Alexaಗೆ ಧ್ವನಿ ನೀಡಲಿದ್ದಾರೆ ಬಿಗ್‌ ಬಿ; ಅಲೆಕ್ಸಾ, ಸೆ ಹಲೋ ಟು ಅಮಿತಾಬ್!

By Suvarna News  |  First Published Sep 14, 2020, 5:33 PM IST

ಬಚ್ಚನ್‌ ಧ್ವನಿಯಲ್ಲಿ ಕೇಳಬಹುದು ಜೋಕ್ಸ್, ಹವಾಮಾನ ವರದಿ ಹಾಗೂ ಕೆಲವೊಂದು ಸಲಹೆಗಳು. ಬಿಗ್ ಬಿಗೆ ನೀವೂ ಹಲೋ ಹೇಳಕ್ಕೆ ರೆಡಿನಾ?


ಬಾಲಿವುಡ್‌ ಬಿಗ್ ಬಿ ಧ್ವನಿಯನ್ನು ನೀವು ಶ್ರೀಘ್ರದಲ್ಲೇ ಅಲೆಕ್ಸಾದಲ್ಲಿ ಕೇಳಲಿದ್ದೀರಾ. ಇತ್ತೀಚಿಗೆ ಬಚ್ಚನ್ ಜೊತೆ ಅಮೇಜಾನ್‌ ಪಾರ್ಟನರ್‌ಶಿಪ್‌ ಆಗಿರುವ ವಿಚಾರವನ್ನು ಅನೌನ್ಸ್ ಮಾಡಿದ್ದಾರೆ.  ಈ ಮೂಲಕ ಅಲೆಕ್ಸಾದಲ್ಲಿ ಕೇಳಿ ಬರುವ ಮೊದಲ ಭಾರತೀಯ ಸೆಲೆಬ್ರಿಟಿ ಧ್ವನಿ ಮಿಸ್ಟರ್ ಅಮಿತಾಬ್ ಬಚ್ಚನ್ ಅವರದು ಆಗಲಿದೆ.

ಕೇವಲ 3,700 ಕಿ.ಮೀ ಪ್ರಯಾಣಸಿದ ಅಮಿತಾಬ್ ಬಚ್ಚನ್ ಪೊರ್ಶೆ ಕೆಮನ್ ಮಾರಾಟಕ್ಕೆ!

Tap to resize

Latest Videos

ಅಮಿತಾಬ್ ಧ್ವನಿಯಲ್ಲಿ ನೀವು ಜೋಕ್ಸ್, ಹವಾಮಾನ ವರದಿ , ಸಲಹೆ, ಉರ್ದು ಶಾಹಿರಿ, ಮೋಟಿವೇಶನ್‌ ಕೋಟ್ಸ್ ಕೇಳಬಹುದು. 2021ರಲ್ಲಿ ಇದು ಲಾಂಚ್‌ ಆಗಲಿದೆ ಎನ್ನಲಾಗಿದೆ. ಆದರೆ ಸುಮ್ಮನೆ ಬಚ್ಚನ್ ಧ್ವನಿ ಕೇಳಬೇಕೆಂದರೆ 'ಅಲೆಕ್ಸಾ ಸೆ ಹಲೋ ಟು ಮಿಸ್ಟರ್ ಅಮಿತಾಬ್ ಬಚ್ಚನ್' ಎಂದು ಹೇಳಬಹುದು.

'ಟೆಕ್ನಾಲಜಿಯಿಂದ ನಾನು ಅನೇಕ ವಿಚಾರಗಳಲ್ಲಿ ಅಪ್ಡೇಟ್ ಆಗಿದ್ದೀನಿ. ಇಷ್ಟು ದಿನಗಳ ಕಾಲ ಸಿನಿಮಾ, ಟಿವಿ ಶೋ, ಪಾಡ್‌ಕಾಸ್ಟ್ ಆಯ್ತು ಈಗ ಇದರಲ್ಲೂ ಬರುವುದಕ್ಕೆ ಖುಷಿಯಾಗುತ್ತಿದೆ. ಧ್ವನಿಯಿಂದ ನಮ್ಮ ಅಭಿಮಾನಿಗಳನ್ನು ಎಂಗೇಜ್‌ ಆಗಿಟ್ಟಿಕೊಳ್ಳಲು ಇದು ಒಳ್ಳೆಯ ಉಪಾಯ' ಎಂದಿದ್ದಾರೆ ಅಮಿತಾಬ್ .

ಅಮಿತಾಬ್ ಬಚ್ಚನ್ ಮನೆಗೆ ಹೊಸ ಅತಿಥಿ ಆಗಮನ; ಶುರುವಾಯ್ತು ಹೊಸ ಜೀವನ!

'ಮಿಸ್ಟರ್ ಬಚ್ಚನ್ ಧ್ವನಿ ಭಾರತೀಯರಿಗೆ ತುಂಬಾನೆ ಅಚ್ಚುಮೆಚ್ಚು ಹಾಗೂ ಪರಿಚಿತವಾಗಿರುವುದರಿಂದ .ಗ್ರಾಹಕರನ್ನು ತಲುಪುವುದು ಸುಲಭ ಮತ್ತು ಇದಕ್ಕೆ ಅವರು ಹೇಗೆ  ಪ್ರತಿಕ್ರಿಯಿಸುತ್ತಾರೆ ಎಂದು ಕುತೂಹಲವಾಗಿದ್ದೀವಿ' ಎಂದು ಅಮೆಜಾನ್‌ ಇಂಡಿಯಾ ಲೀಡರ್‌ ಆಫ್‌ ಅಲೆಕ್ಸಾ ಪುನೀತ್ ಕುಮಾರ್  ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಮೇರಿಕದ ನಟ ಸ್ಯಾಮ್ಯುಯೆಲ್ ಜಾಕ್ಸನ್ ಅಲೆಕ್ಸಾಗೆ ಧ್ವನಿ ನೀಡಲು ಒಟ್ಟಾಗಿದ್ದರು ಆದರೆ ಅದು USಗೆ ಮಾತ್ರ ಸೀಮಿತವಾಗಿತ್ತು. ಒಟ್ಟಿನಲ್ಲಿ ಬಚ್ಚನ್ ಧ್ವನಿ ಕೇಳಲು ಅಭಿಮಾನಿಗಳು ಕಾತುದಿಂದ ಕಾಯುತ್ತಿದ್ದಾರೆ.

click me!