ಸೆಕ್ರೆಟರಿ ಜೊತೆಗೇ ಲಿವ್‌ ಇನ್‌ ರಿಲೇಶನ್‌ನಲ್ಲಿ ರೇಖಾ! ಆಕೆಯ ಪತಿಯ ಆತ್ಮಹತ್ಯೆಗೆ ಇದೇ ಕಾರಣ?

Published : Jul 22, 2023, 10:27 AM IST
ಸೆಕ್ರೆಟರಿ ಜೊತೆಗೇ ಲಿವ್‌ ಇನ್‌ ರಿಲೇಶನ್‌ನಲ್ಲಿ ರೇಖಾ! ಆಕೆಯ ಪತಿಯ ಆತ್ಮಹತ್ಯೆಗೆ ಇದೇ ಕಾರಣ?

ಸಾರಾಂಶ

ಬಾಲಿವುಡ್‌ನ ಚಿರಯೌವ್ವನೆ ರೇಖಾ ತನ್ನ ಸೆಕ್ರೆಟರಿ ಜೊತೆಗೆ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದರು ಅನ್ನೋ ಸತ್ಯ ಇದೀಗ ಹೊರಬಿದ್ದಿದೆ. ಅಷ್ಟೇ ಅಲ್ಲ, ರೇಖಾ ಪತಿ ಆತ್ಮಹತ್ಯೆಗೂ ಇದೇ ಕಾರಣನಾ ಅನ್ನೋ ಗುಮಾನಿ ಎದ್ದಿದೆ.

ರೇಖಾ ಅಂದರೆ ಒಂದು ಕಾಲದಲ್ಲಿ ಪಡ್ಡೆ ಹುಡುಗರ ಎದೆಬಡಿತ ಏರುಪೇರಾಗುತ್ತಿತ್ತು. ಈಗಲೂ ಅವರನ್ನು ಸೌಂದರ್ಯ ರಾಣಿಯಾಗಿ ಆರಾಧಿಸುವವರಿದ್ದಾರೆ. ಈ ಬಾಲಿವುಡ್‌ ನಟಿಯ ಪರ್ಸನಲ್ ಲೈಫ್‌ ಸ್ಟೋರಿ ಬಹಳ ರೋಚಕ. ಬಾಲಿವುಡ್ ಸಿನಿಮಾ ಇಂಡಸ್ಟ್ರಿಯ ಅನಭಿಷಿಕ್ತ ರಾಣಿಯಂತೆ ಮೆರೆಯುತ್ತಿದ್ದ ಈ ನಟಿ ಅನೇಕ ನಟರೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದದ್ದು ಸುದ್ದಿಯಾಗುತ್ತಿತ್ತು. ಇದೀಗ ರೇಖಾ ಹತ್ತಿರತ್ತಿರ ಎಪ್ಪರತ್ತರ ಹರೆಯದಲ್ಲಿದ್ದಾರೆ. ಈಗೊಂದು ರೋಚಕ ಸುದ್ದಿ ಅವರ ಬಗ್ಗೆ ಹರಿದಾಡುತ್ತಿದೆ. ಅದು ಅವರ ಲಿವ್‌ಇನ್‌ ರಿಲೇಶನ್‌ಶಿಪ್‌ ಬಗ್ಗೆ. ಹೌದು, ರೇಖಾ ತನ್ನ ಸೆಕ್ರೆಟರಿ ಜೊತೆಗೇ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದರು ಅನ್ನೋ ಸಂಗತಿ ಇದೀಗ ಎಲ್ಲೆಡೆ ಹರಿದಾಡ್ತಿದೆ. ಅದಕ್ಕೆ ಕಾರಣ ರೇಖಾ ಅವರ ಜೀವನ ಚರಿತ್ರೆ.

