ಬಾತ್‌ಟಬ್‍‌ನಲ್ಲಿ ಲಾಲಿ‌ಪಾಪ್ ಹಿಡಿದ ಪಿಗ್ಗಿ ಫೋಟೋ ವೈರಲ್!

Published : Mar 04, 2019, 03:40 PM IST
ಬಾತ್‌ಟಬ್‍‌ನಲ್ಲಿ ಲಾಲಿ‌ಪಾಪ್ ಹಿಡಿದ ಪಿಗ್ಗಿ ಫೋಟೋ  ವೈರಲ್!

ಸಾರಾಂಶ

ಮದುವೆಯಾದಾಗಿನಿಂದಲೂ ಪ್ರಿಯಾಂಕಾ ಚೋಪ್ರಾ ಅವರದ್ದು ಬರೀ ಮದುವೆಯದ್ದೇ ಸುದ್ದಿ. ಪತಿಯೊಂದಿಗೆ ಕಾಣಿಸಿಕೊಂಡ ಫೋಟೋಗಳೇ ಹರಿದಾಡುತ್ತಿವೆ. ಆದರೀಗ ಪಿಗ್ಗಿ ಬಾತ್‌ಟಬ್‌ನಲ್ಲಿ ಲಾಲಿ ಪಾಪ್ ಹಿಡಿದ ಫೋಟೋವೊಂದು ವೈರಲ್ ಆಗಿದೆ. ಅಷ್ಟಕ್ಕೂ ಆಗಿದ್ದೇನು?'

ಎಷ್ಯಾದ ಮೋಸ್ಟ್ ಡಿಸೈರೇಬಲ್ ವುಮೆನ್ ಪ್ರಿಯಾಂಕಾ ಚೋಪ್ರಾ ಬಾತ್‌ಟಬ್‌ನಲ್ಲಿ ಲಾಲಿ ಪಾಪ್ ಹಿಡಿದು ಫೋಸ್ ನೀಡಿದ್ದಾರೆ. ಇದೀಗ ಸೋಷಿಯಲ್ಲಿ ಮೀಡಿಯಾದಲ್ಲಿ ಈ ಪೋಟೋ ಸದ್ದು ಮಾಡುತ್ತಿದೆ. ಏಕೆ ಈ ಲುಕ್?

ಬಾಲಿವುಡ್ ಬ್ಯುಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾಗಿಂತ, ಪತಿಯೊಂದಿಗೇ ಕಾಣಿಸಿಕೊಳ್ಳುತ್ತಿರುವುದು ಹೆಚ್ಚು. ಬರೀ ಅದೇ ಸುದ್ದಿ. ಆದರೆ ಈ ಸಲ ಗಂಡನೊಂದಿಗೆ ಸೇರಿಕೊಂಡು, ಫ್ಯಾನ್ಸ್‌ಗೊಂದು ಸರ್ಪ್ರೈಸ್ ನೀಡಿದ್ದಾರೆ.

 

ಪ್ರಿಯಾಂಕ ಪತಿ ನಿಕ್ ಜೊನಾಸ್ ತಮ್ಮ ಜೊನಾಸ್ ಬ್ರದರ್ಸ್ ತಂಡದಿಂದ ‘ಸಕ್ಕರ್’ ಎಂಬ ಹಾಡೊಂದನ್ನು ಮಾಡಿದ್ದಾರೆ. ಈ ಹಾಡಿನ ಆಲ್ಬಮ್‌ನಲ್ಲಿ ಪಿಗ್ಗಿ ಕಾಣಿಸಿಕೊಂಡಿದ್ದು, ಅದರದ್ದೇ ಈ ಬಾತ್‌ಟಬ್ ಫೋಟೋ ಇದು.

ಬಾತ್‌ಟಬ್ ಫೋಟೋವನ್ನು ಸ್ವತಃ ಪ್ರಿಯಾಂಕಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡು, ‘ಗ್ಲಾಮ್ ಬಾಟ್ಸ್... ಎಸ್ ಪ್ಲೀಸ್ ..#Jonasbrothers are back! #Sucker’ ಎಂದು ಬರೆದುಕೊಂಡಿದ್ದಾರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪಡೆಯಪ್ಪ 'ನೀಲಾಂಬರಿ'ಗೆ ಮೊದಲ ಆಯ್ಕೆ ಐಶ್ವರ್ಯಾ ರೈ; ಶ್ರೀದೇವಿ-ಮಾಧುರಿಯನ್ನೂ ರಮ್ಯಾ ಕೃಷ್ಣನ್ ಬದಿಗೆ ಸರಿಸಿದ್ದು ಹೇಗೆ?
ಮಹೇಶ್ ಬಾಬು ಯಾರೆಂದು ನನಗೆ ಗೊತ್ತಿಲ್ಲ, ಪ್ರಭಾಸ್ ಬಿಟ್ಟರೆ ಎಲ್ಲರೂ ಕುಳ್ಳರು.. ಸ್ಟಾರ್ ನಟಿಯ ಹೇಳಿಕೆ ವೈರಲ್!