ನಟಿ ರಾಖಿ ಸಾವಂತ್ ಪಾಕ್ ಸೊಸೆಯಾಗೋ ಕನಸು ಭಗ್ನ; ಮದುವೆ ಪ್ರಸ್ತಾಪ ತಿರಸ್ಕರಿಸಿದ ಪಾಕಿಸ್ತಾನಿ ನಟ ಡೋಡಿ ಖಾನ್!

Published : Jan 31, 2025, 11:41 AM IST
ನಟಿ ರಾಖಿ ಸಾವಂತ್ ಪಾಕ್ ಸೊಸೆಯಾಗೋ ಕನಸು ಭಗ್ನ; ಮದುವೆ ಪ್ರಸ್ತಾಪ ತಿರಸ್ಕರಿಸಿದ ಪಾಕಿಸ್ತಾನಿ ನಟ ಡೋಡಿ ಖಾನ್!

ಸಾರಾಂಶ

ಬಾಲಿವುಡ್ ನಟಿ ರಾಖಿ ಸಾವಂತ್ ಅವರ ಮೂರನೇ ಮದುವೆಯ ಕನಸಿಗೆ ತಣ್ಣೀರೆರಚಿದ ಪಾಕಿಸ್ತಾನಿ ನಟ ಡೋಡಿ ಖಾನ್. ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿ, ರಾಖಿಯನ್ನು ಸ್ನೇಹಿತೆಯಾಗಿ ಉಳಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಐಟಂ ಸಾಂಗ್‌ಗೆ ಬಹುಬೇಡಿಕೆ ಡ್ಯಾನ್ಸರ್ ಕಂ ನಟಿ ಆಗಿದ್ದ ರಾಖಿ ಸಾವಂತ್ ಈಗಾಗಲೇ ಎರಡು ಮದುವೆ ಮಾಡಿಕೊಂಡು, ಇಬ್ಬರಿಗೂ ಸೋಡಾ ಚೀಟಿ ಕೊಟ್ಟು, ಮೂರನೇ ಮದುವೆಗೆ ಸಜ್ಜಾಗಿದ್ದಾರೆ. ಅಂದಹಾಗೆ ಕರ್ನಾಟಕದ ಮೈಸೂರು ಹುಡುಗನನ್ನು ಮದುವೆ ಮಾಡಿಕೊಂಡು ಮೈಸೂರು ಸೊಸೆಯಾಗಿದ್ದ ರಾಖಿ ಸಾವಂತ್ ಅವರಿಗೂ ಡಿವೋರ್ಸ್ ಕೊಟ್ಟು ಪಾಕಿಸ್ತಾನದ ಸೊಸೆ ಆಗುವುದಕ್ಕೆ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ, ಇದೀಗ ಪಾಕಿಸ್ತಾನಿ ಪ್ರೇಮಿ ಮದುವೆಗೂ ಮೊದಲೇ ಆಥನಿಗೆ ಬಂದಿದ್ದ ಮೆಸೇಜ್‌ಗಳನ್ನು ನೋಡುವೆ ಮದುವೆಗೆ ಫುಲ್‌ಸ್ಟಾಪ್ ಇಟ್ಟಿದ್ದಾನೆ.

ಹೌದು, ಬಾಲಿವುಡ್ ನಟಿ ರಾಖಿ ಸಾವಂತ್‌ಗೆ ಈಗ ಪಾಕಿಸ್ತಾನದ ಸೊಸೆ ಆಗುವ ಕನಸು ನನಸಾಗೋ ಲಕ್ಷಣಗಳು ಕಾಣಿಸುತ್ತಿಲ್ಲ. ಏಕೆಂದರೆ ರಾಖಿ ಜೊತೆ ಮದುವೆ ಆಗುತ್ತೀನಿ ಎಂದು ಪ್ರೇಮ ನಿವೇದನೆ ಹಾಗೂ ಮದುವೆ ಪ್ರಪೋಸಲ್ ಮಾಡಿದ್ದ ಪಾಕಿಸ್ತಾನಿ ನಟ ಈಗ ಯೂಟರ್ನ್ ಹೊಡೆದಿದ್ದಾನೆ. ಪಾಕಿಸ್ತಾನಿ ನಟ ಡೋಡಿ ಖಾನ್ ವಿಡಿಯೋ ಒಂದರಲ್ಲಿ ರಾಖಿ ಮದುವೆ ಪ್ರಪೋಸಲ್ ರಿಜೆಕ್ಟ್ ಮಾಡಿ, ಫ್ರೆಂಡ್‌ಜೋನ್ (ನಾವಿಬ್ಬರೂ ಸ್ನೇಹಿತರಾಗಿರೋಣ) ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. ಈ ಮೂಲಕ ಎರಡು ಮದುವೆ ಆಗಿದ್ದರೂ ಅವರೊಂದಿಗೆ ಜೀವನ ಮಾಡದೇ ತಂಟೆ, ತಕರಾರು ಮಾಡಿಕೊಂಡು, ಹಾದಿ-ಬೀದಿ ರಂಪ ಮಾಡುತ್ತಾ ಕೋರ್ಟ್ ಮೆಟ್ಟಿಲೇರಿ ಡಿವೋರ್ಸ್ ಪಡೆದಿದ್ದ  ರಾಖಿ ಸಾವಂತ್‌ಗೆ ಇದೀಗ ಮೂರನೇ ಮದುವೆ ಕನಸು ಕನಸಾಗಿಯೇ ಉಳಿದಿದೆ.