ಯಾಸರ್‌ ಉಸ್ಮಾನ್‌ ಎಂಬವರು ಇದೀಗ ರೇಖಾ ಬದುಕಿನ ಪುಟಗಳನ್ನು ಎಲ್ಲರೆದುರು ತೆರೆದಿಡಲು ಮುಂದಾಗಿದ್ದಾರೆ. 'ರೇಖಾ ದಿ ಅನ್‌ ಟೋಲ್ಡ್‌ ಸ್ಟೋರಿ' ಅನ್ನೋ ಪುಸ್ತಕದ ಮೂಲಕ ಅವರು ಇಲ್ಲಿಯವರೆಗೆ ರಹಸ್ಯವಾಗಿ ಉಳಿದಿದ್ದ ಸ್ಫೋಟಕ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ರೇಖಾ ಬಗೆಗಿನ ಅನ್‌ಟೋಲ್ಡ್‌ ಸ್ಟೋರಿ ಓದಲು ಸಿನಿ ರಸಿಕರು ಕಾತರದಿಂದ ಕಾಯುವಂತಾಗಿದೆ.

ರೇಖಾ ಅವರ ಸೆಕ್ರೆಟರಿ ಹೆಸರು ಫರ್‌ಝಾನ ಅಂತ. ರೇಖಾ ಲೈಫ್‌ಸ್ಟೋರಿ ಬರೆಯಲು ಹೊರಟಿರುವ ಯಾಸರ್‌ ಪ್ರಕಾರ ರೇಖಾ ತನ್ನ ಸೆಕ್ರೆಟರಿ ಜೊತೆಗೆ ಲಿವ್‌ಇನ್‌ ರಿಲೇಶನ್‌ಶಿಪ್‌ನಲ್ಲಿದ್ದರು. ರೇಖಾ ಅವರ ಬೆಡ್‌ರೂಮ್‌ಗೆ ಪ್ರವೇಶ ಪಡೆಯುತ್ತಿದ್ದ ಏಕೈಕ ವ್ಯಕ್ತಿ ಎಂದರೆ ಇದೇ ಫರ್‌ಝಾನ. ಸುಮಾರು ಮೂರು ದಶಕಗಳ ಕಾಲ ಇವರಿಬ್ಬರ ನಡುವೆ ರಿಲೇಶನ್‌ಶಿಪ್‌ ಇತ್ತು. ಬಾಲಿವುಡ್‌ನ ಹೆಚ್ಚಿನೆಲ್ಲರಿಗೂ ತಿಳಿದಿರೋ ಇನ್ನೊಂದು ವಿಚಾರ ಅಂದರೆ ರೇಖಾ ಫರ್‌ಝಾನ ಮೇಲೆ ಇಟ್ಟಿದ್ದ ನಂಬಿಕೆ. ಆತನ ಕಣ್ತಪ್ಪಿಸಿ ರೇಖಾ ಒಂದು ಕಡ್ಡಿಯನ್ನು ಕೂಡ ಅಲುಗಾಡಿಸಲಾಗುತ್ತಿರಲಿಲ್ಲ.

ಅನನ್ಯಾ ಪಾಂಡೆಗೂ ಮೊದಲು ಆದಿತ್ಯ ಕಪೂರ್ ಜೊತೆ ಡೇಟಿಂಗ್ ಮಾಡಿದ ನಟಿಯರು!

