'ಭಾರತವೆಂಬ ಹೆಸರು ಈ ದೇಶಕ್ಕೆ ಹೆಚ್ಚು ಹೊಂದಿಕೆಯಾಗುತ್ತದೆ. ಇಲ್ಲಿನ ಸಂಸ್ಕೃತಿ, ಪರಂಪರೆಗೆ ಭಾರತ ಹೆಸರು ಹೆಚ್ಚು ಸೂಕ್ತ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಹೀಗೇ ಎಲ್ಲರೂ ಯೋಚಿಸಬೇಕೆಂದೇನೂ ಇಲ್ಲ. ಏನೆಂದು ಕರೆಯಬೇಕು ಎಂಬುದು ಅವರವರ ವೈಯಕ್ತಿಕ ಅಭಿಪ್ರಾಯ' ಎಂದಿದ್ದಾರೆ ನಟಿ ಕಂಗನಾ.
ದೇಶದಲ್ಲಿ ಇತ್ತೀಚಿನ ಜೋರಾಗಿರುವ ಚರ್ಚೆ ' ದೇಶವನ್ನು 'ಭಾರತ' ಅಥವಾ 'ಇಂಡಿಯಾ' ಎಂಬ ಬಗ್ಗೆ ಬಾಲಿವುಡ್ ಬೆಡಗಿ ಕಂಗನಾ ರಣಾವತ್ ಮಾತನಾಡಿದ್ದಾರೆ. 'ಯಾರೆಲ್ಲ ಏನು ಕರೆಯುತ್ತಾರೋ ಅದು ಅವರವರ ವೈಯಕ್ತಿಕ ವಿಚಾರ' ಎಂದು ಕಂಗನಾ ರಣಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಚ್ಚರಿ ಎಂಬಂತೆ ಸ್ವಲ್ಪ ಕಾಲದ ಮೊದಲು ಇದೇ ಕಂಗನಾ 'ನಮ್ಮ ದೇಶವನ್ನು 'ಭಾರತ' ಎಂದು ಕರೆಯಬೇಕು ಎನ್ನುತ್ತಿದ್ದರು. ಈ ಮೊದಲು ಭಾರತೀಯ ಸಂಸ್ಕೃತಿಯಂತೆ ಸಿಂಗಾರ ಮಾಡಿಕೊಳ್ಳುವುದನ್ನು ವಿರೋಧಿಸುತ್ತಿದ್ದ ಕಂಗನಾ, ಇತ್ತೀಚೆಗೆ 'ಸೀರೆ' ಧರಿಸುವ ಮೂಲಕ ಈ ದೇಶದ ಸಂಸ್ಕೃತಿ ಅನುಸರಿಸುತ್ತಿದ್ದಾರೆ ಎನ್ನಬಹುದು.
'ಭಾರತವೆಂಬ ಹೆಸರು ಈ ದೇಶಕ್ಕೆ ಹೆಚ್ಚು ಹೊಂದಿಕೆಯಾಗುತ್ತದೆ. ಇಲ್ಲಿನ ಸಂಸ್ಕೃತಿ, ಪರಂಪರೆಗೆ ಭಾರತ ಎನ್ನುವ ಹೆಸರು ಹೆಚ್ಚು ಸೂಕ್ತ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಹೀಗೇ ಎಲ್ಲರೂ ಯೋಚಿಸಬೇಕೆಂದೇನೂ ಇಲ್ಲ. ಏಕೆಂದರೆ, ಇಂದಿನ ದಿನಗಳಲ್ಲಿ ಭಾರತದಲ್ಲಿ ಅವರವರಿಗೆ ಬೇಕಾದಂತೆ ಬದುಕುವುದು ಹೆಚ್ಚು ಜನಪ್ರಿಯವಾಗುತ್ತಿದೆ. ಆದ್ದರಿಂದ 'ಭಾರತ'ವನ್ನು ಇಂಡಿಯಾ ಎಂದು ಕರೆಯಬೇಕೋ ಬೇಡವೋ ಎಂಬುದನ್ನು ಪ್ರತಿಯೊಬ್ಬರೂ ವೈಯಕ್ತಿಕವಾಗಿ ನಿರ್ಧರಿಸುವುದು ಒಳ್ಳೆಯದು ಎಂದಿದ್ದಾರೆ ನಟಿ ಕಂಗನಾ.
