳಿಕ ಅನುಷ್ಕಾ ಶೆಟ್ಟಿ, ತೆಲುಗು ಸಿನಿಮಾ ಪ್ರೇಮಿಗಳ ಮನಗಳಲ್ಲಿ ಶಾಶ್ವತವಾಗಿ ನೆಲೆಸಿಬಿಟ್ಟರು, ಈಗ ರಶ್ಮಿಕಾ ಸಹ ಅದಕ್ಕೇ ಗುರಿ ಇಟ್ಟಂತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರೀತಿಸಿದ್ಮೇಲೆ ಹುಡುಗಿಯ ಲೈ* ಂಗಿಕ ವಿಷಯ ಗೊತ್ತಾಯ್ತು; ಬಿಡದೆ ಮದುವೆಯಾದ No 1 ಸೀರಿಯಲ್‌ ಹೀರೋ!
Rocking Star: ರೊಮ್ಯಾಂಟಿಕ್ ಸ್ಟಾರ್ ಆದ ರಾಕಿಂಗ್ ಸ್ಟಾರ್.. ಯಶ್‌ ಸಲುವಾಗಿ ಕಿತ್ತಾಡುತ್ತಿದೆ ಸೋಷಿಯಲ್ ಮೀಡಿಯಾ!