
'ದಸ್ ಕಹಾನಿಯಾ', 'ಬಚ್ನಾ ಏ ಹಸೀನೋ', 'ಜೋಕರ್' ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಮಿನಿಷಾ ಲಾಂಬಾ ಚಿತ್ರರಂಗದಿಂದ ದೂರ ಉಳಿದರೂ ತನ್ನ ಜರ್ನಿ ಮರೆತಿಲ್ಲ. ಖಾಲಿ ಕೈಯಲ್ಲಿ ಮುಂಬೈಗೆ ಬಂದಾಗ ತನ್ನ ವಿರುದ್ಧ ಕೇಳಿ ಬಂತ ಆರೋಪದ ಬಗ್ಗೆ ಮಾತನಾಡಿದ್ದಾರೆ.
2018 ರಿಂದ ಚಿತ್ರರಂಗದಿಂದ ದೂರವಿರುವ ಮಿನಿಷಾ ಹುಟ್ಟಿ ಬೆಳೆದದ್ದು ನವದೆಹಲ್ಲಿಯಲ್ಲಿ. ನಟಿಯಾಗಬೇಕು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕು ಎಂದು ಮುಂಬೈಗೆ ಬಂದವರಿಗೆ ಒಂದೇ ತಿಂಗಳಲ್ಲಿ ದೊಡ್ಡ ಅವಮಾನವಾಗಿದೆ. 'ನಾನು ಮುಂಬೈಗೆ ಬಂದಾಗ ಖಾಲಿ ಕೈಯಲ್ಲಿದ್ದೆ. ಏನನ್ನೂ ಖರೀದಿ ಮಾಡುವ ಶಕ್ತಿ ನನಗೆ ಇರಲಿಲ್ಲ. ಆಗ 5 ಸಾವಿರ ರೂಪಾಯಿ ಕೊಟ್ಟು ಪಿಜಿಯಲ್ಲಿದ್ದೆ. ಆ ಸಮಯದಲ್ಲಿ ನಾನು ಕಳ್ಳತನ ಮಾಡಿದೆ ಎಂದು ಪಿಜಿ ಓನರ್ ಆರೋಪ ಮಾಡಿದರು. ನನ್ನ ಮರ್ಯಾದೆಗೆ ಅಂಜಿ ಪಿಜಿ ಖಾಲಿ ಮಾಡಿದೆ. ಆ ನಂತರ 7000 ರೂಪಾಯಿಗೆ ರೂಮ್‌ವೊಂದನ್ನು ಬಾಡಿಗೆಗೆ ಪಡೆದೆ. ಆ ರೂಮ್ ಕೂಡ ತುಂಬಾ ಚಿಕ್ಕದಾಗಿತ್ತು,' ಎಂದು ಮಿನಿಷಾ ಹೇಳಿದ್ದಾರೆ.
'ಆರಂಭದಲ್ಲಿ ನಮಗೆ Ego ಮತ್ತು Pride ಮುಖ್ಯವಾಗುತ್ತದೆ. ನಾನು ಕಳ್ಳತನ ಮಾಡಿದೆ ಎಂಬ ಆರೋಪ ಮಾಡಿದ್ದಕ್ಕೆ ಸಹಜವಾಗಿಯೇ ನೊಂದಿದ್ದೆ. ಆಕೆಗೂ ಗೊತ್ತಿತ್ತು, ನಾನು ಅಲ್ಲಿ ಉಳಿಯುವುದಿಲ್ಲ ಎಂದು. ಬಟ್ ಕೆಲವು ದಿನಗಳ ನಂತರ ಆಕೆಯ ಕಬೋರ್ಡ್‌ನಲ್ಲಿ ಕಳೆದು ಹೋದ ಹಣ ಮರಳಿ ಸಿಕ್ಕಿತ್ತು ಎಂದರು. ಆಮೇಲೆ ಕ್ಷಮೆ ಕೇಳಿದರು,' ಎಂದು ಮಿನಿಷಾ ಮಾತನಾಡಿದ್ದಾರೆ.
ಅಲ್ಲು ಅರ್ಜುನ್ ಪತ್ನಿ ಸ್ನೇಹಾಗೆ 40 ಲಕ್ಷ ಫಾಲೋವರ್ಸ್!
2015ರಲ್ಲಿ ಮಿನಿಷಾ ರಯಾನ್‌ರನ್ನು ಮದುವೆಯಾದರು. ಜೂಹು ನೈಟ್ ಕ್ಲಬ್ ಹೊಂದಿರುವ ರಯಾನ್ ಪೂಜಾ ಬೇಡಿ ಅವರ ಸಹೋದರ. ಆದೇ ಕಳೆದ ವರ್ಷ ಆಗಸ್ಟ್‌ನಲ್ಲಿ ಇಬ್ಬರೂ ವೈಯಕ್ತಿಕ ಕಾರಣಗಳಿಂದ ವಿಚ್ಚೇದನ ಪಡೆದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.