ಯಾಸರ್‌ ಉಸ್ಮಾನ್‌ ಬರೆದಿರೋ ರೇಖಾ ಅನ್‌ಟೋಲ್ಡ್‌ ಸ್ಟೋರಿ ಪುಸ್ತಕದಲ್ಲಿರೋ ಮತ್ತೊಂದು ಬಲು ರೋಚಕ ಸಂಗತಿ ಅಂದರೆ ರೇಖಾ ಅವರ ಗಂಡನ ವಿಚಾರ. ಮುಖೇಶ್‌ ಅಗರ್‌ವಾಲ್ ರೇಖಾ ದಾಂಪತ್ಯ ನಡೆಸಿದ್ದ ಏಕೈಕ ವ್ಯಕ್ತಿ. ಅಮಿತಾಭ್ ಬಚ್ಚನ್‌ ಜೊತೆ ಬ್ರೇಕ್ ಅಪ್ ಆದ ನಂತರ ರೇಖಾ ಹಠಾತ್ತನೆ ಮುಖೇಶ್ ಅಗರ್ವಾಲ್ ಅವರನ್ನು ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದರು. ರೇಖಾ ದೆಹಲಿಯ ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು 1990 ರಲ್ಲಿ ವಿವಾಹವಾದರು. ಆಗ ಈ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಯಾಕೆಂದರೆ ರೇಖಾಳ ಜೀವನದಲ್ಲಿ ಇದ್ದಕ್ಕಿದ್ದಂತೆ ಮುಖೇಶ್ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿಮಿ ಅಗರ್ವಾಲ್ ಅವರು ತಮ್ಮ ಶೋನಲ್ಲಿ ಮುಖೇಶ್ ಅಗರ್ವಾಲ್ ಅವರ ಮದುವೆ ಮತ್ತು ಮೊದಲ ಭೇಟಿಯ ಬಗ್ಗೆ ರೇಖಾ ಅವರನ್ನು ಕೇಳಿದಾಗ, ರೇಖಾ ಆಸಕ್ತಿದಾಯಕ ಉತ್ತರವನ್ನು ನೀಡಿದರು. ಈ ಬಗ್ಗೆ ಮಾತನಾಡಿರುವ ರೇಖಾ, 'ನಾನು ನನ್ನ ವೃತ್ತಿಜೀವನದಲ್ಲಿ ಆ ಹಂತದಲ್ಲಿಯೇ ಇದ್ದೆ. ನಾನು ಮದುವೆಯಾಗಬೇಕು ಎಂದು ಭಾವಿಸಿದ್ದೆ. ನಾವು ಎಲ್ಲಿ ಭೇಟಿಯಾದೆವು, ಯಾವಾಗ ಭೇಟಿಯಾದೆವು, ಹೇಗೆ ಭೇಟಿಯಾದೆವು ಎಂಬುದು ಮುಖ್ಯವಲ್ಲ. ನಾವು ಭೇಟಿಯಾಗಿದ್ದೆವು. ನಾವು ಮದುವೆಯಾಗಿದ್ದೆವು ಎಂಬುದು ಮುಖ್ಯವಾಗಿತ್ತು. ಈ ಮದುವೆಯಿಂದ ನಾನು ಏನು ಕಲಿತೆ ಅಥವಾ ಕಳೆದುಕೊಂಡಿದ್ದೆ ಎಂದು ತಿಳಿಯುವುದು ಮುಖ್ಯ ಎಂದಿದ್ದರು.

ಬಹಳ ಆಘಾತಕಾರಿ ವಿಷಯವೆಂದರೆ ಒಂದು ಹಂತದಲ್ಲಿ ರೇಖಾ ಪತಿ ಮುಖೇಶ್ ನೇಣು ಬಿಗಿದುಕೊಂಡು ತನ್ನ ಜೀವನವನ್ನೇ ಅಂತ್ಯಗೊಳಿಸಿದರು. ವ್ಯಾಪಾರದಲ್ಲಿ ನಷ್ಟ ಮತ್ತು ಅವರ ವೈವಾಹಿಕ ಜೀವನದಲ್ಲಿ (Married Life) ನಡೆಯುತ್ತಿರುವ ಸಮಸ್ಯೆಗಳಿಂದ ಆ ಸಮಯದಲ್ಲಿ ಅವರು ಒತ್ತಡದಲ್ಲಿದ್ದರು ಎಂದು ಹೇಳಲಾಗುತ್ತಿತ್ತು.

ಆದರೆ ಈ ಪುಸ್ತಕದ ಪ್ರಕಾರ ಮುಖೇಶ್‌ ಸಾವಿಗೆ ರೇಖಾ ತನ್ನ ಸೆಕ್ರೆಟರಿ ಜೊತೆಗೆ ಇಟ್ಟುಕೊಂಡಿದ್ದ ರಿಲೇಶನ್‌ಶಿಪ್ ಬಹುಮುಖ್ಯ ಕಾರಣ. ಈ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಳ್ಳಬೇಕಾಯ್ತು ಅಂತ ಕೃತಿಯಲ್ಲಿ ವಿವರಿಸಲಾಗಿದೆ.

ನಾದಮಯ ಈ ಲೋಕವೆಲ್ಲ.. ಅನ್ನುತ್ತಿರುವ ಅಣ್ಣಾವ್ರು, ಪಾರ್ವತಮ್ಮ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?