
ಲಂಡನ್(ಆ.11): ಬಾಲಿವುಡ್ ಸಿನಿಮಾ ಲಾಲ್ ಸಿಂಗ್ ಚಡ್ಡಾ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಅಮಿರ್ ಖಾನ್ ಅಭಿಯನದ ಈ ಸಿನಿಮಾ ಬಹಿಷ್ಕರಿಸಲು ಹಲವರು ಅಭಿಯಾನ ಆರಂಭಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮೊದಲೇ ಲಾಲ್ ಸಿಂಗ್ ಚಡ್ಡಾ ಬಹಿಷ್ಕಾರದ ಬೆಂಕಿಗೆ ತುತ್ತಾಗಿತ್ತು. ಬಿಡುಗಡೆ ಬಳಿಕ ಸಿನಿಮಾದಲ್ಲಿ ಹಲವರಿಗೆ ಅವಮಾನಗಳಾಗಿದೆ ಎಂಬ ಕೂಗು ಕೇಳಿಬರುತ್ತಿದೆ. ಹೀಗಾಗಿ ಸಿನಿಮಾ ಬಹಿಷ್ಕರಿಸಲು ಹಲವರು ಕರೆ ನೀಡಿದ್ದಾರೆ. ಇದೀಗ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮಾಂಟಿ ಪನೇಸರ್, ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಹಿಷ್ಕರಿಸಲು ಕರೆ ನೀಡಿದ್ದಾರೆ. ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಬಾಲಿವುಡ್ ಸಿನಿಮಾದಲ್ಲಿ ಸಿಖ್ ಸಮುದಾಯಕ್ಕೆ ಹಾಗೂ ಭಾರತೀಯ ಸೇನೆಗೆ ಅವಮಾನ ಮಾಡಲಾಗಿದೆ. ಇದು ಅಕ್ಷ್ಯಮ ಅಪರಾಧ ಎಂದು ಮಾಂಟಿ ಪನೇಸರ್ ಹೇಳಿದ್ದರೆ. ಭಾರತೀಯ ಸೇನೆ ಹಾಗೂ ಸಿಖ್ ಸಮುದಾಯವನ್ನು ಅವಮಾನಿಸುವ ಚಿತ್ರವನ್ನು ಬಹಿಷ್ಕರಿಸಿ ಎಂದು ಟ್ವೀಟ್ ಮೂಲಕ ಮಾಂಟಿ ಪನೆಸರ್ ಮನವಿ ಮಾಡಿದ್ದಾರೆ.
ಕಡಿಮೆ ಜ್ಞಾನವಿರುವ ಅಥವಾ ಐಕ್ಯೂ ಹೊಂದಿರುವ ವ್ಯಕ್ತಿ ಭಾರತೀಯ ಸೇನೆಗೆ ಸೇರುವ ರೀತಿ ಚಿತ್ರಿಸಲಾಗಿದೆ. ವಿಯೆಟ್ನಾಂ ಯುದ್ಧದ ಅವಶ್ಯಕತೆಗಳನ್ನು ಪೂರೈಸಲು ಅಮೆರಿಕ ಅತೀ ಕಡಿಮೆ ಬುದ್ದಿಯುಳ್ಳ ಪುರುಷರನ್ನು ಸೇನೆಗೆ ನೇಮಿಸಿಕೊಳ್ಳುತ್ತಿತ್ತು. ಇದು ಭಾರತೀಯ ಸೇನೆಗೆ ಅನ್ವಯಿಸುವುದಿಲ್ಲ. ಆದರೆ ಚಿತ್ರದಲ್ಲಿ ಸಿಖ್ ಸಮುದಾಯದ ವ್ಯಕ್ತಿಯನ್ನು ಬುದ್ದಿ ಕಡಿಮೆ ಇರುವ ಅಥವಾ ಇಲ್ಲದೇ ಇರುವ ರೀತಿ ಚಿತ್ರಿಸಲಾಗಿದೆ. ಈ ವ್ಯಕ್ತಿ ಭಾರತೀಯ ಸೇನೆಗೆ ಸೇರಿಕೊಳ್ಳುವ ರೀತಿ ಚಿತ್ರಿಸಲಾಗಿದೆ. ಇದು ಭಾರತೀಯ ಸೇನೆ ಹಾಗೂ ಸಿಖ್ ಸಮುದಾಯವನ್ನು ಅವಮಾನಿಸುವ ರೀತಿ ಇದೆ ಎಂದು ಮಾಂಡಿ ಪನೇಸರ್ ಹೇಳಿದ್ದಾರೆ.
