ನಟಿ ಯಾಮಿ ಗೌತಮ್ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಇದು ಕೇವಲ ಸಿನಿಮಾವಾಗದೆ ಕಾಶ್ಮೀರಿ ಪಂಡಿತರ ಕರಾಳ ಇತಿಹಾಸ ಮತ್ತು ಅವರು ಅನುಭವಿಸಿದ ದೌರ್ಜನ್ಯವನ್ನು ಎತ್ತಿ ತೋರಿಸುವ ಚಿತ್ರವಾಗಿದೆ ಎಂದಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್( The Kashmir Files) ಸಿನಿಮಾ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಗಳಿಕೆ ಮಾಡಿರುವ ಈ ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. 1990ರ ಸಮಯದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ(Kashmiri Pandit Assassinated) ಮತ್ತು ವಲಸೆಯ ಬಗ್ಗೆ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದ್ದು, ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ(Vivek Agnihotri) ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಚಿತ್ರದ ಬಗ್ಗೆ ಪರ ವಿರೋದ ಚರ್ಚೆ ನಡೆಯುತ್ತಿದೆ.
undefined
ಸಿನಿಮಾ ಗಣ್ಯರು ಮಾತ್ರವಲ್ಲದೆ ರಾಜಕೀಯ ಗಣ್ಯರು ಸಹ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನಟಿ ಯಾಮಿ ಗೌತಮ್ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಇದು ಕೇವಲ ಸಿನಿಮಾವಾಗದೆ ಕಾಶ್ಮೀರಿ ಪಂಡಿತರ(Kashmiri Pandits) ಕರಾಳ ಇತಿಹಾಸ ಮತ್ತು ಅವರು ಅನುಭವಿಸಿದ ದೌರ್ಜನ್ಯವನ್ನು ಎತ್ತಿ ತೋರಿಸುವ ಚಿತ್ರವಾಗಿದೆ ಎಂದಿದ್ದಾರೆ. ಈ ಬಗ್ಗೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿರುವ ಯಾಮಿ, 'ನಾವೆಲ್ಲರೂ ಈ ಸಿನಿಮಾದ ವಿಷಯದ ಬಗ್ಗೆ ಸಾಕಷ್ಟು ತಿಳಿದಿದ್ದೀವಿ' ಎಂದಿದ್ದಾರೆ.
ಯಾಮಿ ಗೌತಮ್ ಪತಿ ನಿರ್ದೇಶಕ ಆದಿತ್ಯ ಧರ್ ಅವರ ಕುಟುಂಬದ ಬೇರುಗಳು ಕಾಶ್ಮೀರಿ ಪಂಡಿತರ ಇತಿಹಾಸಕ್ಕೆ ತನ್ನನ್ನು ತೆರೆದಿಟ್ಟಿದೆ ಎನ್ನುವುದನ್ನು ಬಹಿರಂಗ ಪಡಿಸಿದರು. ಈ ಬಗ್ಗೆ ದೀರ್ಘವಾಗಿ ಬರೆದಿರುವ ಯಾಮಿ, 'ಕಾಶ್ಮೀರಿ ಪಂಡಿತರನ್ನು ಮದುವೆಯಾದ ನಾನು ಅವರಲ್ಲಿ ಅನೇಕರೊಂದಿಗೆ ಚರ್ಚೆ ನಡೆಸಿದ್ದೇವೆ. ಅವರ ಅನೇಕ ಕಥೆಗಳನ್ನು ನಾನು ತಿಳಿದುಕೊಂಡಿದ್ದೇನೆ. ಈ ಬಗ್ಗೆ ಒಂದು ಸಿನಿಮಾ ಬಂದಾಗ ಅದು ಹಿಂದೆ ಏನಾಯಿತು ಎನ್ನುವ ಕುರಿತು ಮಾತನಾಡುತ್ತದೆ. ಅದರ ಕಾರಣವನ್ನು ಬೆಂಬಲಿಸುವುದು ಮುಖ್ಯವಾಗುತ್ತದೆ. ಇದೆಲ್ಲ ನಡೆದಾಗ ನಾನು ತುಂಬಾ ಚಿಕ್ಕವಳಾಗಿದ್ದೆ. ಹಾಗಾಗಿ ಇಲ್ಲಿ ಯಾವುದೇ ವೈಯಕ್ತಿಕ ನೆನಪುಗಳನ್ನು ಹೇಳಿಲ್ಲ' ಎಂದಿದ್ದಾರೆ.