ಇದನ್ನೂ ಓದಿ: ಮೂರನೇ ಮದುವೆಗೆ ಸಜ್ಜಾದ ರಾಖಿ ಸಾವಂತ್, ಗಂಡನಾಗೋನು ಪಾಕಿಸ್ತಾನಿ ಅಂತೆ?

ಡೋಡಿ ಖಾನ್ ಯೂಟರ್ನ್: ಪಾಕಿಸ್ತಾನಿ ನಟ ಡೋಡಿ ಖಾನ್ ಹೊಸ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ ಮದುವೆ ಬಗ್ಗೆ ಹೊಸ ನಿರ್ಧಾರ ತಿಳಿಸಿದ್ದಾರೆ. ಬಾಲಿವುಡ್ ನಟಿ ರಾಖಿ ಜೊತೆ ಮದುವೆ ಆಗಲ್ಲ ಅಂತ ಹೇಳಿದ್ದಾರೆ. ರಾಖಿ ಸಾವಂತ್ ತಮ್ಮ ಒಳ್ಳೆ ಗೆಳತಿ ಅಂತ ಹೇಳಿ ಮದುವೆ ಮುರಿದುಕೊಂಡಿದ್ದಾರೆ. ಈ ಮೂಲಕ ಮದುವೆ ಪ್ರಪೋಸಲ್ ತಿರಸ್ಕರಿಸಿ ರಾಖಿಯನ್ನು ಫ್ರೆಂಡ್‌ಶಿಪ್ ಜೋನ್‌ಗೆ ತಳ್ಳಿದ್ದಾರೆ. ಪಾಕಿಸ್ತಾನಿ ಸೊಸೆ ಆಗುತ್ತೀನಿ ಎಂದು ಕನಸು ಕಂಡಿದ್ದ ರಾಖಿಗೆ ಇದೀಗ ಭಾರೀ ನಿರಾಸೆ ಉಂಟಾಗಿದೆ.

ಇದೇ ಡೋಡಿ ಖಾನ್ 'ರಾಖಿಗೆ ಪ್ರಪೋಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ನಾನು ಅವರನ್ನ ಚೆನ್ನಾಗಿ ತಿಳ್ಕೊಂಡಿದ್ದೀನಿ. ಅವರು ದೇವರನ್ನ ನಂಬುವವರು. ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿದ್ದಾರೆ. ತಂದೆ-ತಾಯಿ ಕಳ್ಕೊಂಡಿದ್ದಾರೆ. ಇಸ್ಲಾಂ ಧರ್ಮ ಸ್ವೀಕಾರ ಮಾಡಿದ್ದಾರೆ, ಉಮ್ರಾ ಮಾಡಿದ್ದಾರೆ. ಅದರಲ್ಲಿಯೂ ರಾಖಿ ಇಸ್ಲಾಂ ಧರ್ಮಕ್ಕೆ ಮತಾಂತರ ಆದ ನಂತರ ಫಾತಿಮಾ ಅಂತ ಹೆಸರಿಟ್ಟುಕೊಂಡಿದ್ದಾರೆ. ಇದೆಲ್ಲಾ ನನಗೆ ಇಷ್ಟ ಆಯ್ತು, ಅದಕ್ಕೆ ಪ್ರಪೋಸ್ ಮಾಡಿದೆ' ಎಂದು ಡೋಡಿ ಖಾನ್ ಹೇಳಿಕೊಂಡಿದ್ದರು.

ಇದನ್ನೂ ಓದಿ: ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಾಗಿ ಜೀವನ ಮಾಡ್ತಿದ್ದೇನೆ: ಭಾರತದಿಂದ ಓಡಿ ಹೋದ ರಾಖಿ ಸಾವಂತ್ ಕಣ್ಣೀರು!

ಮದುವೆ ಯಾಕೆ ಬೇಡ: 'ನಾನು ರಾಖಿ ಮದುವೆ ಮಾಡಿಕೊಳ್ಳುವುದು ಜನರಿಗೆ ಇದು ಸರಿ ಅನ್ಸಿಲ್ಲ. ನನಗೆ ಬಂದಿರೋ ಮೆಸೇಜ್, ವಿಡಿಯೋ ನೋಡಿ ನಾನು ತಡ್ಕೊಳ್ಳೋಕೆ ಆಗ್ತಿಲ್ಲ. ರಾಖಿ ನೀವು ನನ್ನ ಒಳ್ಳೆ ಫ್ರೆಂಡ್, ಯಾವಾಗ್ಲೂ ಹಾಗೆ ಇರ್ತೀರಿ. ನೂವು ಡೋಡಿ ಖಾನ್ ಹೆಂಡತಿ ಆಗೋಕೆ ಆಗಿಲ್ಲ, ಆದರೆ ಪಾಕಿಸ್ತಾನದ ಸೊಸೆ ಮಾತ್ರ ಆಗ್ತೀರಿ. ನಾನೇ ನಿಮ್ಮ ಮದುವೆ ಮಾಡ್ತೀನಿ, ಪಾಕಿಸ್ತಾನದಲ್ಲಿ ನನ್ನ ಯಾವದಾದ್ರೂ ಗೆಳೆಯನ ಜೊತೆ ಮದುವೆ ಮಾಡ್ತೀನಿ' ಅಂತ ಹೇಳಿದ್ದಾರೆ. ಡೋಡಿ ವಿಡಿಯೋಗೆ ರಾಖಿ ಕಾಮೆಂಟ್ ಮಾಡಿ, ಬೇಜಾರಾಗಿದೆ, ಅಳು ಬರ್ತಿದೆ ಅಂತ ಎಮೋಜಿ ಹಾಕಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!
ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