'ಭಾರತ ಅಥವಾ ಇಂಡಿಯಾ' ಎಂಬುದು ಇತ್ತೀಚೆಗೆ ಹುಟ್ಟಿಕೊಂಡ ಚರ್ಚೆ. ಆದರೆ ಈ ಬಗ್ಗೆ ಬಹಳ ವರ್ಷಗಳಖ ಹಿಂದೆಯೇ ನಟಿ ಕಂಗನಾ ರಣಾವತ್ ಬಹಳಷ್ಟು ಬಾರಿ ಮಾತನಾಡಿದ್ದಾರೆ. ಒಮ್ಮೆ ಈ ಮೊದಲು ' ನನ್ನ ದೇಶ ಭಾರತ ಈ ಮೊದಲು ಬಡ ದೇಶವೆಂದ ಹಣೆಪಟ್ಟಿ ಹೊತ್ತುಕೊಂಡಿತ್ತು. ಆಗ ನಾನು ಭಾರತೀಯಳು ಎಂದು ಜಗತ್ತಿನ ಮುಂದೆ ತೋರಿಸಿಕೊಳ್ಳಬಾರದು ಎಂದು ಶಾರ್ಟ್ ಹಾಗೂ ಪ್ಯಾಂಟ್-ಶರ್ಟ್ ಧರಿಸಿ ಓಡಾಡುತ್ತಿದ್ದೆ. ನನಗೆ ನನ್ನ ದೇಶದ ಸಂಸ್ಕೃತಿ ಬಿಂಬಿಸುವ ಡ್ರೆಸ್ ಬಳಸುವ ಬಗ್ಗೆ ಕೀಳರಿಮೆ ಇತ್ತು. ಆದರೆ ಈಗ ಭಾರತ ದೇಶ ಜಗತ್ತಿನಲ್ಲಿ ತನ್ನದೇ ಆಗ ವಿಶೇಷ ಘನತೆ ಹೊಂದಿದೆ. ಹೀಗಾಗಿ ನಾನು ಈಗ ಭಾರತದ ಪರಂಪರೆಯಂತೆ 'ಸೀರೆ' ಧರಿಸುವುದನ್ನು ಇಷ್ಟಪಡುತ್ತೇನೆ.
ಜಗತ್ತಿನ ಹಳೆಯ ಡಿಕ್ಷನರಿಯಲ್ಲಿ ಇಂಡಿಯಾ ಪದದ ಅರ್ಥ 'ಸ್ಲೇವ್ ಅಂದರೆ ಗುಲಾಮ' ಎಂಬುದಾಗಿ ಇತ್ತು. ಅದು ಇತ್ತೀಚೆಗೆ ಬದಲಾಗಿದೆ. ರೆಡ್ ಇಂಡಿಯನ್ಸ್ ಈ ದೇಶವನ್ನು 'ಇಂಡಿಯಾ' ಎಂದು ಕರೆದಿದ್ದರು. ಅವರಿಗೆ ಇದನ್ನು 'ಗುಲಾಮ'ರ ದೇಶ ಎಂದೇ ಕರೆಯುವ ಉದ್ದೇಶ ಇತ್ತು. ಆದರೆ ಇಲ್ಲಿನ ಜನರು ಈ ದೇಶವನ್ನು ಯಾವತ್ತೂ 'ಭರತ ಖಂಡ, 'ಭಾರತ ದೇಶ' ಎಂದು ಕರೆಯುತ್ತಿದ್ದಾರೆ' ಎಂದಿದ್ದಾರೆ ನಟಿ ಕಂಗನಾ ರಣಾವತ್.