ಸೂಪರ್ ಸ್ಟಾರ್ ಶ್ರೀದೇವಿಗೆ ಅಮೆರಿಕಾದಲ್ಲಿ ಅನ್ಯಾಯ; ಭಾರೀ ಪರಿಹಾರ ಕೊಡಿಸಿದ್ದ ಅಧ್ಯಕ್ಷ ಬಿಲ್ ಕ್ಲಿಂಟನ್‌

By Shriram BhatFirst Published Nov 24, 2023, 12:29 PM IST
Highlights

ಮಾಡಿದ್ದ ತಪ್ಪಿಗೆ ಪರಿಹಾರವಾಗಿ ಅಮೆರಿಕಾ ಕ್ಯಾನ್ಸರ್ ಆಸ್ಪತ್ರೆ ಹೇರಳ ಹಣವನ್ನೂ ನೀಡಿತು. ಈ ಕೇಸ್ ನಡೆದ ಬಳಿಕ, ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ತಮ್ಮ ದೇಶದ ಎಲ್ಲಾ ಆಸ್ಪತ್ರೆಗಳಿಗೆ 'ಎಲ್ಲಾ ಆಸ್ಪತ್ರೆಗಳು ತಮ್ಮಲ್ಲಿ ನಡೆಯುವ ದುರಂತ ಘಟನೆಗಳು ಹಾಗೂ ತಪ್ಪುಗಳನ್ನು ಬಹಿರಂಗಪಡಿಸಬೇಕು' ಎಂಬ ಸುತ್ತೋಲೆ ಹೊರಡಿಸಿಬಿಟ್ಟರು. 

ಬಾಲಿವುಡ್ ಸೂಪರ್ ಸ್ಟಾರ್ ನಟಿಯೊಬ್ಬರ ನೋವಿನ ಕಥೆಯಿದು. ನಟಿ ತಂದೆ 1990ರಲ್ಲಿ ಹಾರ್ಟ್‌ ಅಟ್ಯಾಕ್‌ನಿಂದ ತೀರಿಕೊಂಡರು. ಆ ಸಮಯದಲ್ಲಿ ಸ್ಟಾರ್ ನಟಿ 'ಲಮ್ಹೆ' ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ತಂದೆಯ ಸಾವಿನಿಂದ ಕಂಗಾಲಾದರೂ ಸ್ವಲ್ಪ ದಿನಗಳಲ್ಲೇ ಮತ್ತೆ ಶೂಟಿಂಗ್‌ಗೆ ಮರಳಿ, ತಾವು ಪಕ್ಕಾ ವೃತ್ತಿಪರತೆ ಹೊಂದಿರುವ ನಟಿ ಎಂಬುದನ್ನು ಸಾಬೀತು ಮಾಡಿದ್ದರು. ಆದರೆ, 1995ರಲ್ಲಿ ಮತ್ತೆ ಅವಳ ತಾಯಿಗೆ ಅನಾರೋಗ್ಯ ಕಾಡಿತ್ತು. ಸ್ಟಾರ್ ನಟಿ ತಾಯಿಗೆ ಬ್ರೇನ್ ಟ್ಯೂಮರ್ ಆಗಿ ಆಕೆ ಹಾಸಿಗೆ ಹಿಡಿದುಬಿಟ್ಟರು. 

ಬಾಲಿವುಡ್‌ ನಟಿ ತನ್ನ ತಾಯಿಯ ಚಿಕಿತ್ಸೆಗಾಗಿ ಅಮೆರಿಕಾದ ನ್ಯೂಯಾರ್ಕ್ ಸಿಟಿಯಲ್ಲಿನ 'ಮೆಮೋರಿಯಲ್ ಸ್ಲೋವನ್ ಕೆಟ್ಟೆರಿಂಗ್ ಕ್ಯಾನ್ಸರ್ ಸೆಂಟರ್‌' ಮೊರೆ ಹೋದರು. ಅಲ್ಲಿ ಅಡ್ಮಿಟ್ ಆಗಿದ್ದ ನಟಿಯ ತಾಯಿಗೆ ಅಲ್ಲಿನ ನರರೋಗ ತಜ್ಞರು ಮೆದುಳಿನ ತಪ್ಪಾದ ಸ್ಥಳದಲ್ಲಿ ಒಪರೇಶನ್ ಮಾಡಿ ಸೂಕ್ಷ್ಮ ಭಾಗಗಳಿಗೆ ಹಾನಿ ಮಾಡಿಬಿಟ್ಟರು. ಇದರಿಂದ ಆಕೆಗೆ ಕಣ್ಣಿನ ದೃಷ್ಟಿ ಹೊರಟು ಹೋಯ್ತು. ಜತೆಗೆ, ಸದ್ಯದ ನೆನಪಿನ ಶಕ್ತಿ ಕೂಡ ನಷ್ಟವಾಗಿ ಆಕೆ ಜೀವಂತ ಶವದಂತೆ ಆಗಿಬಿಟ್ಟರು. ಈ ಕೇಸ್ ಅಮೆರಿಕಾದ ಪ್ರಮುಖ ಎಲ್ಲ ಪತ್ರಿಕೆಗಳಲ್ಲಿ ಪ್ರಕಟಗೊಂಡು ಅದು ಸ್ವತಃ ಅಂದಿನ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್‌ ಅವರ ಗಮನವನ್ನೂ ಸೆಳೆಯಿತು. 