ಲಾಲ್ ಸಿಂಗ್ ಚಡ್ಡಾ ಬಹಿಷ್ಕರಿಸಿ: ಆಮೀರ್ ಚಿತ್ರದ ವಿರುದ್ಧ ಕಂಗನಾ ಕಿಡಿ
ಮಾಂಟಿ ಪನೇಸರ್ ಭಾರತೀಯ ಮೂಲದ ಇಂಗ್ಲೆಂಡ್ ಕ್ರಿಕೆಟಿಗ. 2006 ರಿಂದ 2013ರ ವರೆಗೆ ಇಂಗ್ಲೆಂಡ್ ಪರ ಆಡಿದ ಸಿಖ್. ಮಾಂಟಿ ಪನೇಸರ್ ಇಂಗ್ಲೆಂಡ್‌ನಲ್ಲೇ ಹುಟ್ಟಿ ಬೆಳೆದಿದ್ದಾರೆ. ಆದರೆ ಮಾಂಟಿ ಪನೇಸರ್ ಮೂಲ ಭಾರತದ ಪಂಜಾಬ್. ಇದೀಗ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮಾಂಟಿ ಪನೇಸರ್ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಈ ರೀತಿಯ ಚಿತ್ರಕ್ಕೆ ಅನುಮತಿ ನೀಡಬಾರದು. ಆದರೆ ಈಗಾಗಲೇ ಚಿತ್ರ ಬಿಡುಗಡೆಯಾಗಿದೆ. ಹೀಗಾಗಿ ಚಿತ್ರ ಬಹಿಷ್ಕರಿಸಿ ಎಂದು ಮಾಂಟಿ ಪನೇಸರ್ ಹೇಳಿದ್ದಾರೆ.
ಬಾಯ್ಕಾಟ್ ಅಭಿಯಾನಕ್ಕೆ ಅಮೀರ್ ಬೇಸರ
ಬಾಲಿವುಡ್ ನಟ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರ ಬಿಡುಗಡೆಯಾಗುವ ಕೆಲ ದಿನಗಳ ಮುನ್ನ ಟ್ವೀಟರ್‌ನಲ್ಲಿ ಬಾಯ್ಕಾಟ್ ಲಾಲ್‌ಸಿಂಗ್ ಚಡ್ಢಾ ಅಭಿಯಾನ ಮತ್ತೆ ಆರಂಭವಾಗಿತ್ತು. ಈ ಬಗ್ಗೆ ಅಮೀರ್ ಬೇಸರ ವ್ಯಕ್ತಪಡಿಸಿದ್ದು ‘ಹಲವರು ನಾನು ಭಾರತವನ್ನು ಇಷ್ಟಪಡುವುದಿಲ್ಲ ಎಂದು ಕೊಂಡಿದ್ದಾರೆ. ಆದರೆ ಇದು ನಿಜವಲ್ಲ. ಜನರು ಈ ರೀತಿ ಯೋಚಿಸುತ್ತಿರುವುದು ದುರದೃಷ್ಟಕರ’ ಎಂದು ಹೇಳಿದ್ದಾರೆ. ಅಲ್ಲದೇ, ‘ಚಿತ್ರವನ್ನು ಬಾಯ್ಕಾಟ್ ಮಾಡದೇ ವೀಕ್ಷಿಸಿ’ ಎಂದು ತಮ್ಮ ಎಲ್ಲ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
Laal Singh Chaddha: ತಮ್ಮದೇ ಹೇಳಿಕೆಯಿಂದ ಮತ್ತೆ ವಿವಾದಲ್ಲಿ ಸಿಲುಕಿದ ಅಮೀರ್ ಖಾನ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.