ತಯಾರಿಯಲ್ಲಿದೆ ಕ್ರಿಕೆಟರ್ ರಾಹುಲ್ ಡ್ರಾವಿಡ್ ಬಯೋಗ್ರಫಿ. ಕನ್ನಡ, ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ಬಿಡುಗಡೆ.
ತೆಲುಗಿನ ನಿರ್ದೇಶಕರೊಬ್ಬರು ಕ್ರಿಕೆಟಿಗ ರಾಹುಲ್ ದ್ರಾವಿಡ್ ಬಯೋಗ್ರಫಿ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ರಾಹುಲ್ ದ್ರಾವಿಡ್ ಬಳಿ ಮಾತನಾಡಿ ಸಿನಿಮಾ ಮಾಡುವ ನಿಟ್ಟಿನಲ್ಲಿ ಕತೆ, ಚಿತ್ರಕಥೆ ರೂಪಿಸಿಕೊಳ್ಳುತ್ತಿದ್ದಾರಂತೆ.
ಇಂದಿರಾನಗರದ ಗೂಂಡಾ ನಾನು; ಹೊಡೆದಾಕ್ಬಿಡ್ತೀನಿ; ದ್ರಾವಿಡ್ ಜಾಹೀರಾತು ವಿಡಿಯೋ ವೈರಲ್!
ರಾಹುಲ್ ದ್ರಾವಿಡ್ ಪಾತ್ರದಲ್ಲಿ ನಟ ಸಿದ್ಧಾರ್ಥ್ ನಟಿಸುತ್ತಿದ್ದಾರೆ. ಸಿದ್ಧಾರ್ಥ್ ಕೂಡ ಈ ಕತೆ ಒಪ್ಪಿದ್ದಾರೆ ಎಂಬುದು ಸದ್ಯದ ಮಾಹಿತಿ.
ಕನ್ನಡ, ತೆಲುಗು, ಹಿಂದಿ, ತಮಿಳು ಸೇರಿದಂತೆ ಬಹುಭಾಷೆಯಲ್ಲಿ ರಾಹುಲ್ ದ್ರಾವಿಡ್ ಜೀವನ ಸಿನಿಮಾ ಆಗುತ್ತಿದೆ. ಅಂದುಕೊಂಡಂತೆ ಎಲ್ಲವೂ ಆದರೆ, ಸದ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಬಯೋಗ್ರಫಿ ಈ ವರ್ಷದ ಕೊನೆಯಲ್ಲಿ ಸೆಟ್ಟೇರಲಿದೆ.