ಬಿ-ಟೌನ್‌ ಮಾದಕ ದಂಧೆಯ ಕರಾಳ ಸತ್ಯ ಬಿಚ್ಚಿಟ್ಟ ನಟಿ ಕಂಗನಾ ರಣಾವತ್!

By Suvarna News  |  First Published Aug 28, 2020, 11:36 AM IST

ಬಾಲಿವುಡ್‌ನಲ್ಲಿ ನಡೆಯುತ್ತಿರುವ ಡ್ರಗ್ಸ್‌ ಮಾಫಿಯಾ ಬಗ್ಗೆ ಸತ್ಯ ತೆರೆದಿಟ್ಟ ಬೋಲ್ಡ್ ನಟಿ ಕಂಗನಾ. ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಾಗ ಡ್ರಗ್ಸ್‌ ಸೇವಿಸಲೇ ಬೇಕಾ? ವ್ಯಭಿಚಾರಕ್ಕೆ ಒಪ್ಪಲೇ ಬೇಕಾ?
 


ಬ್ಯಾಕ್‌ ಟು ಬ್ಯಾಕ್‌ ಟ್ಟೀಟ್‌ ಹಾಗೂ ಟಿವಿ ಸಂದರ್ಶನದಲ್ಲಿ ನೀಡುವ ಹಲವು ಹೇಳಿಕೆಗಳ ಮೂಲಕ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸುತ್ತಿರುವ ನಟಿ ಕಂಗನಾ ಡ್ರಗ್ಸ್ ಮಾಫಿಯಾ ಬಗ್ಗೆಯೂ ಯಾರಿಗೂ ತಿಳಿಯದ ಸತ್ಯ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಸಿನಿಮಾ ವೃತ್ತಿ ಪ್ರಾರಂಭದಲ್ಲಿಯೂ ಕಂಗನಾಗೂ ಡ್ರಗ್ಸೆ ಸೇವಿಸಲು ಹಾಗೂ ವ್ಯಭಿಚಾರ ನಡೆಸುವಂತೆ ಒತ್ತಡ ಇತ್ತೋ, ಇಲ್ಲವೋ ಎಂಬ ಸತ್ಯ ಬಿಚ್ಚಿಟ್ಟಿದ್ದಾರೆ.

ನರೇಂದ್ರ ಮೋದಿಗೆ ಹೊಸ ಹೆಸರು ಕೊಟ್ಟ ಕಂಗನಾ

ಡ್ರಗ್ಸ್‌ ಬಗ್ಗೆ ಟ್ಟೀಟ್‌:
'ಮಾದಕ ದ್ರವ್ಯ ನಿಯಂತ್ರಣ ದಳ (Narcotics Control Bureau) ಒಮ್ಮೆ ಬಾಲಿವುಡ್‌ ಗಣ್ಯರನ್ನು (ಟಾಪ್‌ ಸೆಲೆಬ್ರಿಟಿಗಳು) ತನಿಖೆ ಮಾಡಿದರೆ, ಅವರೆಲ್ಲರೂ ಕಂಬಿ ಹಿಂದೆ ಇರುತ್ತಾರೆ. ರಕ್ತ ಪರೀಕ್ಷೆ ನಡೆಸಿದರೆ ಕರಾಳ ಸತ್ಯಗಳು ಬಹಿರಂಗವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಲ್ಲಿ ನಮ್ಮ ಬಾಲಿವುಡ್‌ ಕೊಳಕು ಸ್ವಚ್ಛವಾಗುತ್ತದೆ ಎಂದು ಕೊಂಡಿದ್ದೀನಿ,' ಎಂದು ಮೊದಲು ಟ್ಟೀಟ್ ಮಾಡಿದ್ದಾರೆ.

Tap to resize

Latest Videos

 

If narcotics Control Bureau enters Bullywood, many A listers will be behind bars, if blood tests are conducted many shocking revelations will happen. Hope under swatchh Bharat mission cleanses the gutter called Bullywood.

