
ಬಾಲಿವುಡ್ ಸುಂದರ ಚೆಲುವೆ, ಆಂಗ್ರಿ ಆ್ಯಂಡ್ ಯಂಗ್ ಮ್ಯಾನ್ ಅಜಯ್ ದೇವಗನ್ ಮಡದಿ, ಇಬ್ಬರು ಮಕ್ಕಳ ಸೂಪರ್ ಮದರ್ ನಟಿ ಕಾಜೋಲ್ ತನ್ನ ಕುಟುಂಬದ ಸುರಕ್ಷೆ ಬಗ್ಗೆ ಸದಾ ಅತೀವ ಕಾಳಜಿ ವಹಿಸುತ್ತಾರೆ. ಏನೇ ಆದರೂ ಫ್ಯಾಮಿಲಿ ಫಸ್ಟ್ ಎಂದು ಹೇಳಿರುವುದನ್ನು ನಾವು ಸಾಕಷ್ಟು ಸಂದರ್ಶನದಲ್ಲಿ ನೋಡಿದ್ದೀವಿ. ಇಡೀ ವಿಶ್ವವೇ ಭಯಾನಕ ರೋಗಕ್ಕೆ ತುತ್ತಾಗಿರುವ ಈ ಸಂದರ್ಭದಲ್ಲಿಯೂ ಅವರು ಅದನ್ನು ಸಾಬೀತು ಮಾಡಿದ್ದಾರೆ.
ದುಬೈನವರಿಗೆ ಶಾರುಖ್ ಸಂದೇಶ; ಭಾರತದವರಿಗೆ ಮಾತ್ರ ಕ್ಯಾರೆ ಅನ್ನೊಲ್ಲ?
ಹೌದು! ಕಾಜೋಲ್ ಹಾಗೂ ಅಜಯ್ ದೇವಗನ್ ಪುತ್ರಿ ನೈಸಾ ಸಿಂಗಾಪುರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲೆಡೆ ವೈರಸ್ ಕಾಟ ಹೆಚ್ಚಾದ ಪರಿಣಾಮ ಪುತ್ರಿಯನ್ನು ತಾಯ್ನಾಡಿಗೆ ಕರೆಯಿಸಿಕೊಂಡಿದ್ದಾರೆ. ಮಗಳೊಂದಿಗೆ ಅಮ್ಮ ಕಾಜೋಲ್ ಹೆಚ್ಚಿನ ಸಮಯವನ್ನು ಕಳೆದಿದ್ದಾರೆ. ಸರ್ಕಾರದ ನಿಯಮದಂತೆ ಕೋವಿಡ್-19 ಸ್ಕ್ರೀನ್ ಟೆಸ್ಟಿಂಗ್ ಕೂಡ ಮಾಡಿಸಿಕೊಂಡಿದ್ದಾರೆ.
ಈ ವಿಚಾರ ಅಭಿಮಾನಿಗಳಿಗೆ ತಿಳಿಯುತ್ತಿದ್ದಂತೆ, ಅಜಯ್‌ಗೆ ಪತ್ನಿ ಹಾಗೂ ನೈಸಾ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇವರು ಎಲ್ಲಿಯೂ ಕಾಣಿಸಿಕೊಳ್ಳದ ಕಾರಣ ಇವರಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದೆ ಎಂದೂ ವದಂತಿ ಹರಿಯ ಬಿಡಲಾಗುತ್ತಿದೆ.
ಇದಕ್ಕೆ ಸ್ವತಃ ಅಜಯ್ ದೇವಗನ್ ಸ್ಪಷ್ಟನೆ ನೀಡಿದ್ದಾರೆ, 'ಎಲ್ಲರೂ ಕಾಜೋಲ್ ಹಾಗೂ ನೈಸಾ ಆರೋಗ್ಯವನ್ನು ವಿಚಾರಿಸುತ್ತಿರುವುದಕ್ಕೆ ತುಂಬಾ ಥ್ಯಾಂಕ್ಸ್. ಆದರೆ ಅವರಿಗೆ ಏನೂ ಆಗಿಲ್ಲ ಆರೋಗ್ಯವಾಗಿದ್ದಾರೆ. ಹರಿದಾಡುತ್ತಿರುವ ವದಂತಿ ಸುಳ್ಳು. ಯಾವುದಕ್ಕೂ ಸಾಕ್ಷಿ ಇಲ್ಲ,' ಎಂದಿದ್ದಾರೆ. ನಿಯಮದಂತೆ ಅಮ್ಮ-ಮಗಳು ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ.
ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಇಂಗ್ಲೆಂಡ್ ಬಂದು, ಭಾರತದಲ್ಲಿ ಅಲ್ಲಿ ಇಲ್ಲಿ ಟ್ರಾವೆಲ್, ಪಾರ್ಟಿ ಮಾಡಿ ಹಲವು ಗಣ್ಯರಿಗೆ ಕರೋನಾ ಹಬ್ಬಿಸಿದ ಆತಂಕ ಇದೆ.
ಇಷ್ಟು ಚಿಕ್ಕ ಬಟ್ಟೆ ದೇವಸ್ಥಾನಕ್ಕೆ ಬೇಕಾ? ಅಜಯ್ ಪುತ್ರಿ ಟ್ರೋಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.