ಜಮ್ಮು ಮತ್ತು ಕಾಶ್ಮೀರ ಗ್ರಾಮದ ಶಾಲೆಗೆ 1 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್

Suvarna News   | Asianet News
Published : Jun 18, 2021, 11:32 AM ISTUpdated : Jun 18, 2021, 11:47 AM IST
ಜಮ್ಮು ಮತ್ತು ಕಾಶ್ಮೀರ ಗ್ರಾಮದ ಶಾಲೆಗೆ 1 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್

ಸಾರಾಂಶ

ತುಲೈಲ್‌ ಗ್ರಾಮದಲ್ಲಿ ಶಾಲೆ ನಿರ್ಮಿಸಲು ಬಾಲಿವುಡ್ ನಟ ಅಕ್ಷಯ್ ಕುಮಾರ್ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. 

ಬಾಲಿವುಡ್ ಫಾರ್‌ಎವರ್‌ ಎಂಗ್ ಮ್ಯಾನ್‌ ಅಕ್ಷಯ್ ಕುಮಾರ್ ಬಿಎಸ್‌ಎಫ್‌ನ ಯೋಧರಿಗೆ ಗೌರವ ನಮನ ಸಲ್ಲಿಸಲು ತುಲೈಲ್‌ ಕಣಿವೆಯ ಗ್ರಾಮಕ್ಕೆ ಭೇಟಿ ನೀಡಿದ್ದರು. ಸ್ಥಳೀಯರ ಜೊತೆ ಮಾತುಕತೆ ನಡೆಸಿದ ಅಕ್ಷಯ್, ಅವರ ಕಷ್ಟ-ಸುಖಗಳಿಗೆ ಸ್ಪಂದಿಸಿದ್ದರು. ಈ ವೇಳೆ ಒಂದು ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ. 

3600 ಡ್ಯಾನ್ಸರ್ಸ್‌ ಕುಟುಂಬಕ್ಕೆ ನಟ ಅಕ್ಷಯ್‌ನಿಂದ ದಿನಸಿ ಪೋರೈಕೆ 

ಹೌದು! ತುಲೈಲ್‌ ಗ್ರಾಮದಲ್ಲಿ ಶಾಲೆ ಇಲ್ಲದ ಕಾರಣ ಅಕ್ಷಯ್ ಕುಮಾರ್ 1 ಕೋಟಿ ದೇಣಿಗೆ ನೀಡಿ, ಶಾಲೆ ನಿರ್ಮಾಣ ಮಾಡಿಸುವುದಕ್ಕೆ ಮುಂದಾಗಿದ್ದಾರೆ. ಅಕ್ಷಯ್ ಆನ್‌ ಸ್ಕ್ರೀನ್‌ ಹೀರೋ ಮಾತ್ರವಲ್ಲ ರಿಯಲ್ ಲೈಫ್‌ನಲ್ಲೂ ಹೀರೋ ಎಂದು ಸ್ಥಳೀಯರು ಜೈ ಕಾರ ಹಾಕಿದ್ದಾರೆ. ಈ ಶಾಲೆಗೆ ಅಕ್ಷಯ್ ಕುಮಾರ್ ತಂದೆ 'ಹರಿ ಓಂ' ಹೆಸರನ್ನು ಇಡಲಾಗುತ್ತದೆ. 

ಕೊರೋನಾ ಆರಂಭದಿಂದಲೂ ಅಕ್ಷಯ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೋವಿಡ್ ಮೊದಲನೇ ಅಲೆಯಲ್ಲಿ PM Fundsಗೆ  25 ಕೋಟಿ ರೂ. ದೇಣಿಗೆ ನೀಡಿದ್ದರು, ಎರಡನೇ ಅಲೆಯಲ್ಲಿ ಆಕ್ಸಿಜನ್ ಕೊರತೆ ಹೆಚ್ಚಿದ ಕಾರಣ 100 ಆಕ್ಸಿಜನ್‌ ಕಾನ್ಸಟ್ರೇಟರ್‌ಗಳನ್ನು ನೀಡಿದ್ದರು. ಅಲ್ಲದೇ ಗೌತಮ್ ಗಂಭೀರ್ ಫೌಂಡೇಶನ್‌ಗೆ 1 ಕೋಟಿ ರೂ. ನೀಡಿದ್ದರು. 

'ರಾಮ ಸೇತು' ಸಿನಿಮಾದಲ್ಲಿ ಇಬ್ಬರು ಸೌತ್ ಸ್ಟಾರ್ ನಟರು; ಶ್ರೀಲಂಕಾದಲ್ಲಿ ಚಿತ್ರೀಕರಣ! 

ಸದ್ಯ ಅಕ್ಷಯ್ 'ರಾಮ್ ಸೇತು' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.  ಅಭಿಶೇಕ್ ಶರ್ಮಾ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ನುಶ್ರತ್ ಬಾರೂಚಾ ಅಭಿನಯಿಸುತ್ತಿದ್ದಾರೆ. 'ರಾಮ್ ಸೇತು' ಚಿತ್ರೀಕರಣದ ನಂತರ ಅಕ್ಷಯ್ ಕೈಯಲ್ಲಿ 'ಅತ್ರಂಗಿ ರೇ', 'ಬಚ್ಚನ್ ಪಾಂಡೇ', 'ಬೆಲ್ ಬಾಟಂ' ಮತ್ತು 'ಹೌಸ್‌ಫುಲ್‌ 5' ಸಿನಿಮಾಗಳು ರಿಲೀಸ್‌ಗೆ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?