— Kangana Ranaut (@KanganaTeam)

ಆ ನಂತರ ಕೆಲವೇ ಕ್ಷಣದಲ್ಲಿ ಮತ್ತೊಂದು ಟ್ಟೀಟ್‌ ಬಾಂಬ್ ಹಾಕಿದ್ದು ವೈರಲ್ ಆಗಿದೆ. 'ನಾನು ತುಂಬಾ ಚಿಕ್ಕವಳಾಗಿದ್ದಾಗ ಡ್ರಗ್ಸ್‌ ಮಾಫಿಯಾಗಿ ಒಳಗಾಗಿದ್ದೆ. ಆ ಸಮಯದಲ್ಲಿ ನನಗೆ ಈ ಬಗ್ಗೆ ಏನೂ ಗೊತ್ತಿರಲಿಲ್ಲ. ನನ್ನ ಮಾರ್ಗದರ್ಶಕರು ನನಗೆ ಹಿಂಸೆ ನೀಡಲು ಆರಂಭಿಸಿದ್ದರು. ನಾನು ಪೊಲೀಸರಿಗೆ ತಿಳಿಸದಂತೆ ನನ್ನ ಡ್ರಿಂಕ್‌ಗೆ ಮಾತ್ರೆ ಹಾಕಿ ನನ್ನನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದರು. ನಾನು ಚಿತ್ರರಂಗದಲ್ಲಿ ಯಶಸ್ವಿಯಾದಾಗ ಅನೇಕ ಸಿನಿಮಾ ಪಾರ್ಟಿಗಳಿಗೆ ಹೋಗ ಬೇಕಾಯ್ತು. ಅಲ್ಲಿ ನಡೆಯುತ್ತಿದ್ದ ಘಟನೆಗಳು ನನಗೆ ತುಂಬಾ ಶಾಕ್‌ ತಂದು ಕೊಟ್ಟಿತು. ಎಲ್ಲವೂ ಬರೀ ಡ್ರಗ್ಸ್‌, ಮಾಫಿಯಾ ಹಾಗೂ ವ್ಯಭಿಚಾರ.' ಎಂದು ಹೇಳಿದ್ದಾರೆ.

 

I was still a minor my mentor turned tormentor used to spike my drinks and sedate me to prevent me from going to cops, when I became successful and got entry in to the most famous film parties I was exposed to the most shocking and sinister world and drugs,debauchery and mafia.

— Kangana Ranaut (@KanganaTeam)

ಬಾಲಿವುಡ್‌ನಲ್ಲಿ ಅತಿ ಹೆಚ್ಚಾಗಿ ಸಪ್ಲೈ ಮಾಡಲಾಗುವ ಡ್ರಗ್ಸ್‌ ಅಂದ್ರೆ ಕೋಕೆನ್‌, ಎಲ್ಲಾ ಸಿರಿವಂತ ನಟ-ನಟಿಯರ ಹೌಸ್‌ ಪಾರ್ಟಿಯಲ್ಲಿ ಇದು ಇರುತ್ತದೆ. ನೀವು ಮೊದಲ ಬಾರಿ ಪಾರ್ಟಿಗೆ ಹೋದರೆ ನೀರಿನಲ್ಲಿ ಎಂಡಿಎಂಎ ಪೌಡರ್‌ನನ್ನು ಮಿಕ್ಸ್‌ ಮಾಡಿ ಕೊಡುತ್ತಾರೆ. ನಿಮಗೇ ತಿಳಿಯದೇ ಮೈ ಮರೆಯುವಿರಿ ಎಂದು ಬಿ-ಟೌನ್‌ನಲ್ಲಿ ನಡೆಯುವ  ಡ್ರಗ್ಸ್‌ ಮಾಫಿಯಾ ಬಗ್ಗೆ ಸತ್ಯ ತೆರೆದಿಟ್ಟಿದ್ದಾರೆ.

