
ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ದಳಪತಿ ನಿವಾಸದ ಮೇಲೆ ಒಂದೇ ವರ್ಷದಲ್ಲಿ ಎರಡು ಸಲ ಐಟಿ ದಾಳಿ ನಡೆದಿದೆ. ಇದಕ್ಕೆಲ್ಲ ಕಾರಣ 'ಬಿಗಿಲ್' ಹಾಗೂ 'ಮಾಸ್ಟರ್' ಚಿತ್ರದ ಸಂಭಾವನೆನಾ?
ಐಟಿ ತನಿಖೆ ನಡೆದ ನಂತರ ಇಲಾಖೆ ಸಿಬ್ಬಂದಿಗಳು ವಿಜಯ್ ದಳಪತಿ ಸಂಭಾವನೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವಿಚಾರ ಯಾರಿಗೂ ತಿಳಿದಿರಲಿಲ್ಲ ಆದರೆ ಹಿರಿಯ ನಟಿ ಖುಷ್ಬೂ ಬಹಿರಂಗ ಪಡಿಸಿದ್ದಾರೆ.
'ತನಿಖಾ ಸಂಸ್ಥೆ ವಿಜಯ್ ಸಂಭಾವನೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಜಯ್ ಬಿಗಿಲ್ ಚಿತ್ರಕ್ಕೆ 50 ಕೋಟಿ ಹಾಗೂ ಮಾಸ್ಟರ್ ಚಿತ್ರಕ್ಕೆ 80 ಕೋಟಿ ಸಂಭಾವನೆ ಪಡೆದಿದ್ದಾರೆ. ಇದಕ್ಕೆಲ್ಲಾ ವಿಜಯ್ ಟ್ಯಾಕ್ಸ್ ಕಟ್ಟಿದ್ದಾರೆ. ಈಗಾ ಈ ವಿಚಾರವನ್ನು ಇಲ್ಲಿಗೆ ಬಿಡಬಹುದಾ?' ಎಂದು ಟ್ಟೀಟ್ ಮಾಡಿದ್ದಾರೆ.
'ಮಾಸ್ಟರ್' ಸಂಭ್ರಮ; ವಿಜಯ್ ದಳಪತಿ ಮುತ್ತಿಟ್ಟ ವಿಡಿಯೋ ವೈರಲ್!
ಕಳೆದ ವರ್ಷ ಅದ್ದೂರಿಯಾಗಿ ಬಿಡುಗಡೆಯಾಗ ಬಿಗಿಲ್ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ಮುಟ್ಟಿತು. ಚಿತ್ರದಲ್ಲಿ ವಿಜಯ್‌ಗೆ ಜೋಡಿಯಾಗಿ ಮಿಂಚಿದ ನಯನತಾರಾಳ ಅಭಿನಯಕ್ಕೆ ಸಿನಿ ಪ್ರೇಮಿಗಳು ಫಿದಾ ಆಗಿದ್ರು. 2021ರ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್' ಏಪ್ರಿಲ್ ತಿಂಗಳಲ್ಲಿ ತೆರೆ ಕಾಣುಲು ಸಜ್ಜಾಗುತ್ತಿದೆ.
ಖುಷ್ಬೂ ಹಾಗೂ ವಿಜಯ್ ದಳಪತಿ ಚಿತ್ರರಂಗದ ಆತ್ಮೀಯರು. ಯಾವುದೇ ಖಾಸಗಿ ಕಾರ್ಯಕ್ರಮದಲ್ಲಿ ಖುಷ್ಭೂ ಪಾಲ್ಗೊಂಡರೂ ವಿಜಯ್ ನಟನೆ ಹಾಗೂ ಗುಣವನ್ನು ಹಾಡಿ ಹೊಗಳುತ್ತಾರೆ. ಇಷ್ಟೆಲ್ಲಾ ಆತ್ಮೀಯರಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಮಾಡುವುದು ಎಷ್ಟು ಸರಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.