The Kashmir Files: ಕಾಶ್ಮೀರ ಫೈಲ್ಸ್ ಸಿನಿಮಾ ಬಗ್ಗೆ ಬುದ್ಧಿಜೀವಿಗಳೇಕೆ ಉರಿದುಕೊಳ್ತಿದಾರೆ?
'ಈಗ ಅಂತ ಕಥೆಗಳನ್ನು ಕೇಳಿದಾಗ ಮತ್ತು ಭ್ರಾತೃತ್ವದ ಭಾಗವಾಗಿರುವಾಗ ಈ ಚಿತ್ರ ಎಷ್ಟು ಮಹತ್ವದಾಗಿದೆ ಎಂದು ನಿಮಗೆ ಅರಿವಾಗುತ್ತದೆ. ಜನರು ಈ ಚಿತ್ರದ ಬಗ್ಗೆ ತುಂಬಾ ಭಾವುಕರಾಗಿದ್ದಾರೆ. ಇದರ ಬಗ್ಗೆ ತುಂಬಾ ಬಲವಾದ ಭಾವನೆ ಹೊಂದಿದ್ದಾರೆ. ಹೀಗಿರುವಾಗ ಯಾಕೆ ಈ ಚಿತ್ರಕ್ಕೆ ಬೆಂಬಲ ನೀಡಬಾರದು ಮತ್ತು ಚಿತ್ರದ ಬಗ್ಗೆ ಮಾತನಾಡಬಾರದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಾರದು. ನಾನು ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಹೃದಯದಿಂದ ಬಂದಿದ್ದನ್ನು ಬರೆದಿದ್ದೀನಿ' ಎಂದು ಯಾಮಿ ಗೌತಮ್ ದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ.
ಇನ್ನು ಯೌಮಿ ಪತಿ ಆದಿತ್ಯ ಧರ್ ಚಿತ್ರದ ಬಗ್ಗೆ ಮಾಡಿದ್ದ ಕಾಮೆಂಟ್ ಶೇರ್ ಮಾಡಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. 'ಕಾಶ್ಮೀರಿ ಪಂಡಿತರನ್ನು ಮದುವೆಯಾಗಿರುವ ನನಗೆ ಈ ಸಮುದಾಯವು ಅನುಭವಿಸಿರುವ ದೌರ್ಜನ್ಯದ ಬಗ್ಗೆ ನೇರವಾಗಿ ತಿಳಿದಿದೆ. ಆದರೆ ಈ ದೇಶದ ಬಹುಪಾಲು ಜನರಿಗೆ ಸತ್ಯ ತಿಳಿದಿಲ್ಲ. ಈ ಸತ್ಯ ತಿಳಿಯಲು ಅನೇಕ ವರ್ಷಗಳು ಮತ್ತು ಸಿನಿಮಾನೇ ಬೇಕಾಯಿತು. ದಯವಿಟ್ಟು ಕಶ್ಮೀರ್ ಫೈಲ್ಸ್ ಸಿನಿಮಾ ನೋಡಿ ಮತ್ತು ಬೆಂಬಲಿಸಿ' ಎಂದು ನಟಿ ಯಾಮಿ ಗೌತಮ್ ಹೇಳಿದರು.
The Kashmir Files ವಿಡಿಯೋ ಮೂಲಕ ಕ್ಷಮೆ ಕೋರಿದ ನಟ ಪ್ರಕಾಶ್ ಬೆಳವಾಡಿ
ಮಾರ್ಚ್ 11ರಂದು ಬಿಡುಗಡೆಯಾದ ಸಿನಿಮಾದ ಬಗ್ಗೆ ಅನೇಕರು ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಾಮಾನ್ಯರಿಂದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರು ಸಹ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಸ್ಟಾರ್ ಕಲಾವಿದರು ಚಿತ್ರ ವೀಕ್ಷಿಸುವಂತೆ ಪ್ರೇಕ್ಷಕರಲ್ಲಿ ವಿನಂತಿಸುತ್ತಿದ್ದಾರೆ. ಆದರೆ ನಟಿ ಸ್ವರಾ ಭಾಸ್ಕರ್ ಚಿತ್ರದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಸಿನಿಮಾ ಹೆಸರು ಮತ್ತು ನಿರ್ದೇಶಕರ ಹೆಸರು ಉಲ್ಲೇಖ ಮಾಡದೆ ಸ್ವರಾ ಭಾಸ್ಕರ್ ಪರೋಕ್ಷವಾಗಿ ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.