ಕ್ರಿಕೆಟ್ ಕ್ಯಾಪ್ಟನ್ ಆಗಿದ್ದವ ಸಿನಿಮಾಕ್ಕೆ ಬಂದು ಹೀರೋ ಚಾನ್ಸ್‌ಗೆ ಕಾಯುತ್ತಲೇ ಕಾಲ ಕಳೆಯುತ್ತಿರುವ ನಟ!

ಮಾಡಿದ್ದ ತಪ್ಪಿಗೆ ಪರಿಹಾರವಾಗಿ ಅಮೆರಿಕಾ ಕ್ಯಾನ್ಸರ್ ಆಸ್ಪತ್ರೆ ಹೇರಳ ಹಣವನ್ನೂ ನೀಡಿತು. ಈ ಕೇಸ್ ನಡೆದ ಬಳಿಕ, ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ತಮ್ಮ ದೇಶದ ಎಲ್ಲಾ ಆಸ್ಪತ್ರೆಗಳಿಗೆ 'ಎಲ್ಲಾ ಆಸ್ಪತ್ರೆಗಳು ತಮ್ಮಲ್ಲಿ ನಡೆಯುವ ದುರಂತ ಘಟನೆಗಳು ಹಾಗೂ ತಪ್ಪುಗಳನ್ನು ಬಹಿರಂಗಪಡಿಸಬೇಕು' ಎಂಬ ಸುತ್ತೋಲೆ ಹೊರಡಿಸಿಬಿಟ್ಟರು. ಆ ಮೂಲಕ ಮುಂದೆ ನಡೆಯಬಹುದಾಗಿದ್ದ ಹಲವು ದುರಂತಗಳು ತಪ್ಪಲು ಕಾರಣಕರ್ತರಾದರು ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್. ಅಮೆರಿಕಾ ಆಸ್ಪತ್ರೆ ವಿರುದ್ಧ ಕೇಸ್ ಹಾಕಿ, ಸೂಕ್ತ ಸಾಕ್ಷಾಧಾರಗಳನ್ನು ನೀಡಿ ಕೇಸ್ ಗೆದ್ದುಕೊಂಡರು ಭಾರತದ ಈ ಸೂಪರ್ ಸ್ಟಾರ್ ನಟಿ, ಅವರೇ ನಟಿ ಅತಿಲೋಕ ಸುಂದರಿ ಶ್ರೀದೇವಿ.

ರಚಿತಾ ರಾಮ್ 'ಮದುವೆ ವಾರ್ಷಿಕೋತ್ಸವ'ಕ್ಕೆ ಸಿಕ್ತು ರೋಲ್ಸ್ ರಾಯ್ ಕಾರ್ ಗಿಫ್ಟ್, ಹೊರಬಿತ್ತು ಈಗ ಮದುವೆ ಸೀಕ್ರೆಟ್!

ಅಮೆರಿಕಾದಲ್ಲಿ ತನ್ನ ತಾಯಿಗೆ ನೀಡಿದ ತಪ್ಪಾದ ಟ್ರೀಟ್‌ಮೆಂಟ್ ಕಾರಣಕ್ಕೆ ಶ್ರೀದೇವಿ ತಮ್ಮ ತಾಯಿಯನ್ನು 1996ರಲ್ಲಿ ಕಳೆದುಕೊಂಡರು. 6 ವರ್ಷಗಳ ಅವಧಿಯಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥೆಯಂತಾದ ನಟಿ ಶ್ರೀದೇವಿ, ಈ ಬಗ್ಗೆ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಯಾವುದೇ ದುರಂತ ಘಟನೆ ನನ್ನ ಜೀವನದಲ್ಲಿ ನಡೆದಾಗ ನಾನು ಆ ಕ್ಷಣಗಳಲ್ಲಿ ಮೌನಕ್ಕೆ ಜಾರಿ ಬಿಡುತ್ತೇನೆ. ಆಗ ಯಾರಲ್ಲೂ ಆ ಬಗ್ಗೆ ನಾನು ಮಾತನಾಡುವುದಿಲ್ಲ. ಮುಂದೆ ಯಾವತ್ತೋ ಆ ಸಂದರ್ಭ ಬಂದಾಗ ಆ ಸಂಗತಿ ಬಗ್ಗೆ ಕೆಲವೊಮ್ಮೆ ಮಾತನಾಡುತ್ತೇನೆ' ಎಂದಿದ್ದರು ನಟಿ ಶ್ರೀದೇವಿ. 

click me!