 

Most popular drug in the film industry is cocaine, it is used in almost all house parties it’s very expensive but in the beginning when you go to the houses of high and mighty it’s given free, MDMA crystals are mixed in water and at times passed on to you without your knowledge.

— Kangana Ranaut (@KanganaTeam)

ಡ್ರಗ್ಸ್‌ ಬೇಡ ನಿಂಬು ಪಾನಿ ಸೇವಿಸಿ:
'ಡ್ರಗ್ಸ್‌ ಸೇವಿಸುವಾಗ ಅದು ನಿಮ್ಮನ್ನು ಮತ್ತೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಆದರೆ ನಿಮಗೆ ತಿಳಿಯದ ಹಾಗೆ ನಿಮ್ಮನ್ನು ಕುಗ್ಗಿಸಿ ಡಿಪ್ರೆಶನ್‌ಗೆ ಒಳಗಾಗುವಂತೆ ಮಾಡುತ್ತದೆ. ನಮ್ಮ ಭೂಮಿ ಆರೋಗ್ಯಕ್ಕೆ ಉತ್ತಮವಾದದನ್ನು ನೀಡುತ್ತದೆ, ಅದನ್ನು ಸೇವಿಸಿ. ಒಂದು ಸಲ ಕಲ್ಪನೆ ಮಾಡಿಕೊಳ್ಳಿ ಫ್ರೆಶ್‌ ಕಬ್ಬಿನ ರಸಕ್ಕೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸ ಸೇರಿಸಿದರೆ ಹೇಗಿರುತ್ತದೆ' ಎಂದು ಹೇಳುತ್ತಾ ಸೆಲ್ಫಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

 

Drugs might take you high for sometime but inevitably it throws you down in to the depths of depression, consume things that only take you up never down,earth has so much to offer,look at this freshly squeezed chilled sugarcane juice with a pinch of pink salt and lemon juice 🙂 pic.twitter.com/DMdBOzSU4h

— Kangana Ranaut (@KanganaTeam)

ಒಟ್ಟಿನಲ್ಲಿ ಸುಶಾಂತ್ ಸಿಂಗ್ ಎಂಬ ಪ್ರತಿಭಾನ್ವಿತ ನಟನ ಆತ್ಮಹತ್ಯೆ ಪ್ರಕರಣ ಬಾಲಿವುಡ್‌ನಲ್ಲಿ ನಡೆಯುತ್ತಿರುವ ಹಲವು ದಂಧೆಗಳು ಹಾಗೂ ಅನೇಕ ಕರಾಳ ಮುಖಗಳನ್ನು ಬಹಿರಂಗಗೊಳಿಸುತ್ತಿದೆ. ಮೊದ ಮೊದಲು ಹೊರಗಿನವರು, ಒಳಿಗಿನವರು, ಬಾಲಿವುಡ್ ಮಾಫಿಯಾ, ಕುಟುಂಬ ರಾಜಕಾರಣದ ಕೂಗಿಗೆ ಸೀಮಿತವಾಗಿದ್ದ ಚರ್ಚೆಗಳು ಇದೀಗ ಬಾಲಿವುಡ್‌ನಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಬಂತು ನಿಂತಿದೆ. ಇದು ಇಲ್ಲಿಗೇ ನಿಲ್ಲುವ ಸೂಚನೆಯೂ ಇಲ್ಲ. ಈಗಾಗಲೇ ಈ ಡ್ರಗ್ಸ್ ದಂಧೆಯೊಟ್ಟಿಗೆ ನಮ್ಮ ಸ್ಯಾಂಡಲ್‌ವುಡ್‌ಗೂ ಲಿಂಕ್ ಇದೆ ಎಂಬ ಸುಳಿವು ಸಿಕ್ಕಿದ್ದು, ಈ ಸಂಬಂಧ ಆಗಲೇ ಬೆಂಗಳೂರು ಸಿಸಿಬಿ ಹಲವರನ್ನು ಬಂಧಿಸಿ, ಕೆಜಿಗಟ್ಟಲೆ ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದೆ. 

ಸದಾ ಬೋಲ್ಡ್ ಹೇಳಿಕೆ ನೀಡಿ ಸುದ್ದಿಯಲ್ಲಿರೋ ಕಂಗನಾಳ ಹಾಟ್ ಲುಕ್!

#MeToo ವಿರುದ್ಧ ಕೆಲವು ನಟಿಯರು ಧ್ವನಿ ಎತ್ತಿದಾಗ, ಹಲವರು ಈ ಬಗ್ಗೆಯೂ ಮಾತನಾಡಲು ಧೈರ್ಯ ತೋರಿದ್ದರು. ಆದರೆ, ದಿಗ್ಗಜರು ನಡೆದುಕೊಳ್ಳುವ ಈ ಕೊಳಕು ನಡೆ ವಿರುದ್ಧ ಧ್ವನಿ ಎತ್ತಿದವರಿಗೆ ನ್ಯಾಯ ಸಿಗುವುದು ಕಷ್ಟ. ಇದೀಗ ಮತ್ತೊಂದು ಕರಾಳ ಮುಖ ಬಹಿರರಂಗಗೊಳ್ಳುತ್ತಿದ್ದು, ಇದು ಎಲ್ಲೀವರೆಗೆ ಬಂದು ನಿಲ್ಲುತ್ತದೋ ಕಾದು ನೋಡಬೇಕು. 

'ಇಲಿಗಳು ಬಿಲ ಬಿಟ್ಟು ಹೊರ ಬರ್ತಿವೆ'  ಕಂಗನಾ ಕೊಟ್ಟ ಠಕ್ಕರ್‌ಗೆ ಮಾಫಿಯಾ ಗಪ್ ಚುಪ್!

ಒಟ್ಟಿನಲ್ಲಿ ಹಲವು ಕ್ಷೇತ್ರಗಳಲ್ಲಿ ಅದರಲ್ಲಿಯೂ ಸಿನಿ ಕ್ಷೇತ್ರದಲ್ಲಿ ಹೆಸರು ಮಾಡಬೇಕಾದರೆ ವ್ಯಭಿಚಾರ ನಡೆಸುವುದು ಅನಿವಾರ್ಯ ಎಂಬ ಶ್ರೀಸಾಮಾನ್ಯನ ಮಾತು ಇದೀಗ ಸತ್ಯ ಎನಿಸುತ್ತಿದೆ. ಎಷ್ಟೇ ಸೌಂದರ್ಯ ಹಾಗೂ ಪ್ರತಿಭೆ ಇದ್ದರೂ, ಕೆಲವು ವಿಷಯಗಳಿಗೆ ಕಾಂಪ್ರೋಮೈಸ್ ಆಗದೇ ಹೋದರೆ, ಯಶಸ್ಸು ಕನಸಿನ ಗಂಟೇ ಆಗುತ್ತದೆ ಎಂಬ ಸತ್ಯವನ್ನು ಈಗಾಗಲೇ ಕೆಲವೇ ಕೆಲವರು  ಹೇಳುವ ಧೈರ್ಯ ತೋರಿದ್ದಾರೆ. ಕಂಗನಾನಂತವರು ಯಾರಾದರೂ ಒಬ್ಬರು ಬಾಯಿ ಬಿಟ್ಟರೆ, ಮತ್ತೊಂದಿಷ್ಟು ಮಂದಿ ತಮಗಾದ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಾರೆ. ಆದರೆ, ಅದು ಮುಟ್ಟಬೇಕಾದ ಗುರಿ ಮುಟ್ಟುವುದಿಲ್ಲ ಎನ್ನುವುದು ಮಾತ್ರ ದುರಂತ.

click me!